ETV Bharat / bharat

ದೇಶದಲ್ಲಿ ಕೊರೊನಾ ಸಕ್ರಿಯ ಕೇಸ್​ಗಳ ಸಂಖ್ಯೆ 5.40 ಲಕ್ಷಕ್ಕೇರಿಕೆ.. 6.11 ಕೋಟಿ ಮಂದಿಗೆ ಲಸಿಕೆ

ದೇಶದಲ್ಲಿ ನಿನ್ನೆ ಒಂದೇ ದಿನ 56,211 ಹೊಸ ಕೋವಿಡ್​ ಕೇಸ್​ಗಳು ಹಾಗೂ 271 ಸಾವು ವರದಿಯಾಗಿದೆ.

Total number of corona cases, deaths, Vaccination in India
ಆರೋಗ್ಯ ಇಲಾಖೆ ಟ್ವೀಟ್​
author img

By

Published : Mar 30, 2021, 10:19 AM IST

ನವದೆಹಲಿ: ಭಾರತದಲ್ಲಿ ಜನವರಿ 16ರಿಂದ ಈವರೆಗೆ ಒಟ್ಟು 1,66,16,048 ಮಂದಿಗೆ ಕೋವಿಡ್​ ಲಸಿಕೆ ನೀಡಲಾಗಿದೆ. ಏಪ್ರಿಲ್​ 1ರಿಂದ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್​ ಹಾಕಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 56,211 ಹೊಸ ಕೋವಿಡ್​ ಕೇಸ್​ಗಳು ಹಾಗೂ 271 ಸಾವು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,20,95,855 ಹಾಗೂ ಮೃತರ ಸಂಖ್ಯೆ 1,62,114ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 1,13,93,021 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಆದರೆ, ಹೊಸ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ 5,40,720ಕ್ಕೆ ಹೆಚ್ಚಳವಾಗಿದೆ.

Total number of corona cases, deaths, Vaccination in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಮಾರ್ಚ್​​ 29ರ ವರೆಗೆ 24 ಕೋಟಿಗೂ ಹೆಚ್ಚು (24,26,50,025) ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,85,864 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.