ETV Bharat / bharat

ಪುಲ್ವಾಮಾ ಎನ್‌ಕೌಂಟರ್‌: ಎಲ್‌ಇಟಿ ಉಗ್ರ ಸೇರಿ ಐವರ ಹತ್ಯೆ; ಓರ್ವ ಯೋಧ ಹುತಾತ್ಮ - ಭದ್ರತಾ ಸಿಬ್ಬಂದಿ-ಉಗ್ರರ ನಡುವೆ ಗುಂಡಿನ ದಾಳಿ

ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಲಷ್ಕರ್‌ -ಇ-ತೋಯ್ಬಾ ಉಗ್ರ ಸಂಘಟನೆಗೆ ಸೇರಿದ್ದ ಐವರನ್ನು ಗುಂಡಿಕ್ಕಿ ಹತ್ಯೆ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

Top LeT commander
Top LeT commander
author img

By

Published : Jul 2, 2021, 5:30 PM IST

Updated : Jul 2, 2021, 5:41 PM IST

ಪುಲ್ವಾಮಾ(ಜಮ್ಮು): ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಎಲ್​ಇಟಿ ಉಗ್ರ ಸಂಘಟನೆಗೆ ಸೇರಿದ್ದ ಟಾಪ್​ ಕಮಾಂಡೋ ಸೇರಿ ಐವರು ಉಗ್ರರು ಹತರಾಗಿದ್ದಾರೆ.

encounter
ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನೆ ಭಾಗಿ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ ಎಲ್‌ಇಟಿ ಉಗ್ರ ಸಂಘಟನೆಗೆ ಸೇರಿದ್ದ ಐವರನ್ನು ಹತ್ಯೆ ಮಾಡಲಾಗಿದ್ದು, ಓರ್ವ ಯೋಧ ಹುತಾತ್ಮನಾಗಿದ್ದಾನೆ. ಉಳಿದಂತೆ ಮತ್ತೋರ್ವ ಯೋಧ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ಎಲ್‌ಇಟಿ ಉಗ್ರ ಸೇರಿ ಐವರ ಹತ್ಯೆ

ಪುಲ್ವಾಮಾ ಜಿಲ್ಲೆಯ ರಾಜ್​ಪೋರಾ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಉಗ್ರರು-ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಐಜಿಪಿ ವಿಜಯ್​ ಕುಮಾರ್​​, ಕಾರ್ಯಾಚರಣೆಯಲ್ಲಿ ನಾವು ಯಶಸ್ಸು ಕಂಡಿದ್ದೇವೆ ಎಂದು ತಿಳಿಸಿದ್ದಾರೆ.

  • District commander of proscribed terror outfit LeT Nishaz Lone & one Pakistani terrorist neutralised in the ongoing Pulwama encounter. A total of 5 terrorists were killed in the encounter: IGP Kashmir Vijay Kumar

    — ANI (@ANI) July 2, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಬ್ಯಾಟ್​ ಬ್ಯಾಲೆನ್ಸ್​​ ಚಾಲೆಂಜ್​​: ವಿರಾಟ್​-ಅನುಷ್ಕಾ ಮಧ್ಯೆ ಗೆದ್ದಿದ್ಯಾರು? ವಿಡಿಯೋ ನೋಡಿ..

ಜಮ್ಮುಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕಣಿವೆ ನಾಡಿನ 14 ರಾಜಕೀಯ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಮೇಲಿಂದ ಮೇಲೆ ಉಗ್ರರು-ಭಾರತೀಯ ಸೇನೆ ನಡುವೆ ಗುಂಡಿನ ದಾಳಿ ನಡೆಯುತ್ತಿದ್ದು, ಯೋಧರು ತಿರುಗೇಟು ನೀಡುತ್ತಿದ್ದಾರೆ.

Last Updated : Jul 2, 2021, 5:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.