ETV Bharat / bharat

ನಿಮ್ಮಲ್ಲಿ ಅನಗತ್ಯ ಬ್ಯಾಂಕ್ ಖಾತೆಗಳಿದ್ದರೆ ಕ್ಲೋಸ್​ ಮಾಡಿ: ಇಲ್ಲದಿದ್ದರೆ ಜೇಬಿಗೆ ಕತ್ತರಿ - ಹಳೆಯ ಬ್ಯಾಂಕ್ ಅಕೌಂಟ್​ ಕ್ಲೋಸ್

ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಬ್ಯಾಂಕ್​​ಗಳಲ್ಲಿ ಅಕೌಂಟ್​​​​ಗಳನ್ನು ತೆರೆಯುವುದು ಸೂಕ್ತವಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಈಗಾಗಲೇ ಹೆಚ್ಚಿನ ಖಾತೆಗಳನ್ನು ತೆರೆದಿದ್ದರೆ, ಅವುಗಳಲ್ಲಿ ಅನಗತ್ಯ ಅಕೌಂಟ್​ಗಳನ್ನು ಕ್ಲೋಸ್​ ಮಾಡುವುದೊಳಿತು. ಇಲ್ಲದಿದ್ದರೆ, ನಿಮ್ಮ ಜೇಬು ಖಾಲಿಯಾಗುವುದು ನಿಶ್ಚಿತ ಎಂದು ಹಣಕಾಸು ತಜ್ಞರು ಅಭಿಪ್ರಾಯಿಸಿದ್ದಾರೆ.

too many bank accounts can harm your money
ಬ್ಯಾಂಕ್
author img

By

Published : Nov 7, 2021, 8:07 PM IST

ಗೃಹ ಸಾಲಕ್ಕೆ ಒಂದು ಖಾತೆ, ವೇತನಕ್ಕೆ ಮತ್ತೊಂದು ಖಾತೆ ಇವುಗಳ ಹೊರತಾಗಿ ಉದ್ಯೋಗಗಳು ಬದಲಾದಾಗ ಅದಕ್ಕೆಂದು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯುತ್ತಾರೆ. ಹೀಗೆ ನಾನಾ ಕಾರಣಗಳಿಗಾಗಿ ಬೇರೆ ಬೇರೆ ಬ್ಯಾಂಕ್​​ಗಳಲ್ಲಿ ಖಾತೆ ತೆರೆಯುವುದು ತರವಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು. ಎಲ್ಲಾ ಖಾತೆಗಳು ಯಾವಾಗಲೂ ಸಕ್ರಿಯವಾಗಿರುವುದಿಲ್ಲ. ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಶುಲ್ಕ ವಿಧಿಸಲಾಗುತ್ತದೆ. ಆಗ ಈ ಮಿನಿಮಮ್​ ಬ್ಯಾಲೆನ್ಸ್​ಗಾಗಿಯೇ ಭಾರಿ ಮೊತ್ತದ ಠೇವಣಿ ಅಗತ್ಯವಿದೆ.

ಹೆಚ್ಚು ಖಾತೆಗಳಿದ್ದರೆ ಏನಾಗುವುದು?

ನಿಮ್ಮಲ್ಲಿ ಹೆಚ್ಚಿನ ಬ್ಯಾಂಕ್‌ ಖಾತೆಗಳಿದ್ದರೆ ಎಲ್ಲಾ ಖಾತೆಗಳಲ್ಲಿ ಸ್ವಲ್ಪ ಹಣವನ್ನು ಕೊನೇಪಕ್ಷ ಮಿನಿಮಮ್​ ಬ್ಯಾಲೆನ್ಸ್​ ರೂಪದಲ್ಲಾದರೂ ಠೇವಣಿ ಮಾಡಬೇಕಾಗುತ್ತದೆ. ಕೆಲವು ಬ್ಯಾಂಕ್‌ಗಳಲ್ಲಿ ನಿಮ್ಮ ಖಾತೆಯಲ್ಲಿ ಮಿನಿಮಮ್​ ಬ್ಯಾಲೆನ್ಸ್​​ ರೂ.5000 ರಿಂದ ರೂ.10 ಸಾವಿರ ರೂ. ವರೆಗೂ ಇರಬೇಕು. ಹೆಚ್ಚಿನ ಬ್ಯಾಂಕ್‌ಗಳು ಖಾತೆದಾರರಿಂದ ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು ಬಯಸುತ್ತವೆ ಮತ್ತು ನಿರ್ವಹಣೆ ಮಾಡದಿದ್ದರೆ ದಂಡ ವಿಧಿಸಬಹುದು. ಒಂದು ವೇಳೆ ನೀವು ಐದು ಉಳಿತಾಯ ಖಾತೆಗಳನ್ನು ಹೊಂದಿದ್ದರೆ, ಸುಮಾರು ₹25,000-50,000 ಅನ್ನು ಮಿನಿಮಮ್​ ಬ್ಯಾಲೆನ್ಸ್​​ ನಿರ್ವಹಣೆಗೆಂದೇ ಎತ್ತಿಡಬೇಕಾಗುತ್ತದೆ.

ಅನೇಕರು ಉದ್ಯೋಗ ಬದಲಾಯಿಸಿದಾಗ ಅಥವಾ ಮನೆ ಖರೀದಿಸುವುದು, ಮಗುವಿನ ಶಿಕ್ಷಣ ಮತ್ತು ಮುಂತಾದ ನಿರ್ದಿಷ್ಟ ಗುರಿಗಳಿಗಾಗಿ ಉಳಿತಾಯಕ್ಕಾಗಿ ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ತೆರೆಯುತ್ತಾರೆ. ವಿಶ್ವ ಬ್ಯಾಂಕ್‌ನ 2017 ಗ್ಲೋಬಲ್ ಫೈಂಡೆಕ್ಸ್ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು ಅರ್ಧದಷ್ಟು ಖಾತೆದಾರರು 2016 ರಲ್ಲಿ ನಿಷ್ಕ್ರಿಯವಾಗಿ ಉಳಿದಿರುವ ಖಾತೆ ಹೊಂದಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಸರಾಸರಿ ಶೇ 25ಕ್ಕಿಂತ ಎರಡು ಪಟ್ಟು ಹೆಚ್ಚು.

ಕನಿಷ್ಠ ಬ್ಯಾಲೆನ್ಸ್‌ ಇದ್ದರೆ ಶೇ 3-4 ರಷ್ಟು ಆದಾಯ

"ಕನಿಷ್ಠ ಬ್ಯಾಲೆನ್ಸ್ ನಿಮಗೆ ವರ್ಷಕ್ಕೆ ಶೇ 3-4 ದರದಲ್ಲಿ ಆದಾಯ ನೀಡುತ್ತದೆ. ಅದೇ ನೀವು ಈ ಹಣವನ್ನು ಫಿಕ್ಸಡ್​​ ಡೆಪಾಸಿಟ್​ ಮಾಡಿದರೆ ಸುಮಾರು ಎರಡು ಪಟ್ಟು ಹೆಚ್ಚು ಬಡ್ಡಿಯನ್ನು ಪಡೆಯುತ್ತೀರಿ. ಉಳಿತಾಯ ಖಾತೆಗಳು ಡೆಬಿಟ್ ಕಾರ್ಡ್ ಚಾರ್ಜ್​ ರೂಪದಲ್ಲಿ ವೆಚ್ಚ ಬೇಡುತ್ತವೆ. ಆ ವೆಚ್ಚವನ್ನು ಬಳಕೆಯನ್ನು ಲೆಕ್ಕಿಸದೆಯೇ ಪಾವತಿಸಬೇಕಾಗುತ್ತದೆ" ಎಂದು ಆನ್‌ಲೈನ್ ಹಣಕಾಸು ಸೇವೆಗಳ ಮಾರುಕಟ್ಟೆ ಸ್ಥಳವಾದ ಬ್ಯಾಂಕ್‌ಬಜಾರ್‌ನ ಸಿಇಒ ಆದಿಲ್ ಶೆಟ್ಟಿ ಹೇಳಿದರು.

ಉಳಿತಾಯ ಖಾತೆಯನ್ನು ಸಾಮಾನ್ಯ ಉಳಿತಾಯ ಖಾತೆಯಾಗಿ ಪರಿವರ್ತಿಸಿ

ನಿಮ್ಮ ಝೀರೋ ಬ್ಯಾಲೆನ್ಸ್ ಸೇವಿಂಗ್​ ಅಕೌಂಟ್ ಅಥವಾ ಸ್ಯಾಲರಿ ಅಕೌಂಟ್​​ ಅನ್ನು ಗಮನಿಸಿ ಸತತ ಮೂರು ತಿಂಗಳುಗಳವರೆಗೆ ಸಂಬಳವನ್ನು ಜಮೆ ಮಾಡದೇ ಹೋದರೆ, ನಿಮ್ಮ ಬ್ಯಾಂಕ್ ಅಂತಹ ಝೀರೋ ಬ್ಯಾಲೆನ್ಸ್ ಉಳಿತಾಯ ಖಾತೆಯನ್ನು ಸಾಮಾನ್ಯ ಉಳಿತಾಯ ಖಾತೆಯಾಗಿ ಪರಿವರ್ತಿಸಬಹುದು, ಇದು ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅನ್ನು ನಿರ್ವಹಣೆ​ ಮಾಡುವಂತೆ ನಿಮ್ಮನ್ನು ಒತ್ತಾಯಿಸುತ್ತದೆ.

ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳವರೆಗೆ ಖಾತೆಯು ನಿಷ್ಕ್ರಿಯವಾಗಿದ್ದರೆ, ಬ್ಯಾಂಕ್ ಅದನ್ನು ನಿಷ್ಕ್ರಿಯವೆಂದು ಪರಿಗಣಿಸುತ್ತದೆ. ಅಂತಹ ಸಂದರ್ಭದಲ್ಲಿ, ಡೆಬಿಟ್ ಕಾರ್ಡ್, ಚೆಕ್, ಆನ್‌ಲೈನ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ಆ ಖಾತೆಯಿಂದ ಯಾವುದೇ ವಹಿವಾಟುಗಳನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಲಿಖಿತ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು ಖಾತೆಯನ್ನು ಪುನಃ ಸಕ್ರಿಯಗೊಳಿಸಬೇಕಾಗುತ್ತದೆ. ಇದು ಜಂಟಿ ಖಾತೆಯಾಗಿದ್ದರೆ, ಖಾತೆ ಹೊಂದಿರುವವರೆಲ್ಲ ತಮ್ಮ ಒಪ್ಪಿಗೆಯನ್ನು ನೀಡಬೇಕು.

"ಐಡಲ್ ಫಂಡ್‌ಗಳ ಮೇಲಿನ ಆದಾಯವನ್ನು ಕಳೆದುಕೊಳ್ಳುವುದರ ಹೊರತಾಗಿ (ಪ್ರತಿ ಖಾತೆಯನ್ನು ನಿರ್ವಹಿಸಲು ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳು), ತೆರಿಗೆ ರಿಟರ್ನ್ಸ್‌ಗಾಗಿ ಪ್ರತಿ ಖಾತೆಯ ವಿಶ್ಲೇಷಣೆಯನ್ನು ಖಚಿತಪಡಿಸಿಕೊಳ್ಳುವುದು ಸಮಸ್ಯೆಯಾಗಬಹುದು. ಆನ್​​ಲೈನ್​ ಬ್ಯಾಂಕಿಂಗ್​ಗಾಗಿ ಪಾಸ್‌ವರ್ಡ್‌ಗಳನ್ನು ಆಗಾಗ್ಗೆ ನೆನಪಿಟ್ಟುಕೊಳ್ಳುವುದು ಮತ್ತು ಬದಲಾಯಿಸುವುದು ಮತ್ತು ಅವುಗಳನ್ನು ಮರುಪಡೆಯುವುದು ಇತರ ಸಮಸ್ಯೆಗಳು ಎದುರಾಗಬಹುದು" ಎಂದು ಹಣಕಾಸು ಯೋಜನಾ ಸಂಸ್ಥೆಯ ಇಂಟರ್​​ನ್ಯಾಷನಲ್ ಮನಿ ಮ್ಯಾಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಲೊವೈ ನವ್ಲಾಖಿ ಹೇಳಿದರು.

ಹಾಗಾದರೆ, ಏನು ಮಾಡಬೇಕು?, ತಜ್ಞರ ಸಲಹೆ..

1. "ಬ್ಯಾಂಕ್ ಖಾತೆಗಳಿಗೆ ಬಂದಾಗ ಕಡಿಮೆ ಹಾಗೂ ಉತ್ತಮ ಬ್ಯಾಂಕ್​ ಅಕೌಂಟ್​ ಹೊಂದುವುದು ಸೂಕ್ತ. ನಿಮ್ಮ ಉಳಿತಾಯ ಖಾತೆ (Saving Account)ಗಳ ಸಂಖ್ಯೆಯನ್ನು ಎರಡಕ್ಕೆ ಸೀಮಿತಗೊಳಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಮೊದಲನೆಯದು ನಿಮ್ಮ ಸ್ಯಾಲರಿ ಅಕೌಂಟ್​ ಆಗಿರಬೇಕು. ಇನ್ನೊಂದು ನಿಮ್ಮ ತುರ್ತು ಹಣವನ್ನು ನೀವು ಇರಿಸಬಹುದಾದ ನಿಮ್ಮ ಪೋಷಕರು ಅಥವಾ ಸಂಗಾತಿಯೊಂದಿಗೆ ಜಂಟಿ ಖಾತೆಯಾಗಿರಬೇಕು. ಜಂಟಿ ಖಾತೆ ನಿಮಗೆ ತುರ್ತು ಇದ್ದಾಗ ನಿಮ್ಮ ಕೈಯಲ್ಲಿ ಹಣ ಪಡೆಯಲು ಸಾಧ್ಯವಾಗದಿದ್ದರೆ, ನಿಮ್ಮವರ ಸಹಾಯದಿಂದ ಹಣ ಪಡೆಯಲು ಉಪಯೋಗವಾಗುತ್ತದೆ.

2. ನೀವು ಪ್ರತಿ ಬಾರಿ ನಿಮ್ಮ ಕೆಲಸವನ್ನು ಬದಲಾಯಿಸಿದಾಗ ಸಂಬಳದ ಖಾತೆ (Salary Account)ಯು ಬದಲಾಗಬಹುದು. ಆದ್ದರಿಂದ ನಿಮ್ಮ ಹೂಡಿಕೆಗಳಾದ ಮ್ಯೂಚುವಲ್ ಫಂಡ್‌ಗಳು ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ(ಪಿಎಫ್​)ಯನ್ನು ಲಿಂಕ್ ಮಾಡಲಾಗಿರುವ ಒಂದು ಶಾಶ್ವತ ಖಾತೆಯನ್ನು ನಿರ್ವಹಿಸುವುದು ಉತ್ತಮ. ಹಳೆಯ ಬ್ಯಾಂಕ್​ ಖಾತೆಗಳನ್ನು ಕ್ಲೋಸ್​ ಮಾಡುವುದು ಸೂಕ್ತ" ಎಂದು ಹಣಕಾಸು ಯೋಜನಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇನ್ವೆಸ್ಟೋಗ್ರಫಿ ಸಂಸ್ಥಾಪಕಿ ಶ್ವೇತಾ ಜೈನ್ ಹೇಳುತ್ತಾರೆ.

3. ಇದಲ್ಲದೆ, ಬ್ಯಾಂಕ್‌ಗಳು ನಮಗೆ ನೀಡುವ ಬಹುತೇಕ ಎಲ್ಲಾ ಸೇವೆಗಳಿಗೂ ಶುಲ್ಕ ವಿಧಿಸುತ್ತವೆ. ನೀವು ಎಷ್ಟು ಅಥವಾ ಏನು ಶುಲ್ಕವನ್ನು ಪಾವತಿಸುತ್ತಿದ್ದೀರಿ ಎಂದು ನಿಮಗೆ ತಿಳಿದಿರುವುದಿಲ್ಲ ಎಂದು ಜೈನ್ ಹೇಳಿದರು.

4. ಸಾರ್ವತ್ರಿಕ ಖಾತೆ ಸಂಖ್ಯೆ (UAN) ಅನ್ನು ಈಗ ನಿಮ್ಮ EPF ID ಆಗಿ ತೆಗೆದುಕೊಳ್ಳಲಾಗಿದೆ, ನೀವು ಪ್ರತಿ ಬಾರಿ ನಿಮ್ಮ ಕೆಲಸವನ್ನು ಬದಲಾಯಿಸಿದಾಗ ಯಾವುದೇ ಹೊಸ EPF ಖಾತೆಗಳನ್ನು ತೆರೆಯುವ ಅಗತ್ಯವಿಲ್ಲ ಆದರೆ ನೀವು EPFO ನೊಂದಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ನವೀಕರಿಸಬೇಕಾಗಬಹುದು. ಶಾಶ್ವತ ಖಾತೆಯನ್ನು ಹೊಂದಿರುವುದು ಈ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. "ಜನರು ತಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ದೀರ್ಘಾವಧಿಯಲ್ಲಿ ಬ್ಯಾಂಕ್ ವಿವರಗಳನ್ನು ಬದಲಾಯಿಸಲು ಕಷ್ಟವಾಗುತ್ತದೆ.

5. ಅದೇ ರೀತಿ, ನಿಮ್ಮ ಇತರ ದೀರ್ಘಕಾಲೀನ ಹೂಡಿಕೆಗಳಾದ ಮ್ಯೂಚುವಲ್ ಫಂಡ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿಯನ್ನು ನೀವು ಬಹು ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡಿದರೆ, ಅದು ಬಹಳಷ್ಟು ಗೊಂದಲಕ್ಕೆ ಕಾರಣವಾಗಬಹುದು" ಎಂದು ಪ್ರಮಾಣೀಕೃತ ಹಣಕಾಸು ಯೋಜಕ ಮತ್ತು ಸೆಬಿ-ನೋಂದಾಯಿತ ಹೂಡಿಕೆ ಸಲಹೆಗಾರ ಬಸವರಾಜ ತೊನಗಟ್ಟಿ ಹೇಳಿದರು.

6. ನಿಮ್ಮ ಮುಖ್ಯ ಕಾರ್ಯನಿರ್ವಹಣಾ ಖಾತೆಯಾಗಿ ನಿಮ್ಮ ಶಾಶ್ವತ ಬ್ಯಾಂಕ್ ಖಾತೆಯನ್ನು ಬಳಸುವುದು ಸರಳ ಪರಿಹಾರವಾಗಿದೆ. ನೀವು ಪ್ರತಿ ಬಾರಿ ಉದ್ಯೋಗಗಳನ್ನು ಬದಲಾಯಿಸಿದಾಗ ಮುಖ್ಯ ಖಾತೆಗೆ ಎಲೆಕ್ಟ್ರಾನಿಕ್ ಟ್ರಾನ್ಸ್​ಫರ್​ ಅನ್ನು ಲಿಂಕ್​ ಮಾಡಿ ನಂತರ ಹಳೆಯ ಬ್ಯಾಂಕ್ ಅಕೌಂಟ್​ ಅನ್ನು ಕ್ಲೋಸ್​ ಮಾಡಿಸಿ.

7. ನಿಮ್ಮ ಬ್ಯಾಂಕ್ ಖಾತೆ, ಪ್ಯಾನ್ ಮತ್ತು ಆಧಾರ್ ನಿಮ್ಮ ಆರ್ಥಿಕ ಜೀವನಕ್ಕೆ ಮೂರು ಪ್ರಮುಖ ಗುರುತುಗಳು. ತೆರಿಗೆ ಪಾವತಿಗಳು ಮತ್ತು ಹೂಡಿಕೆಗಳಿಂದ ಹಿಡಿದು ನಿಮ್ಮ ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವವರೆಗೆ, ಇವುಗಳಿಗೆ ನಿಮ್ಮ KYC (Know Your Customer) ಉದ್ದೇಶವನ್ನು ತಿಳಿಯಲು ನಿಮ್ಮ ಬ್ಯಾಂಕ್ ಖಾತೆ, ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಬೇಕಾಗುತ್ತದೆ. ಹೀಗಾಗಿ ಒಂದು ಶಾಶ್ವತ ಬ್ಯಾಂಕ್ ಖಾತೆಯನ್ನು ಬಳಸುವುದು ಉತ್ತಮ. ಹಾಗೆಯೇ ಈ ಖಾತೆ ಆದಾಯ ತೆರಿಗೆ ಪಾವತಿಗಳು, ಇಪಿಎಫ್, ಪಿಪಿಎಫ್, ಮ್ಯೂಚುವಲ್ ಫಂಡ್‌ಗಳು, ಡಿಮ್ಯಾಟ್ ಖಾತೆ ಮತ್ತು ನಿಮ್ಮ ಮಾಸಿಕ ಬಿಲ್ ಪಾವತಿಗಳಂತಹ ನಿಮ್ಮ ಎಲ್ಲಾ ಹಣಕಾಸು ವ್ಯವಹಾರಗಳೊಂದಿಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ” ಎಂದು ತೊನಗಟ್ಟಿ ಹೇಳಿದರು.

8. ಎಲ್ಲಾ ಅನಗತ್ಯ ಬ್ಯಾಂಕ್ ಖಾತೆಗಳನ್ನು ಕ್ಲೋಸ್​ ಮಾಡುವುದು ಎಂದರೆ ದುರುಪಯೋಗದ ಸಾಧ್ಯತೆ ಕಡಿಮೆ ಎಂದು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಕಡಿಮೆ ಖಾತೆಗಳನ್ನು ಹೊಂದಿರುವುದರಿಂದ ನಿಯಮಿತವಾಗಿ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ.

9. ನೀವು ಮೂರರಿಂದ ನಾಲ್ಕು ತಿಂಗಳವರೆಗೆ ನಿರ್ದಿಷ್ಟ ಬ್ಯಾಂಕ್ ಖಾತೆಯನ್ನು ಬಳಸುತ್ತಿಲ್ಲ ಮತ್ತು ಆ ಖಾತೆಯೊಂದಿಗೆ ಯಾವುದೇ ವಹಿವಾಟುಗಳು ಅಥವಾ ಸೂಚನೆಗಳನ್ನು ಲಿಂಕ್ ಮಾಡಿಲ್ಲ ಎಂದು ನೀವು ಅರಿತುಕೊಂಡ ನಂತರ, ಆ ಅಕೌಂಟ್​ ಅನ್ನು ಕ್ಲೋಸ್​ ಮಾಡಿಸುವುದು ಉತ್ತಮ.

10. ನೀವು ಉದ್ಯೋಗವನ್ನು ಬದಲಾಯಿಸಿದ್ದರೆ ಮತ್ತು ಹೊಸ ಕಂಪನಿಯಲ್ಲಿ ಹೊಸ ಸಂಬಳ ಖಾತೆಯನ್ನು ತೆರೆಯಬೇಕಾದರೆ, ಮುಂದಿನ ಎರಡು ತಿಂಗಳಲ್ಲಿ ನೀವು ಹಳೆಯ ಸಂಬಳದ ಖಾತೆಯನ್ನು ಮುಚ್ಚಬಹುದು. ಸಾಮಾನ್ಯವಾಗಿ, ಒಬ್ಬರು ಕೆಲಸವನ್ನು ಬಿಟ್ಟ ಮೂರು ತಿಂಗಳ ನಂತರ, ಸ್ಯಾಲರಿ ಅಕೌಂಟ್​ಗಳು ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು ಹೊಂದಿರುತ್ತವೆ. ಅದನ್ನು ಮುಚ್ಚಲು ಮತ್ತು ಮುಂದುವರಿಯಲು ಇದು ಉತ್ತಮ ರಿಮೈಂಡರ್​ ಎಂದು ಜೈನ್ ಹೇಳಿದರು.

11. ಆದಾಗ್ಯೂ, ಖಾತೆಯನ್ನು ಕ್ಲೋಸ್​ ಮಾಡುವ ಮೊದಲು, ಯಾವುದೇ ಬಾಕಿ ಉಳಿದಿಲ್ಲ ಮತ್ತು ಎಲ್ಲಾ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (NACH) ಆದೇಶಗಳನ್ನು ಡಿ-ಲಿಂಕ್ ಮಾಡಲಾಗಿದೆ ಅಥವಾ ಇನ್ನೊಂದು ಖಾತೆಗೆ ವರ್ಗಾಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಒಟ್ಟಾರೆ ಹೇಳುವುದಾದರೆ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಸೂಕ್ತವಾಗಿದೆ, ಅಥವಾ ಹೆಚ್ಚೆಂದರೆ ಮೂರು. ಆದರೆ ಇದನ್ನು ಮೀರಿ ಹೆಚ್ಚಿನ ಅಕೌಂಟ್​ಗಳನ್ನು ತೆರೆದರೆ ಇದು ನಿಮ್ಮ ಆರ್ಥಿಕ ಜೀವನಕ್ಕೆ ಯಾವುದೇ ರೀತಿಯಿಂದಲೂ ಒಳ್ಳೆಯಲ್ಲ ಎಂಬುದು ತಜ್ಞರ ಅಭಿಮತ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.