ETV Bharat / bharat

ಜೂನ್​​ 17ರ ಮೇಕೆದಾಟು ಸಭೆಗೆ ತಮಿಳುನಾಡು ವಿರೋಧ: ಸುಪ್ರೀಂ ಮೆಟ್ಟಿಲೇರಿದ ಸ್ಟಾಲಿನ್​ ಸರ್ಕಾರ

ಜೂನ್ 17 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮೇಕೆದಾಟು ಯೋಜನೆಯ ಚರ್ಚೆಯಲ್ಲಿ ತಮಿಳುನಾಡು ಸರ್ಕಾರ ಭಾಗಿಯಾಗುವುದಿಲ್ಲ. ಈ ಸಭೆಯನ್ನು ಕಟುವಾಗಿ ವಿರೋಧಿಸಲಾಗುತ್ತಿದೆ ಎಂದು ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mekedatu project in CWMA meet on June, TN opposes discussion on Mekedatu project meet in New Delhi, Mekedatu project news, Mekedatu project update, ಜೂನ್‌ನಲ್ಲಿ ಸಿಡಬ್ಲ್ಯೂಎಂಎ ಸಭೆಯಲ್ಲಿ ಮೇಕೆದಾಟು ಯೋಜನೆ ಚರ್ಚೆ, ನವದೆಹಲಿಯಲ್ಲಿ ಮೇಕೆದಾಟು ಯೋಜನೆಯ ಸಭೆಯ ಕುರಿತು ಚರ್ಚೆಗೆ ತಮಿಳುನಾಡು ವಿರೋಧ, ಮೇಕೆದಾಟು ಯೋಜನೆ ಸುದ್ದಿ, ಮೇಕೆದಾಟು ಯೋಜನೆ ಅಪ್​ಡೇಟ್​,
ಮೇಕೆದಾಟು ಯೋಜನೆ
author img

By

Published : Jun 8, 2022, 11:39 AM IST

ಚೆನ್ನೈ (ತಮಿಳುನಾಡು): ಜೂನ್ 17 ರಂದು ನಡೆಯಲಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಸಭೆಯಲ್ಲಿ ಕರ್ನಾಟಕದ ವಿವರವಾದ ಯೋಜನಾ ವರದಿ (DPR) ಕುರಿತು ಯಾವುದೇ ಚರ್ಚೆ ನಡೆಸದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ದುರೈಮುರುಗನ್ ಹೇಳಿದ್ದಾರೆ.

ಮೇಕೆದಾಟು ಯೋಜನೆಯ ವಿಷಯವನ್ನು ಚರ್ಚಿಸಲು CWMA ಗೆ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದ ದುರೈಮುರುಗನ್, ಜೂನ್ 17 ರಂದು ನವದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ವಿವಾದಾತ್ಮಕ ಯೋಜನೆಯ ಬಗ್ಗೆ ನಡೆಯುವ ಚರ್ಚೆಯನ್ನು ರಾಜ್ಯವು ಕಟುವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

ಓದಿ: 'ಅಪ್ಪರ್ ಭದ್ರಾ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ'

ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಪ್ರಾಧಿಕಾರದ 16ನೇ ಸಭೆಯ ಅಜೆಂಡಾದಲ್ಲಿ ಚರ್ಚೆಯಾಗಿರುವುದರಿಂದ ರಾಜ್ಯವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ನೆರೆಯ ರಾಜ್ಯದ ವಿರುದ್ಧ ಕೈಗೊಂಡ ಹೋರಾಟವನ್ನು ಸ್ಮರಿಸಿದರು. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ರೈತರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ದುರೈಮುರುಗನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.