ಸರ್ಗುಜಾ (ಛತ್ತೀಸ್ಗಡ್): ಛತ್ತೀಸ್ಗಡ್ನ ಸರ್ಗುಜಾ ಜಿಲ್ಲೆಯಲ್ಲಿ ಈ ಬಾರಿ ಹೋಳಿ ಆಚರಣೆಗೆ ಬಳಸಲು ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳು ವಿಶಿಷ್ಟವಾದ ಬಣ್ಣಗಳನ್ನ ತಯಾರಿಸಿದ್ದಾರೆ.
ಹೌದು ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳು ನೈಸರ್ಗಿಕ ಪದಾರ್ಥಗಳನ್ನು ಬಳಸಿ ವಿಶಿಷ್ಟವಾದ ಬಣ್ಣಗಳನ್ನ ತಯಾರಿಸಿದ್ದಾರೆ. ಈ ಮಹಿಳೆಯರು ಬಿಹಾನ್ ಮಹಿಲಾ ಕಿಸಾನ್ ಹೆಸರಿನಲ್ಲಿ ಚರ್ಮಕ್ಕೆ ಯಾವುದೇ ತೊಂದರೆ ಆಗದಂತ ಕೆಮಿಕಲ್ ಪದಾರ್ಥಗಳನ್ನು ಬಳಸದೇ ಈ ಬಣ್ಣಗಳನ್ನು ತಯಾರಿಸಿದ್ದಾರೆ.
ಅರಿಶಿನ, ಪಾಲಕ, ಚೆಂಡು ಹೂಗಳು ಮತ್ತು ಬೀಟ್ರೂಟ್ ಸೇರಿದಂತೆ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಗಿಡಮೂಲಿಕೆ ಗುಲಾಲ್ ತಯಾರಿಸುತ್ತಿದ್ದಾರೆ. ಈ ಬಣ್ಣಗಳ ತಯಾರಿಕೆಯಿಂದ ಜನರಿಗೆ ಸುರಕ್ಷಿತ ಬಗ್ಗೆ ಅರಿವು ಮೂಡಿಸುವುದರ ಜೊತಗೆ ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ.
ಓದಿ : ಬಿಜೆಪಿ ಅಭ್ಯರ್ಥಿಗಳ ಮನೆ ಮೇಲೆ ಕಲ್ಲು ತೂರಿ: ಕಾಂಗ್ರೆಸ್ ಶಾಸಕಿಯಿಂದ ವಿವಾದಿತ ಹೇಳಿಕೆ!