ETV Bharat / bharat

ಮೂರು ಟನ್ ತೂಕದ ಸಮುದ್ರ ಸೌತೆ ಜಲಚರಗಳ ಕಳ್ಳ ಸಾಗಣೆ ತಪ್ಪಿಸಿದ ಪೊಲೀಸರು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೆಲೆಯಿರುವ ಸಮುದ್ರ ಸೌತೆ (ಸೀ ಕುಕುಂಬರ್) ಜಲಚರಗಳ ಕಳ್ಳಸಾಗಣೆಯನ್ನು ಪೊಲೀಸರು ತಪ್ಪಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

author img

By

Published : Nov 3, 2020, 11:08 PM IST

sea cucumber
ಸಮುದ್ರ ಸೌತೆ

ರಾಮೇಶ್ವರಂ (ತಮಿಳುನಾಡು): ಶ್ರೀಲಂಕಾಗೆ ಕಳ್ಳಸಾಗಣೆಯಾಗುತ್ತಿದ್ದ ಸಮುದ್ರಸೌತೆ (ಸೀ ಕುಕುಂಬರ್) ಜಲಚರಗಳನ್ನು ತಮಿಳುನಾಡಿನ ವೇತಾಳೈ ಬಳಿ ಪೊಲೀಸರು ವಶ ಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಪೊಲೀಸರು ಹಾಗೂ ಅರಣ್ಯಾಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 3 ಸಾವಿರ ಕೆ.ಜಿ ತೂಕದ ಸಮುದ್ರಸೌತೆ ಜಲಚರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಮುದ್ರಸೌತೆಗಳ ಮೌಲ್ಯ 1 ಕೋಟಿ ರೂಪಾಯಿಗೂ ಹೆಚ್ಚಿದ್ದು, ಇವುಗಳನ್ನು ಅಪಾಯದ ಅಂಚಿನಲ್ಲಿರುವ ಜಲಚರಗಳೆಂದು ಸರ್ಕಾರ ಗುರುತಿಸಿವೆ. ಇದರ ಜೊತೆಗೆ ವೈಲ್ಡ್​ ಲೈಫ್​ ಪ್ರೊಟೆಕ್ಷನ್ ಆ್ಯಕ್ಟ್​​ ಅಡಿಯಲ್ಲಿ ಇವುಗಳನ್ನು ರಕ್ಷಣೆ ಮಾಡಲಾಗಿದೆ.

ಶ್ರೀಲಂಕಾ ಹಾಗೂ ಆಗ್ನೇಯ ಏಷಿಯಾದ ರಾಷ್ಟ್ರಗಳಲ್ಲಿ ಇವುಗಳಿಗೆ ಭಾರಿ ಬೇಡಿಕೆ ಇದ್ದು, ಆಹಾರ ಮತ್ತು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.