ETV Bharat / bharat

ಮಳೆಯ ಆರ್ಭಟಕ್ಕೆ ತುಂಬಿ ಹರಿಯುತ್ತಿರುವ ನದಿ.. ಪ್ರವಾಹಕ್ಕೆ 18 ಜಿಲ್ಲೆಗಳು ಮುಳುಗಡೆ, ಮೂವರ ಸಾವು - ಅಸ್ಸೋಂನಲ್ಲಿ ಮಳೆಯಿಂದಾಗಿ ಪ್ರವಾಹ ಮತ್ತು ಗುಡ್ಡ ಕುಸಿತ

ಅಸ್ಸೋಂ ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ನದಿಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಗೆ ಸೃಷ್ಟಿಯಾದ ಪ್ರವಾಹಕ್ಕೆ 18 ಜಿಲ್ಲೆಗಳು ಮುಳುಗಡೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದೆ.

second phase of flood hits Assam  three persons died in flood and landslide in Assam  Heavy rain in Assam  ಅಸ್ಸೋಂನಲ್ಲಿ ವರ್ಷದ ಎರಡನೇ ಹಂತದ ಪ್ರವಾಹ  ಅಸ್ಸೋಂನಲ್ಲಿ ಮಳೆಯಿಂದಾಗಿ ಪ್ರವಾಹ ಮತ್ತು ಗುಡ್ಡ ಕುಸಿತ  ಭಾರೀ ಮಳೆಗೆ ತತ್ತರಿಸಿದ ಅಸ್ಸೋಂ
ಮಳೆಯ ಆರ್ಭಟಕ್ಕೆ ತುಂಬಿ ಹರಿಯುತ್ತಿರುವ ನದಿ
author img

By

Published : Jun 16, 2022, 11:36 AM IST

ಗುವಾಹಟಿ: ಈ ವರ್ಷದ ಎರಡನೇ ಹಂತದ ಪ್ರವಾಹದಲ್ಲಿ ಅಸ್ಸೋಂನ ಹಲವು ಜಿಲ್ಲೆಗಳು ಮುಳುಗಡೆಯಾಗಿವೆ. ಅಸ್ಸೋಂ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಳುಹಿಸಿದ ವರದಿಯ ಪ್ರಕಾರ, ಬ್ರಹ್ಮಪುತ್ರ ನದಿ ಮತ್ತು ಅದರ ಉಪನದಿಗಳ ಪ್ರವಾಹದಿಂದ ಕನಿಷ್ಠ 18 ಜಿಲ್ಲೆಗಳು ಬಾಧಿತವಾಗಿವೆ. ಭಾರೀ ಮಳೆಯಿಂದಾಗಿ ಮಾನಸ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

second phase of flood hits Assam  three persons died in flood and landslide in Assam  Heavy rain in Assam  ಅಸ್ಸೋಂನಲ್ಲಿ ವರ್ಷದ ಎರಡನೇ ಹಂತದ ಪ್ರವಾಹ  ಅಸ್ಸೋಂನಲ್ಲಿ ಮಳೆಯಿಂದಾಗಿ ಪ್ರವಾಹ ಮತ್ತು ಗುಡ್ಡ ಕುಸಿತ  ಭಾರೀ ಮಳೆಗೆ ತತ್ತರಿಸಿದ ಅಸ್ಸೋಂ
ಮಳೆಯ ಆರ್ಭಟಕ್ಕೆ ತುಂಬಿ ಹರಿಯುತ್ತಿರುವ ನದಿ

ವರದಿ ಪ್ರಕಾರ ಸುಮಾರು 74,116 ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ಬಜಾಲಿ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ಒಬ್ಬರು ಸಾವನ್ನಪ್ಪಿದ್ದಾರೆ. ಗೋಲ್ಪಾರಾ ಜಿಲ್ಲೆಯ ಆಜಾದ್ ನಗರ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಗುವಾಹಟಿ ನಗರದಲ್ಲಿ ಇಬ್ಬರು ಭೂಕುಸಿತದಿಂದ ಗಾಯಗೊಂಡಿದ್ದಾರೆ.

ಓದಿ: ಕರಾವಳಿಯಲ್ಲಿ ಮತ್ತೆ ನೆರೆ ಆತಂಕ; ಸನ್ನದ್ಧ ಸ್ಥಿತಿಯಲ್ಲಿ ಎಸ್​ಡಿಆರ್​ಎಫ್

ಕಮ್ರೂಪ್ ಮೆಟ್ರೋ, ದಿಮಾ ಹಸ್ಸಾವೊ, ಗೋಲ್ಪಾರಾ ಮತ್ತು ಇತರ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಅಸ್ಸೋಂ , ಮೇಘಾಲಯ ಮತ್ತು ಅರುಣಾಚಲದಲ್ಲಿ ಜೂನ್ 17 ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರಿ ಮಳೆ ಮತ್ತು ಪ್ರವಾಹದ ಹಿನ್ನೆಲೆ ಕಾಮ್ರೂಪ್ ಮೆಟ್ರೋ ಜಿಲ್ಲಾಡಳಿತ ಗುರುವಾರ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿದೆ. ಪ್ರವಾಹದಿಂದಾಗಿ ಗುವಾಹಟಿ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಿದೆ. ಮಳೆಯ ರುದ್ರ ನರ್ತನಕ್ಕೆ ಅದೇಷ್ಟು ಜೀವಗಳು ಬಲಿಯಾಗುತ್ತವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.