ಸೋಲ್: LG ಡಿಸ್ಪ್ಲೇಯಲ್ಲಿ(ಪರದೆ) 'ಥಿನ್ ಆಕ್ಚುಯೇಟರ್ ಸೌಂಡ್ ಸೊಲ್ಯೂಷನ್' (ಅತಿ ತೆಳುವಾದ ಧ್ವನಿ ವಾಹಕ) ನೂತನ ಅಭಿವೃದ್ಧಿಪಡಿಸಿದ್ದು, ಶೀಘ್ರ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಆಟೋಮೊಬೈಲ್‌ಗಳಿಗೆ ಈ ಧ್ವನಿ ತಂತ್ರಜ್ಞಾನ ಹೊಸತದಾಗಿದೆ. ಹಳೆಯ ಸ್ಪೀಕರ್ ಗಿಂತ ಭಿನ್ನವಾಗಿದ್ದು, ಹೊರಗಿನಿಂದಲೂ ಕಾಣಿಸುವುದಿಲ್ಲ.
ಧ್ವನಿ ಸುರುಳಿಗಳು, ಕೋನ್‌ಗಳು ಮತ್ತು ಆಯಸ್ಕಾಂತಗಳಂಥ ಘಟಕಗಳಿಂದಾಗಿ ಸ್ಪೀಕರ್‌ಗಳು ಸಾಮಾನ್ಯವಾಗಿ ದೊಡ್ಡದು ಮತ್ತು ಭಾರವಾಗಿವೆ. LG ಡಿಸ್ಪ್ಲೇಯ ಫಿಲ್ಮ್-ಟೈಪ್ ಎಕ್ಸೈಟರ್ ತಂತ್ರಜ್ಞಾನವು 'ಥಿನ್ ಆಕ್ಚುಯೇಟರ್ ಸೌಂಡ್ ಸೊಲ್ಯೂಶನ್' ಅನ್ನು ಸ್ಲಿಮ್ ಮತ್ತು ಹಗುರವಾಗಿದೆ. ಇದು ಕಾರುಗಳಿಗೆ ಸೂಕ್ತ ಸ್ಪೀಕರ್ ಆಗಿದೆ.
ಹೊಸ ಸ್ಪೀಕರ್ 2.5 ಎಂಎಂ ದಪ್ಪ ಇರುತ್ತದೆ. ಇದು ಪಾಸ್‌ಪೋರ್ಟ್ ಗಾತ್ರದಲ್ಲಿ (150 ಎಂಎಂ x 90 ಎಂಎಂ) ಬರಲಿದೆ. ಇದು ಹಗುರವಾಗಿದೆ. ಇದರ ತೂಕ ಎರಡು ನಾಣ್ಯಗಳಿಗೆ ಸಮಾನವಾಗಿದ್ದು 40 ಗ್ರಾಂ ಮಾತ್ರ. ಇದು ಭಾರಿ ಕುತೂಹಲ ಸೃಷ್ಟಿಸಿದೆ.
"ಸ್ಥಳ, ವಿನ್ಯಾಸ ಪರಿಸರ ಸ್ನೇಹಿ ಅಂಶಗಳ ಅನುಕೂಲಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾಂಪ್ರದಾಯಿಕ ಬೃಹತ್ ಮತ್ತು ಭಾರವಾದ ಸ್ಪೀಕರ್‌ಗಳನ್ನು ಬದಲಿಸಲಾಗಿದೆ" ಎಂದು ಎಲ್‌ಜಿ ಡಿಸ್ಪ್ಲೇಯ ವ್ಯಾಪಾರ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಯೆಯೊ ಚುನ್-ಹೊ ಮಾಹಿತಿ ನೀಡಿದ್ದಾರೆ. ಉತ್ತಮ ಗುಣಮಟ್ಟದ 'ಅದೃಶ್ಯ ಧ್ವನಿ ವ್ಯವಸ್ಥೆ ಹೊಂದಿದ್ದು, ಮುಂದಿನ ಹಂತದ ಧ್ವನಿ ಅನುಭವವನ್ನು ಸಹ ಇದು ನೀಡುತ್ತದೆ. ಇದೊಂದು ಹೊಸ ,ವಿಶಿಷ್ಟ ಅನುಭವದ ತಂತ್ರಜ್ಞಾನವಾಗಿದೆ.
ಡಿಸ್‌ಪ್ಲೇ ಪ್ಯಾನೆಲ್ ಅನ್ನು ವೈಬ್ರೇಟ್ ಮಾಡಲು, ಕಾರಿನೊಳಗೆ ವಿವಿಧ ಪರಿಕರಗಳನ್ನು ಆಹ್ಲಾದಕರವಾಗಿ 3D ಧ್ವನಿ ಅನುಭವದ ವಿಶಿಷ್ಟ ತಂತ್ರಜ್ಞಾನದಿಂದ ಕೂಡಿದೆ. ಇದಲ್ಲದೇ, ಕಾಂಪ್ಯಾಕ್ಟ್ ಗಾತ್ರ ಮತ್ತು ಸ್ಪೀಕರ್‌ನ ನವೀನ ಫಾರ್ಮ್ ಫ್ಯಾಕ್ಟರ್ ಆಡಿಯೊ ಗುಣಮಟ್ಟತೆ ಹೆಚ್ಚಿಸುತ್ತದೆ. ಡ್ಯಾಶ್‌ಬೋರ್ಡ್, ಹೆಡ್‌ಲೈನರ್, ಪಿಲ್ಲರ್ ಮತ್ತು ಹೆಡ್‌ರೆಸ್ಟ್ ಸೇರಿದಂತೆ ಕಾರಿನ ವಿವಿಧ ಭಾಗಗಳಲ್ಲಿ ಇದನ್ನೂ ಅಳವಡಿಸಬಹುದು.
ಇದನ್ನೂ ಓದಿ:ಅಗರಬತ್ತಿ ಉದ್ಯಮಕ್ಕೆ ರಾಜ್ಯ ಸರ್ಕಾರ ಎಲ್ಲ ಸಹಕಾರ ನೀಡಲು ಸಿದ್ಧ: ಸಿಎಂ ಅಭಯ