ETV Bharat / bharat

ಸಾವಿರಾರು ಕ್ವಿಂಟಲ್ ಕಿತ್ತಳೆ ರಸ್ತೆ ಬದಿ ಸುರಿದ ರೈತರು: ಕಾರಣ ಇಲ್ಲಿದೆ.. - ರಸ್ತೆ ಬದಿ ಕಿತ್ತಳೆ ಸುರಿದ ರೈತರು

ಕಿತ್ತಳೆ ಮರಗಳಿಗೆ ತಗುಲಿದ ಶಿಲೀಂಧ್ರ ರೋಗದಿಂದಾಗಿ ಹಾಗೂ ಧಾರಾಕಾರ ಮಳೆಯಿಂದ ಕಿತ್ತಳೆ ಬೆಳೆ ಹಾಳಾಗಿದ್ದು, ವಿದರ್ಭ ಪ್ರದೇಶದ ರೈತರು ಕಿತ್ತಳೆ ಹಣ್ಣನ್ನು ರಸ್ತೆ ಬದಿ ಸುರಿದಿದ್ದಾರೆ.

thousands of quintals of oranges were thrown by farmers on the road
ಸಾವಿರಾರು ಕ್ವಿಂಟಾಲ್ ಕಿತ್ತಳೆ ರಸ್ತೆಗೆ ಸುರಿದ ರೈತರು: ಕಾರಣ ಇಲ್ಲಿದೆ..
author img

By

Published : Oct 28, 2021, 10:52 AM IST

Updated : Oct 28, 2021, 12:24 PM IST

ಅಮರಾವತಿ(ಮಹಾರಾಷ್ಟ್ರ): ಕಿತ್ತಳೆ ಹಣ್ಣಿಗೆ ವಿದರ್ಭ ಪ್ರದೇಶ ಅಂದರೆ ಮಹಾರಾಷ್ಟ್ರದ ನಾಗಪುರ ಮತ್ತು ಅಮರಾವತಿ ಒಳಗೊಂಡ ಹೆಸರುವಾಸಿ. ಇಲ್ಲಿನ ಕಿತ್ತಳೆ ಬೆಳೆಗಾರರು ಹಲವು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಿತ್ತಳೆ ಕೃಷಿ ವಿನಾಶದ ಅಂಚಿನಲ್ಲಿದೆ.

ಕಿತ್ತಳೆ ಹಣ್ಣು ಬೆಳೆದ ರೈತರು ಸಾವಿರಾರು ಕ್ವಿಂಟಲ್ ಹಣ್ಣನ್ನು ರಸ್ತೆಗೆ ಸುರಿದಿದ್ದಾರೆ. ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕಿತ್ತಳೆ ಮರಗಳ ಕಾಂಡಕ್ಕೆ ಶಿಲೀಂಧ್ರ ರೋಗ ತಗುಲಿದೆ. ಇದರಿಂದ ಕಿತ್ತಳೆ ಹಣ್ಣುಗಳು ಮರದಿಂದ ಉದುರಲಾರಂಭಿಸಿವೆ.

ಕಿತ್ತಳೆ ಬೆಳೆಗಾರರ ಪರಿಸ್ಥಿತಿ

ಇದರ ಜೊತೆಗೆ ಕಿತ್ತಳೆ ತೋಟಗಳಿಂದ ಮಾರುಕಟ್ಟೆಗೆ ತಲುಪುವ ಹಾಗೂ ಸುರಕ್ಷಿತ ರಸ್ತೆಗಳಿಗೆ ತಲುಪುವ ರಸ್ತೆಗಳೂ ಕೂಡಾ ಸಂಪೂರ್ಣ ಕೆಸರು ಮಯವಾಗಿದ್ದು, ಅವುಗಳನ್ನು ಯಾವ ರೀತಿಯಲ್ಲಿ ಮಾರುಕಟ್ಟೆಗೆ ಸಾಗಿಸಬೇಕು ಎಂಬುದು ರೈತರನ್ನು ಕಾಡುತ್ತಿದೆ.

ಕಿತ್ತಳೆ ವ್ಯಾಪಾರಿಗಳೂ ಕೂಡಾ ಈಗ ಕಿತ್ತಳೆ ಕೊಳ್ಳಲು ಮುಂದಾಗುತ್ತಿಲ್ಲ ಎಂಬುದೂ ಕೂಡಾ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ದೀಪಾವಳಿ ಹಬ್ಬಕ್ಕೆ ರೈತರ ಬಾಳಿಗೆ ಬೆಳಕಾಗಬೇಕಿದ್ದ ಕಿತ್ತಳೆ, ಅಂಧಕಾರ ಮೂಡಿಸುವಂತಿದೆ. ಸಾಕಷ್ಟು ಬೆಳೆಗಾರರು ಈಗಾಗಲೇ ಕಿತ್ತಳೆಯನ್ನು ರಸ್ತೆಗೆ ಸುರಿದಿದ್ದು, ಪರಿಹಾರಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿ ಕೊಲೆ ಮಾಡಿ ಮುಳ್ಳಿನ ಕಂಟಿಯಲ್ಲಿ ಬಿಸಾಕಿ ಹೋದ ಕಿರಾತಕರು

Last Updated : Oct 28, 2021, 12:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.