ತಿರುಪತಿ (ಆಂಧ್ರಪ್ರದೇಶ): ಇಲ್ಲಿನ ತಿರುಪತಿ ಲೋಕಸಭೆ ಉಪಚುನಾವಣೆಗೆ ಸದ್ದಿಲ್ಲದೇ ಮೂರು ಪಕ್ಷಗಳು ಭರದ ಸಿದ್ಧತೆಯಲ್ಲಿ ತೊಡಗಿವೆ. ಈ ನಡುವೆ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ನ ಎಂ ಗುರುಮೂರ್ತಿಗೆ ಟಿಕೆಟ್ ನೀಡಿದ್ದು, ಈಗಾಗಲೇ 3,600 ಕಿಮೀಟರ್ ಉದ್ದದ ಪ್ರಾದಯಾತ್ರೆ ಮಾಡಿ ಜಗನ್ ಮೋಹನ್ ರೆಡ್ಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಆದರೆ, ಇದನ್ನೆ ದಾಳವಾಗಿ ಬಳಸಿಕೊಳ್ಳುತ್ತಿರುವ ಪ್ರತಿಪಕ್ಷಗಳು ನೀವು ಗುರುಮೂರ್ತಿ ಅವರನ್ನು ಆಯ್ಕೆ ಮಾಡಿದರೆ ಅವರು ಜಗನ್ ಅವರ ಅಡಿಯಾಳಾಗಿ ಮಾತ್ರ ಇರುತ್ತಾರೆ. ನಿಮ್ಮ ಸಂಸ್ಕೃತಿ ಹಾಗೂ ನಿಮಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವುದಿಲ್ಲ ಎಂದು ವಾದಿಸುತ್ತಿವೆ.
ಈ ಆರೋಪಗಳಿಗೆ ಪ್ರತ್ಯುತ್ತರ ನೀಡಿದ ವೈಎಸ್ಆರ್ಸಿ, ಉಳಿದ ಪಕ್ಷಗಳಿಗೆ ಮಾತನಾಡುಲು ಬೇರೆನೂ ಉಳಿದಿಲ್ಲ, ಎಲ್ಲವನ್ನೂ ಸಮಸ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.
ತಿರುಪತಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ವೈಎಸ್ಆರ್ಪಿಯ ಬಲ್ಲಿ ದುರ್ಗಾ ಕಳೆದ ಸೆಪ್ಟೆಂಬರ್ನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಇದೀಗ ಉಪಚುನಾವಣೆ ನಿಗದಿಯಾಗಿದೆ.
ಚಿತ್ತೂರು ಮತ್ತು ಎಸ್ಪಿಎಸ್ ನೆಲ್ಲೂರು ಜಿಲ್ಲೆಯ 7 ಕ್ಷೇತ್ರಗಳನ್ನೂ ಸಹ ತಿರುಪತಿ ಅಸೆಂಬ್ಲಿ ಒಳಗೊಂಡಿದೆ. ಆದರೆ, ಈ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದು ಅಂದಾಜಿಸಲಾಗಿದೆ.
ಹೀಗಾಗಿ ಎದುರಾಳಿಗಳ ಸೋಲಿಸಲು ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದೆ. ಇವರಿಗೆ ಶಕ್ತಿ ತುಂಬಲು ಜನಸೇನಾ ಪಕ್ಷದ ಪವನ್ ಕಲ್ಯಾಣ್ ಸಹ ಬೆಂಬಲ ಸೂಚಿಸಿ ರತ್ನಪ್ರಭಾ ಪರ ಪ್ರಚಾರ ನಡೆಸಿದ್ದಾರೆ.
ಇತ್ತ ತೆಲುಗು ದೇಶಂ ಪಾರ್ಟಿಯಿಂದ ಕೇಂದ್ರದ ಮಾಜಿ ವಿದೇಶಾಂಗ ಸಚಿವ ಪನಬಾಕ ಲಕ್ಷ್ಮಿ ನಾಮನಿರ್ದೇಶಿತರಾಗಿದ್ದರೆ, ಮತ್ತೊಬ್ಬ ಮಾಜಿ ಕೇಂದ್ರ ವಿದೇಶಾಂಗ ಸಚಿವ ಚಿಂತಾ ಮೋಹನ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇವರು ಈ ಕ್ಷೇತ್ರದಿಂದ 6 ಬಾರಿ, ಕಾಂಗ್ರೆಸ್ ಟಿಕೆಟ್‌ನಿಂದ ಐದು ಬಾರಿ ಮತ್ತು ಟಿಡಿಪಿ ಟಿಕೆಟ್‌ನಿಂದ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವೈಎಸ್ಆರ್ಪಿ, ಟಿಡಿಪಿ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಏಪ್ರಿಲ್ 17ರಂದು ನಡೆಯಲಿರುವ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಉಪಚುನಾವಣೆಯ ಪ್ರಚಾರವು ಇಂದು ಸಂಜೆ 5 ಗಂಟೆಗೆ ಮುಕ್ತಾವಾಗಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.