ಲಕ್ನೋ: ರಂಜಾನ್ ತಿಂಗಳಲ್ಲಿ ಉಪವಾಸ ಆಚರಿಸುವವರು ಕೋವಿಡ್ -19 ತಡೆ ಲಸಿಕೆ ಪಡೆಯಬಹುದು ಎಂದು ಇಲ್ಲಿನ ಪ್ರಮುಖ ಸುನ್ನಿ ಧರ್ಮಗುರು 'ಫತ್ವಾ' ಹೊರಡಿಸಿದ್ದಾರೆ.
ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಅವರು ಹೊರಡಿಸಿರುವ ಫತ್ವಾ ಪ್ರಕಾರ, "ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಸುರಕ್ಷಿತವಾಗಿರಲು ವ್ಯಾಕ್ಸಿನೇಷನ್ ಅವಶ್ಯಕವಾಗಿರುವ ಸಮಯದಲ್ಲಿ, ರಂಜಾನ್‌ಗೆ ಉಪವಾಸ ಮಾಡುವಾಗ ಲಸಿಕೆ ಹಾಕಿಕೊಳ್ಳಬಹುದು" ಎಂದು ತಿಳಿಸಿದ್ದಾರೆ.
"ಕೋವಿಡ್ ವ್ಯಾಕ್ಸಿನೇಷನ್‌ನಿಂದಾಗಿ ರೋಜಾ ಮುರಿಯುವುದಿಲ್ಲ. ವ್ಯಾಕ್ಸಿನೇಷನ್ ಇಂಟ್ರಾಮಸ್ಕುಲರ್ ಇಂಜೆಕ್ಷನ್ ಆದ್ದರಿಂದ ಜೀರ್ಣವಾಗುವುದಿಲ್ಲ. ಇದರಿಂದ ನಿಮ್ಮ ಉಪವಾಸಕ್ಕೂ ಹಾನಿಯಾಗಲಾರದು. ಮುಸ್ಲಿಮರನ್ನು ಅವರ ಯೋಗಕ್ಷೇಮಕ್ಕೆ ಬದ್ಧತೆಯ ಭಾಗವಾಗಿ ವ್ಯಾಕ್ಸಿನೇಷನ್ ಪಡೆಯಲು ನಾವು ಪ್ರೋತ್ಸಾಹಿಸುತ್ತಿದ್ದೇವೆ "ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 1,84,372 ಜನರಿಗೆ ಸೋಂಕು; ಸಾವಿರಕ್ಕೂ ಹೆಚ್ಚು ಮಂದಿ ಸಾವು
"ಕೋವಿಡ್ ರೋಗಲಕ್ಷಣಗಳನ್ನು ಅನುಭವಿಸುತ್ತಿರುವವರು ತಕ್ಷಣವೇ ತಮ್ಮನ್ನು ಪರೀಕ್ಷೆಗೆ ಒಳಪಡಿಸಬೇಕು. ಅನಾರೋಗ್ಯದಿಂದ ಬಳಲುತ್ತಿರುವವರು ಮೊದಲು ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆಗಳನ್ನು ತೆಗೆದುಕೊಳ್ಳಬೇಕು"ಎಂದು ಸಲಹೆ ನೀಡಿದ್ದಾರೆ.
ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಸಹ ಇತ್ತೀಚೆಗೆ ಕೋವಿಡ್ ಲಸಿಕೆ ಪಡೆದಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ಸಾವಿನ ಸಂಖ್ಯೆ ಹೆಚ್ಚಳ: ಸೂರತ್ನ ಶವಾಗಾರದ ಕುಲುಮೆಗಳಲ್ಲಿ ಬಿರುಕು