ಆಳ್ವಾರ್( ರಾಜಸ್ಥಾನ): ಸರಿಸ್ಕಾ ಮತ್ತೊಮ್ಮೆ ತನ್ನ ಮೊದಲಿನ ರೂಪವನ್ನ ಪಡೆಯಲು ಪ್ರಾರಂಭಿಸಿದ್ದಾಳೆ. ಇಲ್ಲಿಗೆ ಬರುವ ಪ್ರವಾಸಿಗರು ನಿತ್ಯ ಹುಲಿಗಳ ದರ್ಶನ ಪಡೆಯುತ್ತಿದ್ದಾರೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ದೇಶ ವಿದೇಶಗಳಿಂದ ಪ್ರವಾಸಿಗರು ಸರಿಸ್ಕಾ ಟೈಗರ್ ರಿಸರ್ವ್ಗೆ ಭೇಟಿ ನೀಡುತ್ತಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ಜನರು ಸಫಾರಿಯನ್ನು ಎಂಜಾಯ್ ಮಾಡುತ್ತಿದ್ದಾರೆ.
ಹೊಸ ವರ್ಷಕ್ಕೆ ಪ್ರವಾಸಿಗರು ರಸ್ತೆಯಲ್ಲಿ ಸರಿಸ್ಕಾದ ರಾಜಕುಮಾರ ಹುಲಿರಾಯನ ಗಾಂಭೀರ ನಡಿಗೆ ನೋಡಿ ಸಂತಸಪಟ್ಟರು. ಕೆಲವರು ಈ ವಿಶೇಷ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದರು. ಸರಿಸ್ಕಾದಲ್ಲಿ ಹುಲಿಗಳ ಸಂಖ್ಯೆ ಕಡೆಯಾಗುತ್ತಿತ್ತು. ಇದರಿಂದ ಸರಿಸ್ಕಾ ತನ್ನ ರಂಗು ಕಳೆದುಕೊಂಡಿತ್ತು. ನಂತರ ರಣಥಂಬೋರ್‌ನಿಂದ ಹುಲಿಗಳನ್ನು ತಂದು ಸರಿಸ್ಕಾದಲ್ಲಿ ಬಿಡಲಾಯಿತು. ಅಂದಿನಿಂದ ಇಲ್ಲಿ ಹುಲಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಹೀಗಾಗಿ ಸರಿಸ್ಕಾ ಟೈಗರ್ ರಿಸರ್ವ್ ಕಳೆದೊಗಿದ್ದ ರಂಗನ್ನು ಮತ್ತೆ ಪಡೆಯುತ್ತಿದೆ.
ಹುಲಿಗಳಿಗೆ ವಿಶೇಷ ವ್ಯವಸ್ಥೆ : ಸರಿಸ್ಕಾದ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಗ್ರಾಮಗಳನ್ನು ಸರಿಸ್ಕಾ ಆಡಳಿತವು ಸ್ಥಳಾಂತರಿಸುತ್ತಿದೆ. ಇದರಿಂದ ಪ್ರಾಣಿಗಳು ತೆರೆದ ಅರಣ್ಯ ಪ್ರದೇಶವನ್ನು ಪಡೆಯಬಹುದು. ನಿತ್ಯ ಹುಲಿಗಳ ಅಟ್ಟಹಾಸ ಮಾಡಲಾಗುತ್ತಿದೆ ಎಂದು ಸರಿಸ್ಕಾ ಅಧಿಕಾರಿಗಳು ತಿಳಿಸಿದ್ದಾರೆ.
ಐಸಿಐಸಿಐ ಸೇರಿದಂತೆ ಹಲವಾರು ಕಂಪನಿಗಳು ಅರಣ್ಯ ಇಲಾಖೆಗೆ ಸಂಪನ್ಮೂಲಗಳನ್ನು ಒದಗಿಸಲು ಸರಿಸ್ಕಾದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೇ ಸರಿಸ್ಕಾದಲ್ಲಿ ಕೇಂದ್ರೀಯ ಸಂಸ್ಥೆಯೊಂದು ಸಂಶೋಧನೆ ನಡೆಸುತ್ತಿದೆ. ಇಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿಸುವ ಹಾಗೂ ವನ್ಯಜೀವಿಗಳಿಗೆ ಅರಣ್ಯ ಸ್ನೇಹಿಯಾಗಿಸುವ ಕೆಲಸ ಮಾಡಲಾಗುತ್ತಿದೆ.