ETV Bharat / bharat

S Jaishankar: ತಂತ್ರಜ್ಞಾನದ ವ್ಯಾಪಾರ ರಾಜಕೀಯವನ್ನೂ ಒಳಗೊಂಡಿದೆ- ವಿದೇಶಾಂಗ ಸಚಿವ ಎಸ್.ಜೈಶಂಕರ್ - ತಂತ್ರಜ್ಞಾನದ ವ್ಯಾಪಾರ ರಾಜಕೀಯವನ್ನೂ

Semiconindia conference: ತಂತ್ರಜ್ಞಾನದ ವ್ಯಾಪಾರವು ಕೇವಲ ವ್ಯಾಪಾರವಲ್ಲ, ಅದು ರಾಜಕೀಯವನ್ನೂ ಒಳಗೊಂಡಿದೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ.

External Affairs Minister S Jaishankar
External Affairs Minister S Jaishankar
author img

By

Published : Jul 30, 2023, 12:28 PM IST

ಗಾಂಧಿನಗರ (ಗುಜರಾತ್) : ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು (ಸಿಇಟಿ) ದೇಶವೊಂದರ ಸಾಮರ್ಥ್ಯದ ಅಳತೆಗೋಲಗಳಾಗಿ ಹೊರಹೊಮ್ಮಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭಾನುವಾರ ಹೇಳಿದ್ದಾರೆ. ವರ್ಚುವಲ್ ಆಗಿ ಸೆಮಿಕಾನ್‌ಇಂಡಿಯಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, "ಸಿಇಟಿಗಳು ಈಗ ಅಧಿಕಾರದ ಪ್ರಮುಖ ಅಳತೆಗೋಲಗಳಾಗಿ ಹೊರಹೊಮ್ಮುವುದರಲ್ಲಿ ಆಶ್ಚರ್ಯವಿಲ್ಲ. ಈ ತಂತ್ರಜ್ಞಾನಗಳನ್ನು ಯಾರು ಆವಿಷ್ಕರಿಸುತ್ತಾರೆ, ಯಾರು ತಯಾರಿಸುತ್ತಾರೆ, ಮಾರುಕಟ್ಟೆಯಲ್ಲಿ ಇವುಗಳ ಪಾಲು ಎಷ್ಟು, ಸಂಪನ್ಮೂಲಗಳು ಎಲ್ಲಿವೆ, ಯಾರಿಗೆ ಕೌಶಲ್ಯವಿದೆ, ಟ್ಯಾಲೆಂಟ್ ಪೂಲ್ ಎಲ್ಲಿದೆ ಈ ಎಲ್ಲವೂ ಅತಿ ಹೆಚ್ಚು ನಿರ್ಣಾಯಕ ಪ್ರಶ್ನೆಗಳಾಗಿವೆ." ಎಂದರು.

ಚಿಪ್ ತಯಾರಿಕೆಯ ವಲಯದಲ್ಲಿ ಯುದ್ಧ ನಡೆಯುತ್ತಿದೆ ಎನ್ನುವುದು ಸ್ವಲ್ಪಮಟ್ಟಿಗೆ ಅತಿಶಯೋಕ್ತಿಯಾಗಬಹುದು. ಆದರೆ ಇದು ವಾಸ್ತವದಲ್ಲಿ ನಡೆಯುತ್ತಿರುವ ಸತ್ಯವಾಗಿದೆ ಎಂದು ಅವರು ತಿಳಿಸಿದರು. ತಂತ್ರಜ್ಞಾನದ ವ್ಯಾಪಾರ ಕೇವಲ ವ್ಯಾಪಾರವಲ್ಲ, ಅದು ರಾಜ್ಯಶಾಸ್ತ್ರವನ್ನೂ ಒಳಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದರು. "ಸತ್ಯವೆಂದರೆ ನಾವು ರಫ್ತು ನಿಯಂತ್ರಣಗಳ ಪುನರುತ್ಥಾನವನ್ನು ಆರ್ಥಿಕ ಬಲದ ಪ್ರತಿಪಾದನೆಗಳಿಗೆ ಪ್ರತಿಕ್ರಿಯೆಯಾಗಿ ನೋಡುತ್ತಿದ್ದೇವೆ" ಎಂದು ಅವರು ನುಡಿದರು.

ಈ ವಿಷಯದ ಬಗ್ಗೆ ವ್ಯಾಪಕವಾದ ಜಾಗತಿಕ ಸಂವಹನಗಳು ನಡೆದಿವೆ. ಮಾರ್ಚ್ 2023 ರಲ್ಲಿ US ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೋ ಅವರ ಭಾರತ ಭೇಟಿ ಸಂದರ್ಭದಲ್ಲಿ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಮಾಡಿಕೊಳ್ಳಲಾದ ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಮತ್ತು ನಾವೀನ್ಯತೆ ಪಾಲುದಾರಿಕೆಗೆ ಸಂಬಂಧಿಸಿದ ತಿಳಿವಳಿಕೆ ಒಪ್ಪಂದವು ಅವುಗಳ ಪೈಕಿ ಗಮನಾರ್ಹವಾಗಿದೆ. ಅದು ಅಮೆರಿಕದ ಚಿಪ್ಸ್ ಮತ್ತು ವಿಜ್ಞಾನ ಕಾಯಿದೆ ಮತ್ತು ಭಾರತದ ಸೆಮಿಕಂಡಕ್ಟರ್ ಮಿಷನ್‌ನ ಉತ್ಪಾದಕತೆಯ ಸಾಮರ್ಥ್ಯವನ್ನು ತೋರಿಸುವ ಸಹಯೋಗದ ಕಾರ್ಯವಿಧಾನವನ್ನು ಸ್ಥಾಪಿಸಲು ಈ ಒಪ್ಪಂದ ಪ್ರಯತ್ನಿಸಿತು ಎಂದು ಜೈಶಂಕರ್ ಹೇಳಿದರು.

ಜೂನ್ 2023 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯುಎಸ್ ಪ್ರವಾಸದ ಸಮಯದಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಅವರ ತಂಡದೊಂದಿಗೆ ನಡೆದ ಮಾತುಕತೆಗಳಲ್ಲಿ ಸೆಮಿಕಂಡಕ್ಟರ್ ವಿಷಯವು ಕೇಂದ್ರಬಿಂದುವಾಗಿತ್ತು ಎಂದು ಅವರು ಹೇಳಿದರು. "ನಿಮಗೆ ತಿಳಿದಿರುವಂತೆ, ಇಬ್ಬರೂ ನಾಯಕರು ಹೆಸರಾಂತ ಉದ್ಯಮಗಳ ದಿಗ್ಗಜರೊಂದಿಗೆ ತಂತ್ರಜ್ಞಾನದ ಸಂವಾದಗಳನ್ನು ನಡೆಸಿದರು. ಜಂಟಿ ಹೇಳಿಕೆಯು ನಮ್ಮ ಸಹಕಾರದ ಈ ಅಂಶವನ್ನು ಎತ್ತಿ ತೋರಿಸಿದೆ. ಅಮೆರಿಕದ ಮೂರು ಕಂಪನಿಗಳಾದ ಮೈಕ್ರಾನ್ ಟೆಕ್ನಾಲಜಿ, ಲ್ಯಾಮ್ ರಿಸರ್ಚ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಇವು ಕೆಲ ವಿಷಯಗಳಲ್ಲಿ ನಿರ್ದಿಷ್ಟವಾಗಿ ಸಹಕಾರ ನೀಡಲು ಒಪ್ಪಿವೆ ಎಂದು ಜೈಶಂಕರ್ ಸಭೆಗೆ ತಿಳಿಸಿದರು.

ಭಾರತದ ಸೆಮಿಕಂಡಕ್ಟರ್ ಮಿಷನ್ ಕೇವಲ ದೇಶೀಯ ಅವಶ್ಯಕತೆಗಳನ್ನು ಪೂರೈಸುವುದಲ್ಲ, ಇದು ಜಾಗತಿಕ ಬೇಡಿಕೆಗೂ ಕೊಡುಗೆ ನೀಡಲಿದೆ. ಇದು ನಿಜವಾಗಿಯೂ ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್‌ನ ಸೂಕ್ತವಾದ ಉದಾಹರಣೆಯಾಗಿದೆ ಎಂದು ಜೈಶಂಕರ್ ವಿವರಿಸಿದರು.

ಇದನ್ನೂ ಓದಿ : ಜಾಹೀರಾತು ನೀಡದಿದ್ದರೆ 'gold' tick ರದ್ದು: ಬ್ರ್ಯಾಂಡ್​ಗಳಿಗೆ Twitter ಹೊಸ ನಿಯಮ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.