ಹೈದರಾಬಾದ್: ಗಿನ್ನೆಸ್ ವಿಶ್ವ ದಾಖಲೆಯಿಂದ ಪ್ರಮಾಣೀಕರಿಸಲ್ಪಟ್ಟಿರುವ ವಿಶ್ವದ ಏಕೈಕ ಅತಿದೊಡ್ಡ ಚಲನಚಿತ್ರ ನಗರಿ ರಾಮೋಜಿ ಫಿಲಂ ಸಿಟಿ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆ(IRCTC) ಹಾಗೂ ರಾಮೋಜಿ ಫಿಲಂ ಸಿಟಿ ನಡುವೆ ಒಪ್ಪಂದವಾಗಿದೆ.
ಭಾರತೀಯ ರೈಲ್ವೆ(IRCTC) ಮೂಲಕ ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ ರಾಮೋಜಿ ಫಿಲಂ(RFC) ಸಿಟಿಯ ಪ್ಯಾಕೇಜ್‌ಗಳ ಬಗ್ಗೆ ದೇಶಾದ್ಯಂತ ಪ್ರವಾಸೋದ್ಯಮ ಸಂಸ್ಥೆಗಳಿಗೆ ಮಾಹಿತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ರಾಮೋಜಿ ಫಿಲಂ ಸಿಟಿ ಎಂಡಿ ವಿಜಯೇಶ್ವರಿ ಹಾಗೂ ಐಆರ್‌ಸಿಟಿಸಿ ದಕ್ಷಿಣ ಮಧ್ಯ ವಲಯ ಜಿಎಂ ನರಸಿಂಗ್ ರಾವ್ ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಮಾತನಾಡಿರುವ ಎಂಡಿ ವಿಜಯೇಶ್ವರಿ, ಈ ಒಡಂಬಡಿಕೆ ಪ್ರವಾಸಿಗರನ್ನು ಇನ್ನಷ್ಟು ಬೇಗ ತಲುಪಲು ಸಹಾಯವಾಗುತ್ತದೆ ಎಂದರು.
ಜಿಎಂ ನರಸಿಂಗ್ ರಾವ್ ಮಾತನಾಡಿ, ರಾಮೋಜಿ ಫಿಲಂ ಸಿಟಿ ಮತ್ತು ಐಆರ್‌ಸಿಟಿಸಿಯೊಂದಿಗೆ ಪ್ರವಾಸೋದ್ಯಮ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಆರ್‌ಎಫ್‌ಸಿ ಹಾಗೂ ರೈಲ್ವೆ ಇಲಾಖೆಯಲ್ಲಿನ ಪ್ಯಾಕೇಜ್‌ಗಳ ಬಗ್ಗೆ ಎರಡೂ ವೆಬ್‌ಸೈಟ್‌ಗಳಿಂದ ಮಾಹಿತಿ ನೀಡಲಾಗುವುದು. ಇದು ಪ್ರವಾಸಿಗರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಜೊತೆಗೆ ರಾಮೋಜಿ ಫಿಲಂ ಸಿಟಿಯೊಂದಿಗಿನ ಪಾಲುದಾರಿಕೆ ಗೌರವ ತಂದಿದೆ ಎಂದು ಹೇಳಿದರು.
ರಾಮೋಜಿ ಫಿಲಂ ಸಿಟಿ(RFC) 2 ಸಾವಿರ ಎಕರೆಗಳಷ್ಟು ವಿಸ್ತಾರವಾಗಿದ್ದು, ಸಿನಿ-ಮ್ಯಾಜಿಕ್ ಭೂಮಿ ಎಂದು ಕರೆಯಲ್ಪಡುತ್ತದೆ. ಲೈವ್ ಡ್ಯಾನ್ಸ್, ವೈಲ್ಡ್ ವೆಸ್ಟ್ ಸ್ಟಂಟ್ ಶೋ, ಬ್ಲ್ಯಾಕ್‌ಲೈಟ್ ಶೋ- ಅನಿಮೇಷನ್, ಸ್ಟ್ರೈಕಿಂಗ್ ಗಾರ್ಡನ್ಸ್, ಕ್ಯಾಸ್ಕೇಡಿಂಗ್ ಕಾರಂಜಿ ಇದೆ. ವಿಶ್ವದ ಅತಿದೊಡ್ಡ ಚಲನಚಿತ್ರ ನಗರವೆಂದು ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದು, ಮಿಲಿಯನ್ ಕನಸುಗಳ ತಾಣವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಮನರಂಜನೆಯ ಮಹಾಪೂರ.. Ramoji Film Cityಗೆ ಹರಿದು ಬರುತ್ತಿರುವ ಪ್ರವಾಸಿಗರ ದಂಡು
ರಾಮೋಜಿ ಫಿಲಂ ಸಿಟಿಯಲ್ಲಿ ಅನೇಕ ಚಲನಚಿತ್ರಗಳ ಶೂಟಿಂಗ್ ನಡೆದಿದ್ದು, ಎಲ್ಲ ಅಗತ್ಯ ಮೂಲಸೌಕರ್ಯ ಇಲ್ಲಿ ಸಿಗುತ್ತವೆ. ಜೊತೆಗೆ ಏಕಕಾಲದಲ್ಲಿ ಅನೇಕ ಚಿತ್ರಗಳ ಚಿತ್ರೀಕರಣ ಮಾಡುವ ಸೌಲಭ್ಯವೂ ಇಲ್ಲಿದೆ. ವರ್ಷಕ್ಕೆ ಸುಮಾರು 1.5 ಮಿಲಿಯನ್ ಪ್ರವಾಸಿಗರು ಫಿಲಂ ಸಿಟಿಗೆ ಭೇಟಿ ನೀಡುತ್ತಾರೆ.
ರಾಮೋಜಿ ಫಿಲಂ ಸಿಟಿ ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ: ರಾಮೋಜಿ ಫಿಲಂ ಸಿಟಿ ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿಯೆಂದು 'ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದಿದೆ. ಚಿತ್ರ ನಗರಿಯ ಮನರಂಜನಾ ಸೌಲಭ್ಯಗಳನ್ನು ತಂತ್ರಜ್ಞಾನ, ವಾಸ್ತುಶಿಲ್ಪ ಮತ್ತು ಭೂ ವಿನ್ಯಾಸ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಅಂತಾರಾಷ್ಟ್ರೀಯ ತಜ್ಞರು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಈ ಸುಂದರ ವಿನ್ಯಾಸ ಇಲ್ಲಿನ ಹಿರಿಮೆಯೂ ಹೌದು.
ಸಿನಿಮಾ ಮಂದಿಯ ನೆಚ್ಚಿನ ತಾಣ: ರಾಮೋಜಿ ಫಿಲಂ ಸಿಟಿ ಸಿನೆಮಾ ಮಂದಿಯ ನೆಚ್ಚಿನ ತಾಣ. ಇಲ್ಲಿ ಅದೆಷ್ಟೋ ಸಿನೆಮಾಗಳು ಸುಂದರ ರೂಪ ಪಡೆದಿವೆ. ಸಮಗ್ರ ಚಲನಚಿತ್ರ ನಿರ್ಮಾಣಕ್ಕೆ ಬೇಕಾದ ಮೂಲಸೌಕರ್ಯ ಮತ್ತು ವೃತ್ತಿಪರ ಸೇವೆಗೆ ರಾಮೋಜಿ ಫಿಲಂ ಸಿಟಿ ಹೆಸರುವಾಸಿ. ಯಾವುದೇ ದಿನವಿರಲಿ ಏಕಕಾಲದಲ್ಲಿ ಹಲವು ಸಿನಿಮಾಗಳನ್ನು ಚಿತ್ರೀಕರಣ ಮಾಡುವಂತಹ ಸಾಮರ್ಥ್ಯ ಇರುವ ಚಿತ್ರನಗರಿ ಇದು. ಈ ವಿಶೇಷತೆಗಳನ್ನು ಹೊಂದಿರುವ ರಾಮೋಜಿ ಚಿತ್ರ ನಗರಿಗೆ ವರ್ಷಕ್ಕೆ ಸುಮಾರು 1.5 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ರಾಮೋಜಿ ಫಿಲಂ ಸಿಟಿ ತನ್ನ ವಿಶಾಲ ಮನರಂಜನಾ ಮತ್ತು ಥಿಮ್ಯಾಟಿಕ್ ರಂಜನೀಯತೆಗೆ ಪ್ರಸಿದ್ಧವಾಗಿದೆ. ಅವುಗಳಲ್ಲಿ ಕೆಲವು ಪ್ರಮುಖ ಆಕರ್ಷಣೆಗಳಿವು.