ETV Bharat / bharat

ದೇಶದಲ್ಲಿ 21 ಕೋಟಿ ಮಂದಿಗೆ ಟೆಸ್ಟ್​.. 1.07 ಕೋಟಿ ಕೊರೊನಾ ವಾರಿಯರ್​ಗಳಿಗೆ ಲಸಿಕೆ

author img

By

Published : Feb 20, 2021, 10:01 AM IST

ಶುಕ್ರವಾರದವರೆಗೆ ದೇಶದಲ್ಲಿ 21 ಕೋಟಿಗೂ ಹೆಚ್ಚು (21,02,61,480) ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, 1,07,15,204 ಮಂದಿಗೆ ಲಸಿಕೆ ನೀಡಲಾಗಿದೆ.

Vaccination in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ನವದೆಹಲಿ: ಕಳೆದ 24 ಗಂಟೆಗಳಲ್ಲಿ 13,993 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 101 ಮಂದಿಯನ್ನು ವೈರಸ್​ ಬಲಿ ಪಡೆದಿದೆ. ಭಾರತದಲ್ಲಿ ಇದೀಗ ಪ್ರಕರಣಗಳ ಸಂಖ್ಯೆ 1,09,77,387 ಹಾಗೂ ಮೃತರ ಸಂಖ್ಯೆ 1,56,212ಕ್ಕೆ ಏರಿಕೆಯಾಗಿದೆ.

ಫೆಬ್ರವರಿ​ 19ರ ವರೆಗೆ 21 ಕೋಟಿಗೂ ಹೆಚ್ಚು (21,02,61,480) ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,86,618 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

Vaccination in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಇದನ್ನೂ ಓದಿ: ಇಂದು ಭಾರತ - ಚೀನಾ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

ಈವರೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್​ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸೇರಿ 1,07,15,204 ಮಂದಿಗೆ ಲಸಿಕೆ ನೀಡಲಾಗಿದೆ.

ಒಟ್ಟು 1.07 ಕೋಟಿ ಸೋಂಕಿತರ ಪೈಕಿ 1,06,78,048 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಉಳಿದಂತೆ 1,43,127 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.