ನವದೆಹಲಿ/ಗಾಜಿಯಾಬಾದ್: ಗಾಜಿಯಾಬಾದ್‌ನ ವಸತಿ ಪ್ರದೇಶದಲ್ಲಿ ಗುರುವಾರ ಹುಡುಗಿಯೊಬ್ಬಳು ಕಟ್ಟಡದ ಚಾವಣಿಯ ತುದಿಯಲ್ಲಿ ನಿಂತಿದ್ದಳು. ಈ ವಿಚಾರ ಭಾರಿ ಸಂಚಲನ ಮೂಡಿಸಿತ್ತು. ಆಕೆಗೆ ತಂದೆ ಗದರಿಸಿದರು, ಇದರಿಂದ ಸಿಟ್ಟಾದ ಹುಡುಗಿ ಕಟ್ಟಡದ ಮೇಲ್ಛಾವಣಿಯ ತುದಿಯಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಕಂಡ ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಗಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಹೌದು, ಉನ್ನತ ಪೊಲೀಸ್ ಅಧಿಕಾರಿಯ ಜಾಗರೂಕತೆವಹಿಸಿ, ಭಾವನಾತ್ಮಕವಾಗಿ ಸೆಳೆದು ಹುಡುಗಿಯ ಜೀವವನ್ನು ಉಳಿಸಿದ್ದಾರೆ.
ಈ ಹುಡುಗಿಯ ತಾಯಿ ಜುಲೈನಲ್ಲಿ ಸಾವನ್ನಪ್ಪಿದ್ದಾರೆ. ಅವಳು ತಂದೆಯ ವರ್ತನೆಯಿಂದ ಹೆದರುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ನವದೆಹಲಿಯ ಗಡಿಭಾಗದ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಗುರುವಾರ ನಡೆದ ಈ ಘಟನೆ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.
ಭಾವನಾತ್ಮಕ ಮನವಿಗೆ ಆತ್ಮಹತ್ಯೆ ನಿರ್ಧಾರ ಕೈಬಿಟ್ಟ ಹುಡುಗಿ: ಆಕೆಯನ್ನು ಕೆಳಗಿಳಿಸುವ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು. ನಂತರ ಎಸಿಪಿ ಸ್ವತಂತ್ರ ಸಿಂಗ್ ಅವರು, ಆ ಹುಡುಗಿಯ ಮನವೊಲಿಸುವಲ್ಲಿ ಅಂತಿಮವಾಗಿ ಸಫಲರಾಗಿದ್ದಾರೆ. "ನೀನು ನನ್ನ ಸಹೋದರಿ. ನನಗೆ ರಾಖಿ ಕಟ್ಟಿ. ನಾನು ನಿಮಗೆ ಬೆಂಬಲಿಸುತ್ತೇನೆ" ಎಂದು ಸಿಂಗ್ ಹೇಳುವ ಮೂಲಕ ಹುಡುಗಿಗೆ ಭಾವನಾತ್ಮಕ ಮನವಿ ಮಾಡಿದರು.
ಚಾವಣಿಯ ಮೇಲೆ ಹೋಗಿ ನಿಲ್ಲುವ ಮೊದಲು ಹುಡುಗಿ ಗಡಿಬಿಡಿಯಾಗಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೂ ಮುನ್ನ ಈ ಘಟನೆಯಿಂದ ಜನವಸತಿ ಪ್ರದೇಶದಲ್ಲಿ ಗದ್ದಲ ಉಂಟಾಗಿತ್ತು. ಇದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಆಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಹುಡಗಿಯು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದಳು ಎಂದು ಸ್ಥಳೀಯರು ಹೇಳಿದ್ದಾರೆ.
ಪೊಲೀಸರು ಹೇಳಿದ್ದೇನು?: ''ಈ ಪ್ರದೇಶವು ಇಂದಿರಾಪುರಂ ಪ್ರದೇಶದ ಅಭಯ್ ಖಂಡ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ತಂದೆಯ ವರ್ತನೆಯಿಂದ ತನಗೆ ಬೇಸರವಾಗಿದೆ ಎಂದು ಹುಡಗಿ ಪದೇ ಪದೆ ಹೇಳುತ್ತಿದ್ದಳು. ಗುರುವಾರ ಸಂಜೆ 6 ಗಂಟೆಗೆ ಇಂದಿರಾಪುರಂನಿಂದ ಹುಡಗಿಯೊಬ್ಬಳು ಹೌಸಿಂಗ್ ಸೊಸೈಟಿಯ ನಾಲ್ಕನೇ ಮಹಡಿ ಹತ್ತಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ'' ಎಂದು ಎಸಿಪಿ ಸ್ವತಂತ್ರ ಸಿಂಗ್ ತಿಳಿಸಿದ್ದಾರೆ.
ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಆಕೆಯನ್ನು ಕೆಳಗಿಳಿಸಲು ಮನವೊಲಿಸುವ ಪ್ರಯತ್ನ ಮಾಡಿದರು. ಕೆಳಗೆ ಇಳಿಸಿದ ಕೂಡಲೇ ಅವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಳು. ಇತ್ತೀಚೆಗಷ್ಟೇ ಆಕೆಯ ತಂದೆ ಆಕೆಯನ್ನು ಗದರಿಸಿದ್ದು, ಇದರಿಂದ ಆಕೆ ಭಯಗೊಂಡಿದ್ದಳು ಎಂದು ತಿಳಿದು ಬಂದಿದೆ. ಬಾಲಕಿ ಪೊಲೀಸರೊಂದಿಗೆ ಮಾತನಾಡುವಾಗ ತನ್ನ ತಂದೆಯ ವರ್ತನೆಯ ಬಗ್ಗೆ ಪದೇ ಪದೆ ಮಾತನಾಡುತ್ತಿದ್ದಳು'' ಎಂದು ಸಿಂಗ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಜುಲೈನಲ್ಲಿ ಭಾರತದ ಎಂಟು ಮೂಲಸೌಕರ್ಯ ವಲಯಗಳಲ್ಲಿ ಶೇ 8ರಷ್ಟು ಬೆಳವಣಿಗೆ... ಜಿಡಿಪಿ 7.8ಕ್ಕೆ ಏರಿಕೆ