ETV Bharat / bharat

ಫ್ರಾನ್ಸ್​ನಿಂದ ಭಾರತಕ್ಕೆ ಬಂದವು ಮತ್ತೆ ಮೂರು ರಫೇಲ್​ ವಿಮಾನಗಳು.. ಸೇನೆಗೆ ಸೇರಲು ಸಜ್ಜು

ಮೂರನೇ ಬ್ಯಾಚ್​​ನ ರಫೇಲ್ ಫೈಟರ್ ಜೆಟ್​ಗಳು ಫ್ರಾನ್ಸ್​ನಿಂದ ಭಾರತಕ್ಕೆ ಬಂದಿದ್ದು, ಭಾರತೀಯ ವಾಯುಪಡೆಗೆ ಸೇರಲು ಸಜ್ಜಾಗಿವೆ.

author img

By

Published : Jan 28, 2021, 9:37 AM IST

Updated : Jan 28, 2021, 9:46 AM IST

Three More Rafale Fighter Jets Leave For India From France
ರಫೇಲ್

ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿ, ಸೇನೆಯ ಸಾಮರ್ಥ್ಯ ಇನ್ನಷ್ಟು ಬಲಪಡಿಸಲು ಮತ್ತೆ ಮೂರು ರಫೇಲ್ ಫೈಟರ್ ಜೆಟ್​ಗಳು ಫ್ರಾನ್ಸ್​ನಿಂದ ಭಾರತಕ್ಕೆ ಬಂದಿವೆ.

ನಿನ್ನೆ ರಾತ್ರಿ ಫ್ರಾನ್ಸ್​ನಿಂದ ಹೊರಟ ಈ ಮೂರು ರಫೇಲ್ ಜೆಟ್‌ಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮಲ್ಟಿ ರೋಲ್ ಟ್ಯಾಂಕರ್ ಟ್ರಾನ್ಸ್‌ಪೋರ್ಟ್ (ಎಂಆರ್‌ಟಿಟಿ) ಇಂಧನ ಪೂರೈಕೆ ಮಾಡಿದೆ ಎಂದು ಫ್ರಾನ್ಸ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಮೂರನೇ ಬ್ಯಾಚ್​​ನ ವಿಮಾನಗಳು ಇವಾಗಿದ್ದು, 2020ರ ಜುಲೈ 29ರಂದು ಮೊದಲ ಬ್ಯಾಚ್​ನಲ್ಲಿ ಐದು ಜೆಟ್​ಗಳು ದೇಶಕ್ಕೆ ಆಗಮಿಸಿದ್ದವು. ನವೆಂಬರ್​ 3ರಂದು ಎರಡನೇ ಬ್ಯಾಚ್​​ನ ಮೂರು ಜೆಟ್​ಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ನಾಲ್ಕು ವರ್ಷಗಳ ಹಿಂದೆ ಭಾರತವು, ಫ್ರಾನ್ಸ್‌ ನಿರ್ಮಿತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು.

ಇದನ್ನೂ ಓದಿ: 150 ರಾಷ್ಟ್ರಗಳಿಗೆ ವೈದ್ಯಕೀಯ​ ಸಹಕಾರ ನೀಡಿದ ಭಾರತ

ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್​ ಯುದ್ಧ ವಿಮಾನಗಳಿಗಿದೆ. 'ಏರ್​​ ಟು ಏರ್'​ ಅಂದರೆ ಬಾನಿನಲ್ಲೇ ಶತ್ರು ಸೇನೆಯ ವಿಮಾನಗಳ ಮೇಲೆ ಬಾಂಬ್ ದಾಳಿ ಮಾಡುವ ಜೊತೆಗೆ 'ಏರ್​ ಟು ಅರ್ತ್'​ ಅಂದರೆ ಆಕಾಶದಿಂದ ಭೂಮಿಯ ಮೇಲಿರುವ ಶತ್ರು ಪಡೆಯ ಮೇಲೂ ಬಾಂಬ್ ಹಾಕುವ ಸಾಮರ್ಥ್ಯವನ್ನು ಈ ಯುದ್ಧ ವಿಮಾನಗಳು ಹೊಂದಿವೆ.

Last Updated : Jan 28, 2021, 9:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.