ETV Bharat / bharat

2ಕುಟುಂಬಗಳ ನಡುವೆ ಮಾರಾಮಾರಿ; ಪೊಲೀಸರ ಮುಂದೆಯೇ ಗುಂಡು ತಿಂದು ಮೂವರ ಸಾವು - ಮೂವರಿಗೆ ಗುಂಡು

ಜಮೀನು ವಿವಾದ ಸಂಬಂಧ ಪೊಲೀಸರ ಮುಂದೆಯೇ ವ್ಯಕ್ತಿಯೊಬ್ಬ ಮೂವರಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

three people killed in land disputes in gagsina village gharaunda Karnal
ಎರಡು ಕುಟುಂಬಗಳ ನಡುವೆ ಮಾರಾಮಾರಿ
author img

By

Published : Dec 16, 2020, 10:26 PM IST

ಕರ್ನಾಲ್ (ಹರಿಯಾಣ) : ಜಮೀನು ವಿವಾದ ಸಂಬಂಧ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು ಘಟನೆಯಲ್ಲಿ ವ್ಯಕ್ತಿಯೊಬ್ಬ ಮೂವರನ್ನು ಗುಂಡಿಕ್ಕಿ ಕೊಂದಿದ್ದಾನೆ. ಹರಿಯಾಣದ ಘರೌಂಡಾ ವಿಧಾನಸಭೆಯ ಗಗಸಿನಾ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಭೂಮಿ ವಿಷಯವಾಗಿ ಖಾನ್ ಕುನ್ಬಾ ಮತ್ತು ಕೃಷ್ಣ ಕುನ್ಬಾ ಎಂಬ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ಹೋಗಿದ್ದರಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಸಿಟ್ಟಿನ ಭರದಲ್ಲಿ ಖಾನ್ ಕುನ್ಬಾ ಪೊಲೀಸರ ಮುಂದೆಯೇ ಕೃಷ್ಣ ಕುನ್ಬಾ ಕಡೆಯ ಮೂವರು ವ್ಯಕ್ತಿಗಳಿಗೆ ಗುಂಡು ಹಾರಿಸಿದ್ದಾನೆ. ಗುಂಡೇಟು ತಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಜಮೀನು ವಿವಾದ ಸಂಬಂಧ ಎರಡು ಕುಟುಂಬಗಳ ನಡುವೆ ಮಾರಾಮಾರಿ

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದಿರುವುದರಿಂದ ಈ ಸಾವುಗಳು ಸಂಭವಿಸಿವೆ ಎನ್ನಲಾಗುತ್ತಿದೆ.

ಪೊಲೀಸರು ಕ್ರಮ ತೆಗೆದುಕೊಳ್ಳುವ ಬದಲು ಆರೋಪಿ ಕಡೆಯವರಿಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿ ಕೃಷ್ಣ ಕುನ್ಬಾ ಹಾಗೂ ಈತನ ಸಂಬಂಧಿಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.