ETV Bharat / bharat

ವ್ಯಾಕ್ಸಿನೇಷನ್​ ನಡುವೆಯೇ ದೇಶದಲ್ಲಿ ಹೆಚ್ಚಿದ ಕೋವಿಡ್​ ಸಾವು - ನೋವು..!

ಜನವರಿ 16ರಿಂದ ಈವರೆಗೆ ಒಟ್ಟು 5,81,09,773 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನ 62,258 ಕೇಸ್​ ಹಾಗೂ 291 ಸಾವು ವರದಿಯಾಗಿವೆ.

Total number of corona cases, deaths, Vaccination in India
ವ್ಯಾಕ್ಸಿನೇಷನ್​ ನಡುವೆಯೇ ದೇಶದಲ್ಲಿ ಹೆಚ್ಚಿದ ಕೋವಿಡ್​ ಸಾವು - ನೋವು
author img

By

Published : Mar 27, 2021, 11:16 AM IST

ನವದೆಹಲಿ: ಒಂದೆಡೆ ದೇಶಾದ್ಯಂತ 2ನೇ ಹಂತಹ ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಇನ್ನೊಂದೆಡೆ ಕೋವಿಡ್​ ಸಾವು - ನೋವಿನ ಪ್ರಮಾಣ ಮತ್ತೆ ಹೆಚ್ಚುತ್ತಿದೆ.

ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 62,258 ಸೋಂಕಿತರು ಪತ್ತೆಯಾಗಿದ್ದು, 291 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಪ್ರಕರಣಗಳ ಸಂಖ್ಯೆ 1,19,08,910 ಹಾಗೂ ಮೃತರ ಸಂಖ್ಯೆ 1,61,240ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಬೆಂಕಿ ಅನಾಹುತದಲ್ಲಿ 11 ಕೋವಿಡ್​ ರೋಗಿಗಳ ಸಾವು: ಆಸ್ಪತ್ರೆ ವಿರುದ್ಧ ಎಫ್​ಐಆರ್​ ದಾಖಲು

ಒಟ್ಟು ಸೋಂಕಿತರ ಪೈಕಿ 1,12,95,023 ಮಂದಿ ಗುಣಮುಖರಾಗಿದ್ದಾರೆ. ಆದರೂ 4,52,647 ಕೇಸ್​​ಗಳು ಇನ್ನೂ ಸಕ್ರಿಯವಾಗಿವೆ. ಜನವರಿ 16ರಿಂದ ಈವರೆಗೆ ಒಟ್ಟು 5,81,09,773 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Total number of corona cases, deaths, Vaccination in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವುದರಿಂದ ಇತ್ತ ಕೋವಿಡ್​ ಟೆಸ್ಟ್ ಪ್ರಮಾಣವನ್ನೂ ಹೆಚ್ಚಿಸಲಾಗುತ್ತಿದೆ. ಮಾರ್ಚ್​​ 26 ರವರೆಗೆ 23,97,69,553 ಜನರಿಗೆ ಕೊರೊನಾ​ ಪರೀಕ್ಷೆ​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 11,64,915 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.