ತ್ರಿಶೂರ್(ಕೇರಳ): ಮಹೀಂದ್ರಾ ಆ್ಯಂಡ್ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಅವರು ಗುರುವಾಯೂರ್ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದ ಥಾರ್ ಜೀಪ್ ಹರಾಜಿನಲ್ಲಿ 43 ಲಕ್ಷ ರೂ.ಗೆ ಮಾರಾಟವಾಗಿದೆ. ಅಂಗಡಿಪ್ಪುರಂ ಮೂಲದ ದುಬೈನ ಅನಿವಾಸಿ ಭಾರತೀಯ ಉದ್ಯಮಿ ವಿಘ್ನೇಶ್ ವಿಜಯಕುಮಾರ್ 43 ಲಕ್ಷಕ್ಕೆ ಈ ಜೀಪ್ ಪಡೆದಿದ್ದಾರೆ. ಜತೆಗೆ ವಿಘ್ನೇಶ್ ವಾಹನಕ್ಕೆ ಜಿಎಸ್‌ಟಿಯನ್ನೂ ಪಾವತಿಸಲಿದ್ದಾರೆ.
ಈ ವಾಹನವನ್ನು ಮೊದಲು ಕೇವಲ ಒಬ್ಬ ವ್ಯಕ್ತಿ ಹರಾಜಿನಲ್ಲಿ ಭಾಗವಹಿಸುವುದರೊಂದಿಗೆ 15.10 ಲಕ್ಷ ರೂ. ಗೆ ಖರೀದಿಸಿದ್ದರು. ಅನಿವಾಸಿ ಭಾರತೀಯ ಉದ್ಯಮಿ ಅಮಲ್ ಮುಹಮ್ಮದ್ಗೆ ಈ ಜೀಪ್ ಮಾರಾಟವಾಗಿತ್ತು. ಆದರೆ, ಹರಾಜು ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ ಹಿಂದೂ ಸಂಘಟನೆಯೊಂದು ಹರಾಜಿನ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತ್ತು. ಪರಿಣಾಮ ಈಗ 43 ಲಕ್ಷಕ್ಕೆ ಜೀಪ್ ಮಾರಾಟ ಆಗಿದೆ.
ನ್ಯಾಯಾಲಯ ಮರು ಹರಾಜಿಗೆ ಆದೇಶ ನೀಡಿತ್ತು. ಈ ಬಾರಿ ಗುರುವಾಯೂರು ದೇವಸ್ವಂ ಹರಾಜಿಗೆ ಉತ್ತಮ ಪ್ರಚಾರ ನೀಡಿತ್ತು. ಈ ಜೀಪ್ನ ಮೂಲ ಬೆಲೆ 13 ಲಕ್ಷದಿಂದ 16 ಲಕ್ಷದವರೆಗೆ ಇದೆ.
ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಯುವತಿ ಜೊತೆ ನಿರಂತರ ದೈಹಿಕ ಸಂಪರ್ಕ : ಕೈಕೊಟ್ಟ ಎಂಜಿನಿಯರ್ ಬಂಧನ