ETV Bharat / bharat

ಒಡಿಶಾದ ಬಾಲಸೋರ್​ನಲ್ಲಿ ‘ಯಾಸ್​’ ಚಂಡಮಾರುತದ ಭೂಸ್ಪರ್ಶ ಪ್ರಕ್ರಿಯೆ ಪ್ರಾರಂಭ - ಯಾಸ್ ಚಂಡಮಾರುತ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಾಸ್​’ ಚಂಡಮಾರುತವು ಇಂದು ಪಶ್ಚಿಮ ಬಂಗಾಳ ಮತ್ತು ಒಡಿಶಾಗೆ ಅಪ್ಪಳಿಸುತ್ತಿದ್ದು ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತ್ಯಂತ ತೀವ್ರವಾದ ಸೈಕ್ಲೋನಿಕ್ ಬಿರುಗಾಳಿ ಒಡಿಶಾದ ಬಾಲಸೋರ್‌ನ ಆಗ್ನೇಯಕ್ಕೆ 50 ಕಿ.ಮೀ. ವೇಗದಲ್ಲಿ ಬೆಳಿಗ್ಗೆ 9 ರ ಸುಮಾರಿಗೆ ಭೂ ಸ್ಪರ್ಶ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

The Very Severe Cyclonic Storm Yaas is likely to make a landfall
'ಯಾಸ್' ಚಂಡಮಾರುತ ಭೂಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ!
author img

By

Published : May 26, 2021, 7:32 AM IST

Updated : May 26, 2021, 10:48 AM IST

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಾಸ್​’ ಚಂಡಮಾರುತವು ಒಡಿಶಾದ ಬಾಲಸೋರ್‌ನಲ್ಲಿ ಭೂ ಸ್ಪರ್ಶ ಪ್ರಕ್ರಿಯೆ ಪ್ರಾರಂಭಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಕರಾವಳಿ ತೀರದಲ್ಲಿ ನೆಲೆಸಿರುವ ಲಕ್ಷಾಂತರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

‘ಯಾಸ್​’ ಚಂಡಮಾರುತ

ಅತ್ಯಂತ ತೀವ್ರವಾದ ಸೈಕ್ಲೋನಿಕ್ ಬಿರುಗಾಳಿ ಯಾಸ್ ಬೆಳಿಗ್ಗೆ 10 ರಿಂದ 11 ಗಂಟೆ ಸುಮಾರಿಗೆ ಒಡಿಶಾದ ಭದ್ರಾಕ್ ಜಿಲ್ಲೆಯ ವಾಸುದೇವಪುರ-ಬಹನಾಗಾ ಪ್ರದೇಶದ ಸುತ್ತಲಿನ ಪ್ರದೇಶದಲ್ಲಿ ಭೂಪ್ರದೇಶಕ್ಕೆ ಅಪ್ಪಳಿಸಬಹುದು ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪ್ರದೀಪ್ ಕುಮಾರ್ ಜೆನಾ ಮಾಹಿತಿ ನೀಡಿದ್ದಾರೆ.

  • VERY SEVERE CYCLONIC STORM ‘YAAS’ CENTRED ABOUT 40 KM EAST OF DHAMRA AND 90 KM SOUTH-SOUTHEAST OF https://t.co/usAtM8ohaq CROSS NORTH ODISHA-WEST BENGAL COASTS TO THE NORTH OF DHAMRA AND SOUTH OF BALASORE NOON OF 26TH MAY AS A VSCS WITH WIND SPEED OF 130-140 KMPH. pic.twitter.com/UW0y8KfJRE

    — India Meteorological Department (@Indiametdept) May 26, 2021 " class="align-text-top noRightClick twitterSection" data=" ">

ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಯಾಸ್​ ಕಳೆದ 6 ಗಂಟೆಗಳಲ್ಲಿ ಸುಮಾರು 10 ಕಿ.ಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಸಾಗಿದೆ. ಸೈಕ್ಲೋನಿಕ್ ಬಿರುಗಾಳಿಯು ಇಂದು ಮುಂಜಾನೆ 3.30 ಕ್ಕೆ ಬಂಗಾಳದ ವಾಯುವ್ಯ ಕೊಲ್ಲಿಯಲ್ಲಿ ಧಮ್ರಾದ ಪೂರ್ವ-ಆಗ್ನೇಯಕ್ಕೆ 70 ಕಿ.ಮೀ, ಪ್ಯಾರಡಿಪ್‌ನ ಪೂರ್ವ-ಈಶಾನ್ಯಕ್ಕೆ 90 ಕಿ.ಮೀ, ಬಾಲಸೋರ್‌ನ ಆಗ್ನೇಯಕ್ಕೆ 130 ಕಿ.ಮೀ ಮತ್ತು 120 ದಿಘಾದ ದಕ್ಷಿಣಕ್ಕೆ ಕಿ.ಮೀನಲ್ಲಿ ಬೀಸಿದೆ.

ಚಂಡಮಾರುತ ಭೂಸ್ಪರ್ಶ ಮಾಡುವುದಕ್ಕೂ ಆರುಗಂಟೆ ಮುನ್ನ ಮತ್ತು ಆರುಗಂಟೆಗಳ ನಂತರದ ಅವಧಿಯಲ್ಲಿ ಭಾರಿ ಪರಿಣಾಮ ಉಂಟುಮಾಡಲಿದೆ. ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಆರಂಭವಾಗಿದೆ. ಅದು ಮುಂದುವರಿಯಲಿದೆ. ಈ ಪ್ರದೇಶಗಳಲ್ಲಿ ಮಂಗಳವಾರ ಮಧ್ಯರಾತ್ರಿಯ ವೇಳೆಗೆ ಗಂಟೆಗೆ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.

  • Very Severe Cyclonic Storm YAAS to cross Odisha coast between Dhamra and Balasore around noon of 26th May with wind speed of 130-140KMPH.

    — India Meteorological Department (@Indiametdept) May 25, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಯಾಸ್​​ ಆರ್ಭಟ: ಪ.ಬಂಗಾಳದಲ್ಲಿ ಇಬ್ಬರು ಬಲಿ ಹಲವರಿಗೆ ಗಾಯ.. ಲಕ್ಷಾಂತರ ಮಂದಿ ಸ್ಥಳಾಂತರ

ಭಾರತದ ಪೂರ್ವ ಕರಾವಳಿ ಭಾಗದತ್ತ ಮಂಗಳವಾರ ಶಕ್ತಿಶಾಲಿ ಚಂಡಮಾರುತ ಸಾಗಿದೆ. ಒಂದೇ ವಾರದ ಅಂತರದಲ್ಲಿ ಎರಡನೆಯ ಭೀಕರ ಚಂಡಮಾರುತ ಅಪ್ಪಳಿಸಿದೆ. ಯಾಸ್ ಚಂಡಮಾರುತವು ತೀವ್ರ ಸ್ವರೂಪ ತಾಳುವ ಮೂಲಕ ಉತ್ತರ ಒಡಿಶಾದ ಬಾಲಸೋರ್ ಕರಾವಳಿ ಪ್ರದೇಶಕ್ಕೆ ಇಂದು ಮಧ್ಯಾಹ್ನ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • VERY SEVERE CYCLONIC STORM YAAS CENTRED ABOUT 50 KM SOUTH-SOUTHEAST OF https://t.co/usAtM8ohaq CROSS NORTH ODISHA-WEST BENGAL COASTS TO THE NORTH OF DHAMRA AND SOUTH OF BALASORE, DURING NOON OF 26TH MAY AS A VERY SEVERE CYCLONIC STORM WITH WIND SPEED OF 130-140 KMPH. pic.twitter.com/0IDU6QTgrk

ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರದಿಂದ ಗುರುವಾರದ ತನಕ ಒಡಿಶಾದಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಾಕ್ಪೋರ್​ನಲ್ಲಿ ಹವಾಮಾನ ಬದಲಾವಣೆಯಾಗಿದ್ದು, ಮಧ್ಯಮ ಮಳೆ ಮತ್ತು ಗಾಳಿ ಬೀಸಲು ಆರಂಭಿಸಿದೆ. ಸೈಕ್ಲೋನ್ ಯಾಸ್ ಇಂದು ಮಧ್ಯಾಹ್ನದ ವೇಳೆಗೆ 130-140 ಕಿ.ಮೀ ವೇಗದಲ್ಲಿ ಭೂಮಿಗೆ ಸ್ಪರ್ಷಿಸಲಿದೆ, ಈ ವೇಳೆ 155 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

  • Very Severe Cyclonic Storm Yaas centred about 50 km South-Southeast of Balasore (Odisha). Landfall process has commenced around 9 am: India Meteorological Departement (IMD) #CycloneYaas pic.twitter.com/L7cUSvuGRT

    — ANI (@ANI) May 26, 2021 " class="align-text-top noRightClick twitterSection" data=" ">

Last Updated : May 26, 2021, 10:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.