ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೊರೊನಾ ಪ್ರಕರಣಗಳಲ್ಲಿ ತೀವ್ರ ಬೆಳವಣಿಗೆ ಕಂಡು ಬಂದಿದೆ. ದಿನದಿಂದ ದಿನಕ್ಕೆ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಕೊರೊನಾ ಪ್ರಕರಣಗಳು:
ದೇಶದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗಿನ ವರೆಗೆ 1,68,063 ಮಂದಿಗೆ ಸೋಂಕು ತಗುಲಿದೆ. ಇನ್ನೂ 277 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ ಹಾಗೆ 69,959 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ ಹರಡುವಿಕೆಯ ಹಿನ್ನೆಲೆ ದೇಶದಲ್ಲಿ ಪಾಸಿಟಿವ್ ದರ ಶೇ. 13.29 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟು ಪ್ರಕರಣಗಳು: 3,58,75,790
ಒಟ್ಟು ಸಾವುಗಳು: 4,84,213
ಸಕ್ರಿಯ ಪ್ರಕರಣಗಳು: 8,21,446
ಒಟ್ಟು ಗುಣಮುಖರಾದವರು: 34,570,131
ಇನ್ನು ದೇಶದಲ್ಲಿ ಒಟ್ಟಾರೆ 4,461 ಜನಕ್ಕೆ ಒಮಿಕ್ರಾನ್ ಒಕ್ಕರಿಸಿಕೊಂಡಿದೆ.
ಭಾರತದಲ್ಲಿ ಲಸಿಕೆ ಅಭಿಯಾನ:
ದೇಶದಲ್ಲಿ ಲಸಿಕೆ ವಿತರಣೆ ವೇಗವಾಗಿ ಮುಂದುವರೆದಿದೆ. ಭಾನುವಾರ ಒಂದೇ ದಿನದಲ್ಲಿ 92,07,700 ಡೋಸ್ ನೀಡಲಾಗಿದೆ. ಪರಿಣಾಮವಾಗಿ, ಇದುವರೆಗೆ ವಿತರಿಸಲಾದ ಡೋಸ್‌ಗಳ ಸಂಖ್ಯೆ 1,52,89,70,294 ತಲುಪಿದೆ.
ವಿಶ್ವದಲ್ಲಿ ಕೊರೊನಾ ಪ್ರಕರಣಗಳು:
ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಒಟ್ಟಾರೆ 21,041.50 ಮಂದಿಗೆ ಸೋಂಕು ತಗುಲಿದ್ದು, 4,608 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 311,019,858 ಮತ್ತು ಸಾವಿನ ಸಂಖ್ಯೆ 5,511,955 ಇದೆ.
- ಅಮೆರಿಕದಲ್ಲಿ ಕೊರೊನಾ ಹಾವಳಿ ಮುಂದುವರಿದಿದೆ. 6,73,837 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 1,002 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 6.26 ಕೋಟಿ ತಲುಪಿದೆ.
- ಫ್ರಾನ್ಸ್‌ನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸೋಮವಾರ ದಾಖಲಾದ ಪ್ರಕರಣಗಳ ಸಂಖ್ಯೆ ಕೇವಲ 93,896 ಆಗಿದ್ದು, ಕೆಲವು ದಿನಗಳಿಂದ ದಿನಕ್ಕೆ 2 ರಿಂದ 3 ಲಕ್ಷಕ್ಕೆ ಏರಿದೆ. 280 ಮಂದಿ ಸಾವನ್ನಪ್ಪಿದ್ದಾರೆ.
- ಬ್ರಿಟನ್‌ನಲ್ಲಿ 1,42,224 ಜನರು ಸೋಂಕಿಗೆ ಒಳಗಾಗಿದ್ದಾರೆ. 77 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
- ಇಟಲಿಯಲ್ಲಿ 1,01,762 ಹೊಸ ಪ್ರಕರಣಗಳು ವರದಿಯಾಗಿದ್ದು, 227 ಜನರು ಸಾವನ್ನಪ್ಪಿದ್ದಾರೆ.
- ಸ್ಪೇನ್‌ನಲ್ಲಿ 97,464 ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ. 68 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 7,538,701 ತಲುಪಿದೆ.
- ಅರ್ಜೆಂಟೀನಾದಲ್ಲಿ 88,352 ಹೊಸ ಜನರಿಗೆ ಕೊರೊನಾ ದೃಢಪಟ್ಟಿದೆ. 51 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 6,399,196ಕ್ಕೆ ತಲುಪಿದೆ.
- ಆಸ್ಟ್ರೇಲಿಯಾದಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗಿದೆ. ಒಟ್ಟು 72,573 ಜನರು ವೈರಸ್ ಸೋಂಕಿಗೆ ಒಳಗಾಗಿದ್ದು, 22 ಜನರು ಸಾವನ್ನಪ್ಪಿದ್ದಾರೆ.
- ಟರ್ಕಿಯಲ್ಲಿ 65,236 ಹೊಸ ಪ್ರಕರಣಗಳು ವರದಿಯಾಗಿದ್ದು, 141 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 10,043,688 ಮತ್ತು ಸಾವಿನ ಸಂಖ್ಯೆ 83,834 ಇದೆ.
- ಕೆನಡಾದಲ್ಲಿ 55,350 ಪ್ರಕರಣಗಳು ಮತ್ತು 76 ಸಾವುಗಳು ಸಂಭವಿಸಿವೆ. 73 ಸಾವಿರ ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ.
- ಬ್ರೆಜಿಲ್‌ನಲ್ಲಿ ಒಟ್ಟು 34,788 ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ. 111 ಮಂದಿ ಸಾವಿಗೀಡಾಗಿದ್ದಾರೆ.