ETV Bharat / bharat

20 ವರ್ಷಗಳ ಬಳಿಕ ತ.ನಾಡಲ್ಲಿ ಬಿಜೆಪಿ : ಜಿಲ್ಲಾ ಕಾರ್ಯದರ್ಶಿಗಳಿಗೆ ಇನ್ನೋವಾ ಕಾರ್​ಗಳ ಗಿಫ್ಟ್​ - chennai news

ಈ ಮೊದಲು ಚುನಾವಣೆಗೆ ಮುನ್ನ ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಇನ್ನೋವಾ ಕಾರನ್ನು ಜಿಲ್ಲೆಯ ಕಾರ್ಯದರ್ಶಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು..

ಜಿಲ್ಲಾ ಕಾರ್ಯದರ್ಶಿಗಳಿಗೆ ಇನ್ನೋವಾ ಕಾರ್​ಗಳ ಗಿಫ್ಟ್​

author img

By

Published : Aug 22, 2021, 7:34 PM IST

ಚೆನ್ನೈ : ತಮಿಳುನಾಡು ಬಿಜೆಪಿ ರಾಜ್ಯ ಘಟಕವು 2021ರ ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದಕ್ಕಾಗಿ ನಾಲ್ಕು ಜಿಲ್ಲಾ ಕಾರ್ಯದರ್ಶಿಗಳಿಗೆ ಹೊಸ ಇನ್ನೋವಾ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದಿದೆ.

20 ವರ್ಷಗಳ ನಂತರ ಮಿಳುನಾಡಿನಲ್ಲಿ ಬಿಜೆಪಿ ವಿಧಾನಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದ ಹಿನ್ನೆಲೆ, ಅದಕ್ಕೆ ಕಾರಣರಾದ ನಾಲ್ಕು ಜಿಲ್ಲಾ ಕಾರ್ಯದರ್ಶಿಗಳಿಗೆ ಈ ಉಡುಗೊರೆ ನೀಡಲಾಗಿದೆ.

ಜಿಲ್ಲಾ ಕಾರ್ಯದರ್ಶಿಗಳಿಗೆ ಇನ್ನೋವಾ ಕಾರ್​ಗಳ ಗಿಫ್ಟ್​
ಜಿಲ್ಲಾ ಕಾರ್ಯದರ್ಶಿಗಳಿಗೆ ಇನ್ನೋವಾ ಕಾರ್​ಗಳು ಗಿಫ್ಟ್​

ಕೇಂದ್ರ ಸಚಿವ ಎಲ್ ಮುರುಗನ್, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮತ್ತು ಹಿರಿಯ ನಾಯಕ ಸಿ ಪಿ ರಾಧಾಕೃಷ್ಣನ್ ಅವರು ಇನ್ನೋವಾ ಕಾರುಗಳನ್ನು ಕೊಯಮತ್ತೂರು ಜಿಲ್ಲಾ ಕಾರ್ಯದರ್ಶಿ ನಂದಕುಮಾರ್, ತಿರುನೆಲ್ವೇಲಿ ಜಿಲ್ಲಾ ಕಾರ್ಯದರ್ಶಿ ಮಹಾರಾಜನ್, ಈರೋಡ್ ಜಿಲ್ಲಾ ಕಾರ್ಯದರ್ಶಿ ಸುಬ್ರಮಣಿಯನ್ ಮತ್ತು ಕನ್ಯಾಕುಮಾರಿ ಜಿಲ್ಲಾ ಕಾರ್ಯದರ್ಶಿ ಧರ್ಮರಾಜನ್ ಅವರಿಗೆ ಪಕ್ಷದ ವತಿಯಿಂದ ಉಡುಗೊರೆಯಾಗಿ ನೀಡಿದ್ದಾರೆ.

ಈ ಮೊದಲು ಚುನಾವಣೆಗೆ ಮುನ್ನ ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಇನ್ನೋವಾ ಕಾರನ್ನು ಜಿಲ್ಲೆಯ ಕಾರ್ಯದರ್ಶಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.