ETV Bharat / bharat

ಸತತ ಮೂರನೇ ಬಾರಿಗೆ ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ ಯೆಚುರಿ ಆಯ್ಕೆ

ಕೇರಳದ ಕಣ್ಣೂರಿನಲ್ಲಿ ನಡೆದ 23ನೇ ಸಿಪಿಐ ಪ್ರತಿನಿಧಿಗಳ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ ಯೆಚುರಿ ಅವರನ್ನು ಮರು ನೇಮಕ ಮಾಡಲಾಗಿದೆ..

ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ ಯೆಚುರಿ ಆಯ್ಕೆ

author img

By

Published : Apr 10, 2022, 4:15 PM IST

ಕಣ್ಣೂರು(ಕೇರಳ) : ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ ಯೆಚುರಿ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪಕ್ಷದ ಇತಿಹಾಸದಲ್ಲಿ ಇದೇ ವೇಳೆ ಮೊದಲ ಬಾರಿಗೆ ಪೊಲಿಟ್​ಬ್ಯುರೋದಲ್ಲಿ ದಲಿತ ನಾಯಕನಿಗೆ ಸ್ಥಾನ ನೀಡಲಾಗಿದೆ.

2015ರಲ್ಲಿ ನಡೆದ ಪ್ರತಿನಿಧಿಗಳ ಸಭೆಯಲ್ಲಿ ಪ್ರಕಾಶ್​ ಕಾರಟ್​ ಸ್ಥಾನಕ್ಕೆ ಯೆಚುರಿ ನೇಮಕವಾಗಿದ್ದರು. 2018ರಲ್ಲೂ ಎರಡನೇ ಬಾರಿಗೆ ಮುಂದುವರೆದಿದ್ದರು. ಈಗ 3ನೇ ಅವಧಿಗೂ ಅವರೇ ಪ್ರಧಾನ ಕಾರ್ಯದರ್ಶಿ ನೇಮಕವಾಗಿದ್ದಾರೆ. ಇತ್ತ, ಪೊಲಿಟ್​ಬ್ಯುರೋದಲ್ಲಿ ಪಕ್ಷದ ದಲಿತ ನಾಯಕ, ಪಶ್ಚಿಮ ಬಂಗಾಳದ ಡಾ.ರಾಮಚಂದ್ರ ದೋಮ್​ ಅವರಿಗೆ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಪಕ್ಷದಲ್ಲಿ ದಲಿತ ನಾಯಕರ ಪ್ರಾತಿನಿಧ್ಯ ಕಡಿಮೆ ಎಂದು ಯೆಚುರಿ ಹೇಳಿದ್ದರು. ಇದರ ಬೆನ್ನಲೇ ದಲಿತರಿಗೆ ಅವಕಾಶ ನೀಡಲಾಗಿದೆ. ಪೊಲಿಟ್​ಬ್ಯುರೋದಲ್ಲಿ 17 ಜನ ಸದಸ್ಯರು ಇರಲಿದ್ದಾರೆ.

ಇದನ್ನೂ ಓದಿ: 'ಜಗತ್ತಿನಾದ್ಯಂತ ಅಪಹಾಸ್ಯಕ್ಕೆ ಒಳಗಾಗಿರುವ ಪಕ್ಷ ನಮ್ಮದಲ್ಲ': ರಾಹುಲ್‌ಗೆ ಮಾಯಾವತಿ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.