ETV Bharat / bharat

₹25 ಲಕ್ಷಕ್ಕೆ 2 ಹುಲಿ ಮರಿಗಳು ಮಾರಾಟಕ್ಕಿವೆ.. ವಾಟ್ಸ್​ಆ್ಯಪ್​ ಸ್ಟೇಟಸ್​​ ಹಾಕಿದ್ದವ ಅಂದರ್​

ಕಾಡುಪ್ರಾಣಿ ಹುಲಿಗಳನ್ನು ಸಾಕುವುದು, ಮಾರಾಟ ಮಾಡುವುದು ಅಪರಾಧ. ಹೀಗಿದ್ದರೂ 2 ಮರಿಗಳು 25 ಲಕ್ಷಕ್ಕೆ ಮಾರಾಟಕ್ಕಿವೆ ಎಂದು ಸ್ಟೇಟಸ್​ ಹಾಕಿಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

author img

By

Published : Sep 7, 2022, 9:34 PM IST

tiger-cubs-for-sale
ಹುಲಿ ಮರಿಗಳು ಮಾರಾಟ

ಚೆನ್ನೈ: ಪ್ರಾಣಿ, ಪಕ್ಷಿಗಳನ್ನು ನೋಂದಣಿ ಮಾಡಿಸದೇ ಸಾಕುವಂತಿಲ್ಲ. ಅಂತಹದರಲ್ಲಿ ಅವುಗಳನ್ನು ಮಾರಾಟಕ್ಕಿಟ್ಟರೆ ಬಿಟ್ಟಾರೆಯೇ?. ಮೂರು ತಿಂಗಳ ಎರಡು ಹುಲಿ ಮರಿಗಳು ಮಾರಾಟಕ್ಕಿವೆ. ಶೀಘ್ರವೇ ಸಂಪರ್ಕಿಸಿ ಎಂದು ವಾಟ್ಸ್​ಆ್ಯಪ್​ ಸ್ಟೇಟಸ್​ ಇಟ್ಟಿದ್ದ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಕೆಲವು ದಿನಗಳಿಂದ ಚೆನ್ನೈ ಮತ್ತು ವೆಲ್ಲೂರಿನಲ್ಲಿ ಹುಲಿ ಮರಿಗಳು ಮಾರಾಟಕ್ಕಿವೆ ಎಂಬ ಅವುಗಳ ಫೋಟೋ ಇರುವ ವಾಟ್ಸ್​ಆ್ಯಪ್​ ಸ್ಟೇಟಸ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ವೆಲ್ಲೂರು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪಾರ್ಥಿಬನ್​ ಎಂಬಾತ ಸಿಕ್ಕಿ ಬಿದ್ದಿದ್ದಾನೆ.

ಮೂರು ತಿಂಗಳ ಹುಲಿ ಮರಿ ಮಾರಾಟಕ್ಕಿವೆ. ಬುಕಿಂಗ್ ಮಾಡಿದ 10 ದಿನಗಳಲ್ಲಿ ವಿತರಣೆ ಮಾಡಲಾಗುವುದು. ಈ ಹುಲಿ ಮರಿಗಳ ಬೆಲೆ 25 ಲಕ್ಷ ರೂಪಾಯಿಗಳು. ಬೇಕಾದವರು ಶೀಘ್ರವೇ ಸಂಪರ್ಕಿಸಿ ಎಂದು ಬಂಧಿತ ಆರೋಪಿ ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿಕೊಂಡಿದ್ದ. ಇದರ ಸ್ಕ್ರೀನ್​ಶಾಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಸ್ಟೇಟಸ್​ ಹಾಕಿದ ಪಾರ್ಥಿಬನ್​ ವೆಲ್ಲೂರಿನ ಚರ್ಪನ್ನಮೇಡುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ತಿರುಪತಿಯಲ್ಲಿ ಕಾನೂನು ವ್ಯಾಸಂಗ ಮಾಡಿರುವ ಆತ, ಚೆನ್ನೈನ ಅಂಬತ್ತೂರಿನಲ್ಲಿ ಪೆಟ್​ಶಾಪ್ ಹೊಂದಿರುವ ಸ್ನೇಹಿತನ ಕೋರಿಕೆಯ ಮೇರೆಗೆ ಹುಲಿ ಮರಿಗಳ ಮಾರಾಟದ ಬಗ್ಗೆ ವಾಟ್ಸ್​ಆ್ಯಪ್​ ಸ್ಟೇಟಸ್ ಹಾಕಿದ್ದೇನೆ ಎಂದು ತಿಳಿಸಿದ್ದಾನೆ.

ಪಾರ್ಥಿಬನ್ ನೀಡಿದ ಮಾಹಿತಿಯ ಮೇರೆಗೆ ತಮಿಳುನಾಡಿನ ಆತನ ಸ್ನೇಹಿತನನ್ನು ವಿಚಾರಣೆ ನಡೆಸಲು ವನ್ಯಜೀವಿ ರಕ್ಷಣಾ ತಂಡ ಮುಂದಾಗಿದೆ. ಅಲ್ಲದೇ, ಆ ಹುಲಿ ಮರಿಗಳು ನಿಜವೋ ಅಲ್ಲವೋ ಎಂಬ ಬಗ್ಗೆಯೂ ಪರಿಶೀಲನೆ ನಡೆದಿದೆ.

ಓದಿ: ನವರಾತ್ರಿ ಆಚರಣೆ, ಗರ್ಬಾ ತರಗತಿಗಳಿಗೆ ಹಿಂದೂಯೇತರರಿಗೆ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.