ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮೂವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಮೂವರು ಸಹಚರರನ್ನು ಬಂಧಿಸಿದ್ದು, ಅವರ ಬಳಿಯಿದ್ದ ಮದ್ದುಗುಂಡು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಜುಲಾ ಕಾಲು ಸೇತುವೆ ಬಳಿಯ ಕಲ್ಗೈಯಲ್ಲಿ ಶನಿವಾರ ತಪಾಸಣೆ ಮತ್ತು ಗಸ್ತು ತಿರುಗುತ್ತಿದ್ದಾಗ ಭದ್ರತಾ ಪಡೆಗಳು ಕಮಲ್‌ಕೋಟೆಯಿಂದ ರಾಷ್ಟ್ರೀಯ ಹೆದ್ದಾರಿಯ ಕಡೆಗೆ ಬ್ಯಾಗ್‌ಗಳನ್ನು ಹೊತ್ತು ಬರುತ್ತಿದ್ದ ಇಬ್ಬರು ಶಂಕಿತರನ್ನು ಪತ್ತೆ ಹಚ್ಚಿ ತಡೆದಿದ್ದಾರೆ. ಇವರನ್ನು ಮಡಿಯನ್ ಕಮಲಕೋಟೆ ನಿವಾಸಿಗಳಾದ ಝಮೀರ್ ಅಹ್ಮದ್ ಖಾಂಡೆ ಮತ್ತು ಮೊಹಮ್ಮದ್ ನಸೀಮ್ ಖಾಂಡೆ ಎಂದು ಗುರುತಿಸಲಾಗಿದೆ. ಶೋಧ ಕಾರ್ಯದ ವೇಳೆ ಬಂಧಿತರ ಬಳಿ ಮೂರು ಚೀನಾದ ಗ್ರೆನೇಡ್‌ಗಳು ಮತ್ತು 2.5 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಬಂಧಿತರನ್ನು ನಿರಂತರ ವಿಚಾರಣೆ ನಡೆಸಲಾಗಿದೆ. ಈ ವೇಳೆ ಇಬ್ಬರು ಆರೋಪಿಗಳು ಅಕ್ರಮವಾಗಿ ಗ್ರೆನೇಡ್‌ಗಳನ್ನು ಪಡೆದುಕೊಂಡಿದ್ದು, ಯಾವುದೋ ಭಯೋತ್ಪಾದಕ ಕೃತ್ಯ ಎಸಗಲು ಮಂಜೂರ್ ಅಹ್ಮದ್ ಭಟ್ಟಿ ಎಂಬಾತ ನಗದು ಹಣ ನೀಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಇದರ ಆಧಾರದ ಮೇಲೆ ಭಟ್ಟಿಯನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಭಯೋತ್ಪಾದಕ ಕೃತ್ಯಗಳ ಕಮಿಷನ್‌ಗಾಗಿ ಇಬ್ಬರು ವ್ಯಕ್ತಿಗಳಿಗೆ ಗ್ರೆನೇಡ್‌ಗಳು ಮತ್ತು ನಗದು ಪೂರೈಕೆ ಮಾಡಿದ್ದ ಹಾಗೂ ತನ್ನ ಮನೆಯ ಸಮೀಪದ ಸ್ಥಳದಲ್ಲೇ ಒಂದು ಹ್ಯಾಂಡ್ ಗ್ರೆನೇಡ್ ಮತ್ತು ಹಣವನ್ನು ಇಟ್ಟುಕೊಂಡಿದ್ದ ಕುರಿತ ಮಾಹಿಯನ್ನು ವಿಚಾರಣೆಯಲ್ಲಿ ಹೊರಹಾಕಿದ್ದಾರೆ.
-
Police alongwith security forces arrested 3 terrorist associates linked with proscribed terror outfit LeT/TRF and recovered arms & ammunition and other incriminating materials from their possession in Baramulla.@JmuKmrPolice@KashmirPolice@DIGBaramulla@Amod_India@DivyaDev_ips pic.twitter.com/OvYFLz6sJm
— Baramulla Police (بارہمولہ پولیس) (@BaramullaPolice) November 26, 2023 " class="align-text-top noRightClick twitterSection" data="
">Police alongwith security forces arrested 3 terrorist associates linked with proscribed terror outfit LeT/TRF and recovered arms & ammunition and other incriminating materials from their possession in Baramulla.@JmuKmrPolice@KashmirPolice@DIGBaramulla@Amod_India@DivyaDev_ips pic.twitter.com/OvYFLz6sJm
— Baramulla Police (بارہمولہ پولیس) (@BaramullaPolice) November 26, 2023Police alongwith security forces arrested 3 terrorist associates linked with proscribed terror outfit LeT/TRF and recovered arms & ammunition and other incriminating materials from their possession in Baramulla.@JmuKmrPolice@KashmirPolice@DIGBaramulla@Amod_India@DivyaDev_ips pic.twitter.com/OvYFLz6sJm
— Baramulla Police (بارہمولہ پولیس) (@BaramullaPolice) November 26, 2023
ಇದರಿಂದ ಚೀನಾದ ಹ್ಯಾಂಡ್ ಗ್ರೆನೇಡ್ ಮತ್ತು 2.17 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಸದ್ಯ ಭಟ್ಟಿಯನ್ನೂ ಬಂಧಿಸಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ. ಇವರು ಭಯೋತ್ಪಾದಕ ಸಹಚರರಾಗಿ ಕೆಲಸ ಮಾಡುತ್ತಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿ, ಟಿಆರ್‌ಎಫ್‌ನೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭಯೋತ್ಪಾದಕರ ಪರ ಗೂಢಚಾರಿಕೆ ಮಾಡುತ್ತಿದ್ದ ಶಂಕೆ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಪೊಲೀಸರು ಆಟೋ ಚಾಲಕ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಪಂಜಾಬ್‌ನ ಭಟಿಂಡಾ ಮೂಲದ ಅಮೃತ್ ಗಿಲ್ ಅಲಿಯಾಸ್ ಅಮೃತ್ ಪಾಲ್, ಗಾಜಿಯಾಬಾದ್‌ನ ಫರೀದ್‌ನಗರ ನಿವಾಸಿ ರಿಯಾಜುದ್ದೀನ್ ಎಂಬುವವರೇ ಬಂಧಿತರು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಐಎಸ್‌ಐ ಪರ ಗೂಢಚಾರಿಕೆ, ಭಾರತೀಯ ಸೇನೆಯ ಗೌಪ್ಯ ಮಾಹಿತಿ ರವಾನೆ: ಆಟೋ ಚಾಲಕ ಸೇರಿ ಇಬ್ಬರ ಸೆರೆ