ETV Bharat / bharat

ಕುಟುಂಬ ಯೋಜನೆ ಪರಿಕಲ್ಪನೆಗೆ ಇಸ್ಲಾಂ ವಿರೋಧಿಯಲ್ಲ: ಎಸ್.ವೈ.ಖುರೇಷಿ - ಕುಟುಂಬ ಯೋಜನೆ ಪರಿಕಲ್ಪನೆ

ಕುಟುಂಬ ಯೋಜನೆ ಪರಿಕಲ್ಪನೆಗೆ ಇಸ್ಲಾಂ ಧರ್ಮ ವಿರೋಧಿಯಲ್ಲ ಮತ್ತು ಭಾರತದಲ್ಲಿರುವ ಬೇರೆ ಎಲ್ಲ ಸಮುದಾಯಗಳಿಗಿಂತ ಬಹುಪತ್ನಿತ್ವ ವ್ಯವಸ್ಥೆ ಮುಸ್ಲಿಮರಲ್ಲಿ ಕಡಿಮೆ ಇದೆ. ಜನಸಂಖ್ಯೆಯ ವಿಷಯದಲ್ಲಿ ಮುಸ್ಲಿಮರು ಹಿಂದೂಗಳನ್ನು ಹಿಂದಿಕ್ಕಲು ಯಾವುದೇ ಸಂಘಟಿತ ಪಿತೂರಿ ನಡೆಸಿಲ್ಲ. ಅವರ ಸಂಖ್ಯೆಯು ದೇಶದ ಹಿಂದೂಗಳ ಸಂಖ್ಯೆಯನ್ನು ಹಿಂದಿಕ್ಕಲು ಎಂದಿಗೂ ಸಾಧ್ಯವಿಲ್ಲ ಎಂದು ಖುರೇಷಿ ಹೇಳಿದ್ದಾರೆ.

ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ

author img

By

Published : Mar 7, 2021, 5:00 PM IST

ನವದೆಹಲಿ: ಮುಸ್ಲಿಮರನ್ನು ಕೆಟ್ಟದಾಗಿ ಪ್ರತಿಬಿಂಬಿಸಲು "ಹಿಂದುತ್ವ ಗುಂಪುಗಳು ರಚಿಸಿರುವ ಪುರಾಣಗಳ" ವಿರುದ್ಧ ಮಾತನಾಡುವ ಸಮಯ ಇದೀಗ ಬಂದಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಹೇಳಿದ್ದಾರೆ.

ಕುಟುಂಬ ಯೋಜನೆ ಪರಿಕಲ್ಪನೆಗೆ ಇಸ್ಲಾಂ ಧರ್ಮ ವಿರೋಧಿಯಲ್ಲ. ಭಾರತದಲ್ಲಿರುವ ಬೇರೆ ಎಲ್ಲ ಸಮುದಾಯಗಳಿಗಿಂತ ಬಹುಪತ್ನಿತ್ವ ವ್ಯವಸ್ಥೆ ಮುಸ್ಲಿಮರಲ್ಲಿ ಕಡಿಮೆ ಇದೆ. ಜನಸಂಖ್ಯೆಯ ವಿಷಯದಲ್ಲಿ ಮುಸ್ಲಿಮರು ಹಿಂದೂಗಳನ್ನು ಹಿಂದಿಕ್ಕಲು ಯಾವುದೇ ಸಂಘಟಿತ ಪಿತೂರಿ ನಡೆಸಿಲ್ಲ. ಅವರ ಸಂಖ್ಯೆಯು ದೇಶದ ಹಿಂದೂಗಳ ಸಂಖ್ಯೆಯನ್ನು ಹಿಂದಿಕ್ಕಲು ಎಂದಿಗೂ ಸಾಧ್ಯವಿಲ್ಲ ಎಂದು ಖುರೇಷಿ ಅವರು ಹೊಸದಾಗಿ ಬಿಡುಗಡೆಯಾದ ಅವರು ಪುಸ್ತಕ “ದಿ ಪಾಪ್ಯುಲೇಶನ್ ಮಿಥ್: ಇಸ್ಲಾಂ, ಫ್ಯಾಮಿಲಿ ಪ್ಲ್ಯಾನಿಂಗ್​ ಆ್ಯಂಡ್​ ಪಾಲಿಟಿಕ್ಸ್​​ ಇನ್​ ಇಂಡಿಯಾ” ದಲ್ಲಿ ಹೇಳಿದ್ದಾರೆ.

"ನೀವು ಒಂದು ಸುಳ್ಳನ್ನು ನೂರು ಬಾರಿ ಪುನರಾವರ್ತಿಸಿದರೆ, ಅದು ಸತ್ಯವಾಗುತ್ತದೆ. ಹಾಗಾಗಿ ಮುಸ್ಲಿಂ ಸಮುದಾಯದ ವಿರುದ್ಧದ ಪ್ರಚಾರ ಮಾಡುತ್ತಿರುವ ಈ ಸುಳ್ಳನ್ನು ಎದುರಿಸುವ ಸಮಯ ಬಂದಿದೆ. ಇಸ್ಲಾಂ ಕುಟುಂಬ ಯೋಜನೆಯ ವಿರುದ್ಧವಾಗಿದೆ ಎಂಬ ಸುಳ್ಳನ್ನು ಮುಸ್ಲಿಂ ಸಮುದಾಯದವರು ಕೂಡ ನಂಬಿದ್ದಾರೆ. ಆದರೆ ಇದು ಸತ್ಯವಲ್ಲ" ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇಸ್ಲಾಂ ಧರ್ಮವು ಕುಟುಂಬ ಯೋಜನೆಗೆ ವಿರೋಧಿಯಲ್ಲ. ಕುರಾನ್‌ ಎಲ್ಲಿಯೂ ಕುಟುಂಬ ಯೋಜನೆಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ನಾನು ವಾದಿಸುತ್ತೇನೆ. ಇಸ್ಲಾಂ ಧರ್ಮವು ಕುಟುಂಬ ಯೋಜನೆಯ ವಿಚಾರಗಳನ್ನು ಬೆಂಬಲಿಸುತ್ತದೆ. ಯುವಕರು ಕುಟುಂಬವನ್ನು ನೋಡಿಕೊಳ್ಳಲು ಸಮರ್ಥರಾದ ನಂತರ ಮದುವೆಯಾಗಬೇಕೆಂದು ಅಷ್ಟೇ ಕುರಾನ್​ನಲ್ಲಿ ಹೇಳಲಾಗಿದೆ ಎಂದು ಖುರೇಷಿ ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಸ್ಕೂಟಿ ನಂದಿಗ್ರಾಮದಲ್ಲಿ ಪಲ್ಟಿಯಾಗಲಿದೆ; ಸಿಎಂ ಮಮತಾಗೆ ಪ್ರಧಾನಿ ಮೋದಿ ಎಚ್ಚರಿಕೆ

ವಾಸ್ತವವಾಗಿ ಭಾರತದಲ್ಲಿ ಮುಸ್ಲಿಂ ಸಮಾಜವು ಬಹುಪತ್ನಿತ್ವವನ್ನು ಬಹಳ ಅಸಮಾಧಾನದಿಂದ ನೋಡುತ್ತದೆ ಎಂದು ಅವರು ಹೇಳಿದರು. ಲಿಂಗಾನುಪಾತದ ಪ್ರಕಾರ, 1,000 ಪುರುಷರಿಗೆ 924 ಮಹಿಳೆಯರಿದ್ದಾರೆ. ಹಾಗಾಗಿ ಬಹುಪತ್ನಿತ್ವವು ಭಾರತದಲ್ಲಿ ಸಂಖ್ಯಾಶಾಸ್ತ್ರೀಯವಾಗಿ ಸಾಧ್ಯವಿಲ್ಲ ಎಂದು ಅವರು ಹೇಳಿದರು. 70 ವರ್ಷಗಳಲ್ಲಿ ಹಿಂದೂಗಳ ಪ್ರಮಾಣವು ಶೇ. 84.1 ರಿಂದ 79.8 ಕ್ಕೆ ಇಳಿದಿರುವುದು ನಿಜವಾಗಿದ್ದರೂ, ಅಲ್ಪಸಂಖ್ಯಾತರ ಜನಸಂಖ್ಯೆಯೂ ಹೆಚ್ಚಳವಾಗಿದೆ. ಅಷ್ಟೇ ಅಲ್ಲದೇ ಮುಸ್ಲಿಂ ಸಮುದಾಯವೂ ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳುವುದರಲ್ಲಿಯೂ ಕಳೆದ ಮೂರು ದಶಕಗಳಲ್ಲಿ ಹೆಚ್ಚಾಗಿದೆ.

ಮುಸ್ಲಿಮರು ಅತಿ ಹೆಚ್ಚು ಜನನ ಪ್ರಮಾಣ ಹೊಂದಿದ್ದರೆ, ಹಿಂದೂಗಳು ಇದರಲ್ಲಿ ಎರಡನೇಯವರಾಗಿದ್ದಾರೆ. 1951 ರಲ್ಲಿ ಮುಸ್ಲಿಮರಿಗಿಂತ 30 ಕೋಟಿ ಹೆಚ್ಚು ಹಿಂದೂಗಳಿದ್ದರು. 2011 ರ ವೇಳೆಗೆ ಈ ಅಂತರವು 80 ಕೋಟಿಗೆ ಹೆಚ್ಚಾಗಿದೆ ಎಂದು ಅವರು ಹೇಳುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.