ಕೊಯಮತ್ತೂರು : ತಮಿಳುನಾಡು ಜೂನಿಯರ್ ಕ್ರಿಕೆಟ್ ತಂಡದ(19 ವರ್ಷದೊಳಗಿನವರು)ನಾಯಕನಾಗಿ ನೀಲಗಿರಿ ಜಿಲ್ಲೆಯ ಪ್ರವೀಣ್ ತ್ಯಾಗರಾಜನ್ ಆಯ್ಕೆಯಾಗಿದ್ದಾರೆ. ಇವರು ಕಾರುಣ್ಯ ಸಂಸ್ಥೆಯಲ್ಲಿ ಬಿ.ಕಾಂ ಮೂರನೇ ವರ್ಷದಲ್ಲಿ ಓದುತ್ತಿದ್ದಾರೆ. ಇವರು ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಪ್ರಸ್ತುತ ಅವರು ತಮಿಳುನಾಡು ಜೂನಿಯರ್ ಕ್ರಿಕೆಟ್ ತಂಡದಲ್ಲಿ (19 ವರ್ಷದೊಳಗಿನವರು) ನಾಯಕರಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರವೀಣ್, 'ಶಾಲೆಯಲ್ಲಿ ಓದುವಾಗ ಕ್ರಿಕೆಟ್‌ನಲ್ಲಿ ತುಂಬಾ ಆಸಕ್ತಿ ಇತ್ತು. ನನ್ನ ಸಹ ಆಟಗಾರರ ಪ್ರೋತ್ಸಾಹದಿಂದಾಗಿ ಈಗ ನಾಯಕನಾಗಿ ಆಯ್ಕೆಯಾಗಿದ್ದೇನೆ. ನಿಮ್ಮ ಕನಸಿನೆಡೆಗೆ ಸಾಗಿದರೆ ಯಶಸ್ಸು ಸುಲಭ. ಧೋನಿ ನನಗೆ ಮಾರ್ಗದರ್ಶನ ನೀಡಿದರು. ಹಲವು ವೈಫಲ್ಯಗಳ ನಂತರ ನಾನು ಈ ಸ್ಥಾನಕ್ಕೆ ಬಂದಿದ್ದೇನೆ' ಎಂದು ಸಂತಸ ಹಂಚಿಕೊಂಡಿದ್ದಾರೆ.
ಚೆನ್ನೈ, ಹೈದರಾಬಾದ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಆಡಿರುವ ಇವರಿಗೆ ರಾಷ್ಟ್ರಮಟ್ಟದಲ್ಲಿ ಸಾಧನೆ ಕನಸಿದೆ. ಚಿಕ್ಕ ವಯಸ್ಸಿನಲ್ಲಿ ಸಿಕ್ಕ ಈ ಜವಾಬ್ದಾರಿಗೆ ಸಂತಸ ಗೊಂಡಿರುವ ಪ್ರವೀಣ್ 'ನಾನೊಬ್ಬ ಆಲ್ ರೌಂಡರ್ ಎಲ್ಲರನ್ನೂ ಒಗ್ಗೂಡಿಸಿ ತಂಡದ ಯಶಸ್ಸಿಗೆ ಶ್ರಮಿಸುತ್ತೇನೆ' ಎಂದಿದ್ದಾರೆ.
ಇದಕ್ಕೂ ಮುನ್ನ ತಮಿಳುನಾಡು ಜೂನಿಯರ್ ತಂಡದ ನಾಯಕರಾಗಿ ಆಯ್ಕೆಯಾದ ಪ್ರವೀಣ್ ಅವರನ್ನು ಕಾರುಣ್ಯ ವಿಶ್ವವಿದ್ಯಾಲಯದ ಕುಲಪತಿ ಪೌಲ್ ದಿನಕರನ್ ಮತ್ತು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅಭಿನಂದಿಸಿದರು. ವಿಶ್ವವಿದ್ಯಾನಿಲಯವು ಅವರಿಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದೆ.
ಇದನ್ನೂ ಓದಿ : ಕಾಮನ್‌ವೆಲ್ತ್ ಗೇಮ್ಸ್: ಭಾರತದ ಕ್ರೀಡಾಪಟುಗಳೊಂದಿಗೆ ಮೋದಿ ಸಂವಾದ