ETV Bharat / bharat

ದೇಶದಲ್ಲಿ ನಿನ್ನೆ 68 ಸಾವಿರ ಪ್ರಕರಣ​, 291 ಸಾವು.. ಒಟ್ಟು 6 ಕೋಟಿ ಮಂದಿಗೆ ಲಸಿಕೆ - ಕೊರೊನಾ ಲಸಿಕೆ

ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,20,39,644, ಸಾವಿನ ಸಂಖ್ಯೆ 1,61,843 ಹಾಗೂ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 5,21,808ಕ್ಕೆ ಏರಿಕೆಯಾಗಿದೆ.

Covid vaccine
ಭಾರತದ ಕೊರೊನಾ ಹೋರಾಟ
author img

By

Published : Mar 29, 2021, 10:29 AM IST

Updated : Mar 29, 2021, 11:31 AM IST

ನವದೆಹಲಿ: ಲಸಿಕೆ ಬಂದಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಭಾರತದಲ್ಲಿ ಮತ್ತೆ ಕೋವಿಡ್​ ಆರ್ಭಟಿಸುತ್ತಿದೆ. ಭಾನುವಾರ ಒಂದೇ ದಿನದಲ್ಲಿ 68,020 ಸೋಂಕಿತರು ಪತ್ತೆಯಾಗಿದ್ದು, 291 ಜನರನ್ನು ವೈರಸ್​ ಬಲಿ ಪಡೆದಿದೆ.

ಕರ್ನಾಟಕದ್ದೂ ಸಿಂಹಪಾಲು

ಹೊಸ ಕೇಸ್​ಗಳ ಪೈಕಿ ಶೇ.84.5ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ಕೇರಳ, ತಮಿಳುನಾಡು ಮತ್ತು ಛತ್ತೀಸ್​ಗಢ - ಈ 8 ರಾಜ್ಯಗಳಲ್ಲೇ ವರದಿಯಾಗಿವೆ. ಶೇ.80ರಷ್ಟು ಸಕ್ರಿಯ ಪ್ರಕರಣಗಳು ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ ಮತ್ತು ಛತ್ತೀಸ್​ಗಢ ರಾಜ್ಯಗಳಲ್ಲಿವೆ.

Total number of corona cases, deaths, Vaccination in India
8 ರಾಜ್ಯಗಳಲ್ಲಿ ಶೇ.84.5ರಷ್ಟು ಹೊಸ ಕೇಸ್​ಗಳು ಪತ್ತೆ

ದೇಶದಲ್ಲೀಗ ಕೊರೊನಾ ಪ್ರಕರಣಗಳ ಸಂಖ್ಯೆ 1,20,39,644, ಸಾವಿನ ಸಂಖ್ಯೆ 1,61,843 ಹಾಗೂ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 5,21,808ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,13,55,993 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಆರು ಕೋಟಿ ಮಂದಿಗೆ ಲಸಿಕೆ

ದೇಶಾದ್ಯಂತ 2ನೇ ಹಂತದ ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನ ನಡೆಯುತ್ತಿದ್ದು, ಜನವರಿ 16 ರಿಂದ ಈವರೆಗೆ ಒಟ್ಟು 6,05,30,435 ಮಂದಿಗೆ ಲಸಿಕೆ ನೀಡಲಾಗಿದೆ. ನಿಮ್ಮ ಸರದಿ ಬಂದಾಗ ತಪ್ಪದೇ ವ್ಯಾಕ್ಸಿನ್​ ಹಾಕಿಸಿಕೊಳ್ಳಿ. ನಮ್ಮ ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿ. ಎರಡು ಡೋಸ್​ಗಳನ್ನು ಪಡೆಯುವವರೆಗೂ ಮತ್ತು ಪಡೆದ ಮೇಲೂ ಕೋವಿಡ್​ ನಿಯಮ ಪಾಲಿಸಲು ಮರೆಯದಿರಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿ, ಎಚ್ಚರಿಕೆ ನೀಡುತ್ತಲೇ ಇದೆ.

Covid vaccine
ಭಾರತದ ಕೊರೊನಾ ಹೋರಾಟ

24 ಕೋಟಿ ಜನರಿಗೆ ಕೋವಿಡ್​ ಟೆಸ್ಟ್​

ಮಾರ್ಚ್​​ 28ರ ವರೆಗೆ 24 ಕೋಟಿಗೂ ಹೆಚ್ಚು (24,18,64,161) ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,13,319 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

Last Updated : Mar 29, 2021, 11:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.