ಲತೇಹಾರ್, (ಜಾರ್ಖಂಡ್) : ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಲತೇಹಾರ್ನ ಮನಿಕಾ ಪ್ರದೇಶದಲ್ಲಿ ಶನಿವಾರ ನಡೆದಿದೆ, ಇನ್ನೂ ಹಲವು ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಜಾರ್ಖಂಡ್‌ನ ಜಾಗ್ವಾರ್ ಲತೇಹಾರ್ ಪೊಲೀಸ್ ತಂಡವು ಟಿಪಿಸಿ (ತೃತೀಯಾ ಪ್ರಸ್ತುತಿ ಸಮಿತಿ) ಎಂಬ ಮಾವೋವಾದಿ ತಂಡದೊಂದಿಗೆ ಗುಂಡಿನ ಚಕಮಕಿ ನಡೆಸಿದೆ.
ಮೃತ ನಕ್ಸಲರನ್ನು ಟಿಎಸ್ಪಿಸಿ ಝೋನಲ್ ಕಮಾಂಡರ್ ಜಿತೇಂದ್ರ ಯಾದವ್ ಮತ್ತು ಚಂಚಲ್ ಸಿಂಗ್ ಎಂದು ಗುರುತಿಸಲಾಗಿದೆ. ಮೂರನೇ ನಕ್ಸಲನ ಗುರುತು ಪತ್ತೆಯಾಗಿಲ್ಲ. ಮನಿಕಾ ಪ್ರದೇಶದಲ್ಲಿ ದಟ್ಟಾರಣ್ಯವಿದ್ದು, ಈ ಅರಣ್ಯದಲ್ಲಿ ಹಲವರು ನಕ್ಸಲರು ತಪ್ಪಿಸಿಕೊಂಡಿದ್ದಾರೆ. ಘಟನೆ ನಡೆದ ಸ್ಥಳದಿಂದ ಬಂದೂಕು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಪ್ಪಿಸಿಕೊಂಡ ನಕ್ಸಲರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಪಂಜಾಬ್ನಲ್ಲಿ 'ಐ ಲವ್ ಪಾಕಿಸ್ತಾನ್' ಬರಹದ ಬಲೂನ್ ಪತ್ತೆ.. ಪೊಲೀಸ್ ತನಿಖೆ ಚುರುಕು
ಪೊಲೀಸರು ಹಲವು ಪ್ರದೇಶಗಳನ್ನು ಸುತ್ತುವರೆದಿದ್ದು, ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಮೃತರ ಬಗ್ಗೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.