ETV Bharat / bharat

ಮಾಜಿ ಮಾಲೀಕನ ಮನೆಯ ಕಿಟಕಿ ಮೂಲಕ ಒಳನುಗ್ಗಲು ಕಳ್ಳನ ಡಯೆಟ್​: 10 ಕೆಜಿ ತೂಕ ಇಳಿಸಿಕೊಂಡು 37 ಲಕ್ಷ ರೂ. ಕದ್ದ ಕಿಲಾಡಿ ಚೋರ! - Dedication of Thief

ಕಳ್ಳರು ಕಳ್ಳತನ ಮಾಡಲು ಏನೇನೋ ಪ್ಲಾನ್ ಮಾಡ್ತಾರೆ. ಒಂದಷ್ಟು ದಿನಗಳ ಕಾಲ ಸ್ಕೆಚ್​​ ಹಾಕಿ, ಕೈಚಳಕ ತೋರಿಸುವ ಚಾಲಾಕಿಗಳು ಕೂಡಾ ಇದಾರೆ. ಆದ್ರೆ ಇಲ್ಲೊಬ್ಬ ಕಳ್ಳ ಕಳ್ಳತನ ಮಾಡೋಕೆ, ಬರೋಬ್ಬರಿ ಮೂರು ತಿಂಗಳ ಕಾಲ ಊಟ ಬಿಟ್ಟು ತೂಕ ಇಳಿಸಿಕೊಂಡಿದ್ದಾನೆ. ವಿಚಿತ್ರ ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

Thief loss 10 kg of his weight  for  theft in Madhya Pradesh
ಕಳ್ಳನ Dedication : ದಿನಕ್ಕೆ ಒಂದೊತ್ತಿನ ಊಟ ಮಾಡಿ, ತೂಕ ಇಳಿಸಿಕೊಂಡ ಕಳ್ಳ ಕದ್ದಿದ್ದು, 37 ಲಕ್ಷ ಕದ್ದ ಅಪರೂಪದ ಕಳ್ಳ!
author img

By

Published : Nov 21, 2021, 4:10 PM IST

Updated : Nov 22, 2021, 12:49 PM IST

ಭೋಪಾಲ್(ಮಧ್ಯಪ್ರದೇಶ): ಸಾಕಷ್ಟು ಕಾರಣಗಳಿಂದ ಬಹುತೇಕ ಮಂದಿ ಸಣ್ಣಗಾಗಲು ಬಯಸುತ್ತಾರೆ. ದಢೂತಿ ದೇಹದವರು ಸಣ್ಣಗಾಗಲು, ಜಿಮ್​ಗಳಲ್ಲಿ, ಆಟದ ಮೈದಾನಗಳಲ್ಲಿ ಬೆವರಿಳಿಸೋದನ್ನು ನಾವು ನೋಡಿರ್ತೀವಿ. ಸಿನಿಮಾ ತಾರೆಯರೂ, ಮಾಡೆಲ್​ಗಳು ಕೂಡಾ ಸಣ್ಣಗೇ ಇರಲು ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ಚಾಲಾಕಿ ಕಳ್ಳತನ ಮಾಡಲು ಸಣ್ಣಗಾಗಿದ್ದಾನೆ. ಹೌದು.. ಕಳ್ಳರು ಕಳ್ಳತನ ಮಾಡಲು ಏನೇನೋ ಪ್ಲಾನ್ (Plan for Theft) ಮಾಡ್ತಾರೆ. ಒಂದಷ್ಟು ದಿನಗಳ ಸ್ಕೆಚ್​​ ಹಾಕಿ, ಕಳ್ಳತನ ಮಾಡುವ ಕಳ್ಳರು ಕೂಡಾ ಇದಾರೆ. ಆದ್ರೆ ಇಲ್ಲೊಬ್ಬ ಕಳ್ಳ ಕಳ್ಳತನ ಮಾಡೋಕೆ, ಊಟ ಬಿಟ್ಟು ತೂಕ ಇಳಿಸಿಕೊಂಡಿದ್ದಾನೆ.. ಅಚ್ಚರಿಯಾದರೂ ಇದು ಸತ್ಯ..

ಗುಜರಾತ್​ನ ಅಹಮದಾಬಾದ್​ ಮೂಲದ ಮೋತಿಸಿಂಗ್ ಚೌಹಾಣ್ (34), ತಾನು ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶದ ಭೋಪಾಲ್​ ನಗರದ ಬಸಂತ್ ಬಹಾರ್ ಸೊಸೈಟಿಯಲ್ಲಿರುವ ಮೋಹಿತ್ ಮರಾಡಿಯಾ ಎಂಬುವರ ಮನೆಯಿಂದ 37 ಲಕ್ಷ ರೂಪಾಯಿ ಕದ್ದಿದ್ದಾನೆ. ಅಂದಹಾಗೆ ಅವನು ಈ ಹಣವನ್ನು ಕದಿಯೋಕೆ ಇಳಿಸಿಕೊಂಡ ದೇಹದ ತೂಕ (Weight loss) ಬರೋಬ್ಬರಿ 10 ಕಿಲೋ ಗ್ರಾಮ್​.

ಕೆಲಸ ಮಾಡುವಾಗಲೇ ಸ್ಕೆಚ್​​

ಮೋಹಿತ್ ಮರಾಡಿಯಾ ಅವರ ಮನೆಯಲ್ಲಿ ಮೋತಿಸಿಂಗ್ ಚೌಹಾಣ್ ಕೆಲಸ ಮಾಡುತ್ತಿದ್ದಾಗಲೇ ಸಂಚು ರೂಪಿಸಿದ್ದ. ಯಾವ ಯಾವ ಜಾಗದಲ್ಲಿ ಹಣವಿದೆ?. ಎಲ್ಲೆಲ್ಲಿ ಸಿಸಿ ಕ್ಯಾಮರಾಗಳಿವೆ?. ಚಿನ್ನಾಭರಣಗಳನ್ನು ಮಾಲೀಕರು ಎಲ್ಲಿಟ್ಟಿದ್ದಾರೆ?. ಎಂಬ ಬಗ್ಗೆ ತಿಳಿದುಕೊಂಡಿದ್ದ. ಸಿಸಿ ಕ್ಯಾಮರಾ ಕಣ್ಣಿಗೆ ಬೀಳದಂತೆ ಹೇಗೆ ಕಳ್ಳತನ ಮಾಡಬಹುದು ಎಂಬ ಬಗ್ಗೆ ಯೋಜನೆ ರೂಪಿಸಿದ್ದನು. ಮನೆಯ ಹಿಂಭಾಗ ಮತ್ತು ಮುಂಭಾಗ ವಿದ್ಯುತ್​ಚಾಲಿತ ಬಾಗಿಲುಗಳು ಇದ್ದ ಕಾರಣ ಅವುಗಳನ್ನು ಒಡೆಯುವುದು ಕಷ್ಟ ಎಂದು ಮೋತಿಸಿಂಗ್ ಅರಿತಿದ್ದ.

ಮೂರು ತಿಂಗಳ ಕಾಲ ದಿನಕ್ಕೆ ಒಂದೇ ಹೊತ್ತಿನ ಊಟ

ಕಳ್ಳತನ ಮಾಡಲೆಂದೇ ಮೋಹಿತ್ ಮರಾಡಿಯಾ ಮನೆಯಲ್ಲಿ ಕೆಲಸ ಬಿಟ್ಟು, ಸಿಂಧುಭವನ ರಸ್ತೆಯ ಬೇರೊಬ್ಬರ ಮನೆಯಲ್ಲಿ ಮೋತಿಸಿಂಗ್ ಕೆಲಸ ಮಾಡುತ್ತಿದ್ದ. ಕಿಟಕಿ ಮೂಲಕ ಮನೆಯೊಳಗೆ ನುಗ್ಗಿ, ಮನೆಯಲ್ಲಿನ ಹಣವನ್ನು ದೋಚಲು ಸಂಚು ರೂಪಿಸಿದ್ದನು. ಆದರೆ ಆತನ ದೇಹ ಕಿರಿದಾದ ಕಿಟಕಿಯೊಳಗೆ ತೂರಲು ಸಾಧ್ಯವಾಗದ ಕಾರಣದಿಂದ, ಸಣ್ಣಗಾಗಲು ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಿದ್ದನು. ಸುಮಾರು ಮೂರು ತಿಂಗಳ ಕೇವಲ ಒಂದೊತ್ತು ಮಾತ್ರವೇ ಆತ ಊಟ ಮಾಡುತ್ತಿದ್ದನಂತೆ.

ಇದರಿಂದ 75 ಕೆಜಿ ಇದ್ದ ಮೋತಿ ಸಿಂಗ್ 65 ಕೆಜಿಗೆ ದೇಹದ ತೂಕವನ್ನು ಇಳಿಸಿಕೊಂಡ. ಅಂದ್ರೆ ಸುಮಾರು 10 ಕೆಜಿ ದೇಹದ ತೂಕ ಇಳಿಸಿಕೊಂಡ ಆತ ಅಡುಗೆ ಮನೆಯ ಕಿಟಕಿಯ ಗಾಜನ್ನು ಉಪಕರಣಗಳ ಸಹಾಯದಿಂದ ಕತ್ತರಿಸಿ ಒಳಗೆ ತನ್ನ ಪ್ಲಾನ್​ನಂತೆ, ಮನೆಯ ಸಿಸಿಟಿವಿ ಕ್ಯಾಮರಾಗಳ ಕಣ್ತಪ್ಪಿಸಿ ಕಳ್ಳತನ ಮಾಡಿಯೇ ಬಿಟ್ಟ. 37 ಲಕ್ಷ ರೂಪಾಯಿ, ಚಿನ್ನಾಭರಣಗಳನ್ನು ಕದ್ದೊಯ್ದ.

ಕಳ್ಳನ ತೋರಿಸಿದ ಹಾರ್ಡ್​ವೇರ್ ಶಾಪ್ ಸಿಸಿಟಿವಿ

ಕೊನೆಗೂ ಸಿಸಿಟಿವಿಯಲ್ಲಿ ಕಳ್ಳತನವಾದ ನಂತರ ಮೋಹಿತ್ ಮರಾಡಿಯಾ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಯಲ್ಲಿನ ಸಿಸಿಟಿವಿಗಳ ಕಣ್ತಪ್ಪಿಸಿ, ಚಾಕಚಕ್ಯತೆಯಿಂದ ಕಳ್ಳತನ ಮಾಡಿದ್ದ ಕಾರಣದಿಂದ ಪೊಲೀಸರಿಗೂ ತಲೆನೋವಾಗಿತ್ತು. ಗಾಜು ಕತ್ತರಿಸುವ ಉಪಕರಣಕ್ಕಾಗಿ ಮೋತಿ ಸಿಂಗ್ ಹಾರ್ಡ್​​ವೇರ್​ ಶಾಪ್​​ಗೆ ತೆರಳಿದ್ದು, ಸಿಸಿಟಿವಿಯೊಂದರಲ್ಲಿ ರೆಕಾರ್ಡ್​ ಆಗಿತ್ತು.

ಈ ವಿಚಾರವನ್ನೇ ಬೆನ್ನತ್ತಿದ ಪೊಲೀಸರಿಗೆ ಮೋತಿ ಸಿಂಗ್ ನಿಜವಾದ ಕಳ್ಳ ಎಂದು ಗೊತ್ತಾಯಿತು. ಆತ ರಾಜಸ್ಥಾನದ ಉದಯಪುರಕ್ಕೆ ತೆರಳಲು ಪ್ಲಾನ್ ಮಾಡಿದ್ದು, ಆತ ಉದಯಪುರಕ್ಕೆ ತೆರಳುವ ಮುನ್ನ ಮಧ್ಯಪ್ರದೇಶ ಪೊಲೀಸರು (Madhya Pradesh police) ಹಿಡಿದಿದ್ದಾರೆ.

ಇದನ್ನೂ ಓದಿ: ಕರ್ತವ್ಯದಲ್ಲಿದ್ದ ಪಿಎಸ್​ಐ ಅನ್ನು ಕುಡುಗೋಲಿನಿಂದ ಕೊಚ್ಚಿ ಕೊಂದ ಮೇಕೆ ಕಳ್ಳರು

Last Updated : Nov 22, 2021, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.