ಶ್ರೀನಗರ : ಉದ್ದೇಶಿತ ಹತ್ಯೆಗಳಲ್ಲಿ ನಾಗರಿಕರನ್ನು ಕೊಲ್ಲುವವರನ್ನು ಭದ್ರತಾ ಪಡೆಗಳು ಮತ್ತು ಆಡಳಿತವು ಬಿಡುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಎಚ್ಚರಿಕೆ ನೀಡಿದ್ದಾರೆ. ಕಾಶ್ಮೀರದಲ್ಲಿ ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಿನ್ಹಾ ಹೇಳಿದ್ದಾರೆ.
ಪಿಎಂ ಪ್ಯಾಕೇಜ್ ಉದ್ಯೋಗಿ ಮತ್ತು ಜಮ್ಮುವಿನ ಮಹಿಳಾ ಶಿಕ್ಷಕಿ ಸೇರಿದಂತೆ 17 ನಾಗರಿಕರು ಕಳೆದ ತಿಂಗಳುಗಳಲ್ಲಿ ಕೊಲ್ಲಲ್ಪಟ್ಟರು. ಇದು ಪಿಎಂ ಪ್ಯಾಕೇಜ್ ಮತ್ತು ಜಮ್ಮು ಮೂಲದ ಉದ್ಯೋಗಿಗಳಲ್ಲಿ ಭಾರೀ ಭಯವನ್ನು ಸೃಷ್ಟಿಸಿದೆ. ಹತ್ಯೆಗಳ ನಂತರ ಉದ್ಯೋಗಿಗಳ ಸುರಕ್ಷತೆಗಾಗಿ ಪಟ್ಟಣಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಿಯೋಜಿಸಿದೆ.
ಜೊತೆಗೆ ಪಿಎಂ ಪ್ಯಾಕೇಜ್ ಉದ್ಯೋಗಿಗಳ ವಸತಿ ಕಾಲೋನಿಗಳ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದಾಗ್ಯು, ಪಿಎಂ ಪ್ಯಾಕೇಜ್ ಉದ್ಯೋಗಿಗಳು ಕಾಶ್ಮೀರದಿಂದ ಜಮ್ಮುವಿಗೆ ಪಲಾಯನ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ದೆಹಲಿಯಲ್ಲಿ ಎಲ್‌ಜಿ ಮನೋಜ್ ಸಿನ್ಹಾ, ಸೇನೆ, ಪೊಲೀಸ್ ಮತ್ತು ಇತರ ಭದ್ರತಾ ಏಜೆನ್ಸಿಗಳ ಮುಖ್ಯಸ್ಥರೊಂದಿಗೆ ಸಭೆಗಳನ್ನು ನಡೆಸಿದ್ದಾರೆ.
ಇದನ್ನೂ ಓದಿ: ಜನ್ಮದಿನ ಆಚರಿಸಿ ಬರುವಾಗ ಜವರಾಯನ ಅಟ್ಟಹಾಸ: ಹೊತ್ತಿ ಉರಿದ ಬಸ್,7 ಜನ ಸಜೀವ ದಹನ; ಮೋದಿ ಸಂತಾಪ