ETV Bharat / bharat

ಸರ್ಕಾರಿ ಪ್ರಾಯೋಜಿತ ಆಹಾರ ಕಿಟ್​ ವಿತರಣೆಯಲ್ಲಿ 77 ಕೋಟಿ ವಂಚನೆ : ಬಿಜೆಪಿ ಆರೋಪ - ಆಹಾರ ಕಿಟ್​ ವಿತರಣೆಯಲ್ಲಿ ಭ್ರಷ್ಟಾಚಾರ

ಗರ್ಭಿಣಿಯರಿಗೆ ಸರ್ಕಾರದಿಂದ ನೀಡಲಾಗುವ ಪೌಷ್ಟಿಕಾಂಶವುಳ್ಳ ಆಹಾರದ ಕಿಟ್ ವಿತರಣೆಯಲ್ಲಿ ಖಾಸಗಿ ಸಂಸ್ಥೆ ಜೊತೆಗೂಡಿ 77 ಕೋಟಿ ರೂಪಾಯಿಯನ್ನು ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗಿದೆ. ಇದಕ್ಕೆ ಸರ್ಕಾರವೇ ಕಾರಣ ಎಂದು ಬಿಜೆಪಿ ಆರೋಪಿಸಿದೆ..

pregnant-women
ತಮಿಳುನಾಡು ಬಿಜೆಪಿ ಆರೋಪ
author img

By

Published : Jun 5, 2022, 5:39 PM IST

ಚೆನ್ನೈ: ಗರ್ಭಿಣಿಯರಿಗೆ ಸರ್ಕಾರದಿಂದ ನೀಡಲಾಗುವ ಪೌಷ್ಟಿಕಾಂಶವುಳ್ಳ ಆಹಾರ ವಿತರಣೆ ಯೋಜನೆಯಲ್ಲಿ ರಾಜ್ಯದ ಬೊಕ್ಕಸಕ್ಕೆ 77 ಕೋಟಿ ರೂಪಾಯಿ ನಷ್ಟವುಂಟು ಮಾಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಸರ್ಕಾರ ಖಾಸಗಿ ಸಂಸ್ಥೆಯೊಂದರ ಜೊತೆ ಶಾಮೀಲಾಗಿ ಗರ್ಭಿಣಿಯರಿಗೆ ಪೌಷ್ಟಿಕಾಂಶವುಳ್ಳ ಆಹಾರ ಕಿಟ್‌ಗಳನ್ನು ಒದಗಿಸುವ ಯೋಜನೆಯಲ್ಲಿ ರಾಜ್ಯದ ಬೊಕ್ಕಸಕ್ಕೆ 77 ಕೋಟಿ ರೂಪಾಯಿಯನ್ನು ಲಪಟಾಯಿಸಿದೆ ಎಂದು ಆರೋಪಿಸಿದೆ.

ಈ ಬಗ್ಗೆ ತಮಿಳುನಾಡು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಕೆ.ಅಣ್ಣಾಮಲೈ ಮಾತನಾಡಿ, ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡ ಖಾಸಗಿ ಸಂಸ್ಥೆಯು ಗರ್ಭಿಣಿಯರಿಗೆ ಪೌಷ್ಟಿಕಾಂಶದ ಕಿಟ್‌ ಅನ್ನು ಸರ್ಕಾರಿ ಏಜೆನ್ಸಿಗಳಿಗೆ ಹೋಲಿಸಿದರೆ ದ್ವಿಗುಣ ವೆಚ್ಚದಲ್ಲಿ ನೀಡಿದೆ. ಕಿಟ್​ನ ಬೆಲೆ ಶೇ.60ರಷ್ಟು ಹೆಚ್ಚಾಗಿ ತೋರಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 77 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ದೂರಿದ್ದಾರೆ.

ಆರೋಗ್ಯ ಕಿಟ್​ಗಳನ್ನು ಒದಗಿಸುವ ಗುತ್ತಿಗೆಯನ್ನು ರಾಜ್ಯ ಹಾಲು ಸಹಕಾರಿ ಆವಿನ್‌ಗೆ ಸರ್ಕಾರ ನೀಡಬೇಕೆಂದು ಅವರು ಒತ್ತಾಯಿಸಿದರು. ಈ ಕುರಿತು ಪಕ್ಷವು ಸಂಬಂಧಿತ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತದೆ ಎಂದು ಅವರು ಹೇಳಿದರು.

ಓದಿ: ವಿವಾದಿತ ಹೇಳಿಕೆ: ಬಿಜೆಪಿಯಿಂದ ನೂಪುರ್​ ಶರ್ಮಾ, ನವೀನ್​ ಜಿಂದಾಲ್ ಅಮಾನತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.