ನವದೆಹಲಿ: ಯುವಕರನ್ನು ಸಶಸ್ತ್ರ ಪಡೆಗಳ ಭಾಗವನ್ನಾಗಿ ಮಾಡುವ ವಿನೂತನ ಯೋಜನೆಯಾದ 'ಅಗ್ನಿಪಥ್ ಯೋಜನೆ'ಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಯೋಜನೆಯಡಿ ಸೇನೆ ಸೇರುವ ಯುವಕರನ್ನು 'ಅಗ್ನಿವೀರ್' ಎಂದು ಕರೆದು ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಇದೊಂದು ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದ್ದು, ಬಹುದಿನಗಳ ಚರ್ಚೆಯ ಬಳಿಕ ಘೋಷಿಸಲಾಗಿದೆ.
ಈ ಯೋಜನೆಯಡಿ ಸಶಸ್ತ್ರ ಪಡೆಗಳಿಗೆ ಆಯ್ಕೆಯಾಗುವ ಯುವಕರು 4 ವರ್ಷಗಳವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಅವರಿಗೆ ಆಕರ್ಷಕ ಸಂಬಳ, ಭತ್ಯೆಯನ್ನು ನೀಡಲಾಗುತ್ತದೆ. ಅವರ ನಿರ್ಗಮನದ ಬಳಿಕ ಪಿಂಚಣಿ ಸೌಲಭ್ಯವನ್ನೂ ಪಡೆಯಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದರು.
-
Be an #Agniveer and serve the Nation through #Agnipath Scheme.
— zindadilkashmir (@jindadilkashmir) June 14, 2022 " class="align-text-top noRightClick twitterSection" data="
A lifetime opportunity to become a soldier and citizen warrior of the Nation.#BharatKeAgniveer#IndianArmy pic.twitter.com/K2w1JY1KM1
">Be an #Agniveer and serve the Nation through #Agnipath Scheme.
— zindadilkashmir (@jindadilkashmir) June 14, 2022
A lifetime opportunity to become a soldier and citizen warrior of the Nation.#BharatKeAgniveer#IndianArmy pic.twitter.com/K2w1JY1KM1Be an #Agniveer and serve the Nation through #Agnipath Scheme.
— zindadilkashmir (@jindadilkashmir) June 14, 2022
A lifetime opportunity to become a soldier and citizen warrior of the Nation.#BharatKeAgniveer#IndianArmy pic.twitter.com/K2w1JY1KM1
ಏನಿದು ಅಗ್ನಿಪತ್ ಯೋಜನೆ?: ಅಗ್ನಿಪತ್ ಎನ್ನುವುದು ಸೈನಿಕರು, ವಾಯುಪಡೆಯ ಸಿಬ್ಬಂದಿ ಮತ್ತು ನೌಕಾಪಡೆಗೆ ಪ್ರವೇಶ ಪಡೆಯುವ ಬೃಹತ್ ನೇಮಕಾತಿ ಯೋಜನೆಯಾಗಿದೆ. ಸಶಸ್ತ್ರ ಪಡೆಗಳ ಸಾಮಾನ್ಯ ಕೇಡರ್‌ಗಳಲ್ಲಿ ಸೇವೆ ಸಲ್ಲಿಸಲು ಯುವಜನರಿಗೆ ಇದು ಅವಕಾಶ ಕಲ್ಪಿಸಲಿದೆ.
ಅರ್ಹತೆ ಏನು?: ಮಿಲಿಟರಿ ವ್ಯವಹಾರಗಳ ಇಲಾಖೆಯು ಯೋಜಿಸಿರುವ ಈ ಯೋಜನೆಯಡಿ ಸೇವೆ ಸಲ್ಲಿಸಲು ಬಯಸುವ ಯುವಕರು 17.5 ವರ್ಷದಿಂದ 21 ವರ್ಷದೊಳಗಿನವರಾಗಿರಬೇಕು. 4 ವರ್ಷಗಳವರೆಗಿನ ಅವಧಿಗೆ ಮಾತ್ರ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು.
ಅಗ್ನಿಪಥ್ ಯೋಜನೆ ಅಡಿ ನೇಮಕಗೊಂಡ ಯೋಧರನ್ನು 'ಅಗ್ನಿವೀರ್' ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಅಗ್ನಿವೀರರಿಗೆ ತರಬೇತಿ ಸೇರಿದಂತೆ 4 ವರ್ಷಗಳವರೆಗೆ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತದೆ. ಅವಧಿ ಪೂರ್ಣ ಬಳಿಕ ಹೊಸದಾಗಿ ನೇಮಿಸಿಕೊಳ್ಳುವ ಸೈನಿಕರ ಪೈಕಿ ಕೇವಲ ಶೇ.25ರಷ್ಟು ಸೈನಿಕರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ಆ ಉಳಿದ ಸೈನಿಕರು ಸಾಮಾನ್ಯ ಕೇಡರ್‌ನಲ್ಲಿ 15 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಅಧಿಕಾರಿಯೇತರ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ನಿವೃತ್ತಿಯಾದ ಶೇ.75 ರಷ್ಟು ಸೈನಿಕರಿಗೆ 11-12 ಲಕ್ಷ ರೂಪಾಯಿ 'ಸೇವಾ ನಿಧಿ'ಯಾಗಿ ನೀಡಲಾಗುತ್ತದೆ. ಇದರೊಂದಿಗೆ ಕೌಶಲ ಪ್ರಮಾಣಪತ್ರ ಮತ್ತು ಅವರ ಮುಂದಿನ ಜೀವನಕ್ಕಾಗಿ ನೆರವಾಗಲು ಬ್ಯಾಂಕ್ ಸಾಲಗಳನ್ನೂ ಕೂಡ ನೀಡಲಾಗುತ್ತದೆ.
ವೇತನ ಎಷ್ಟು: 4 ವರ್ಷಗಳ ಅವಧಿಗೆ ನೇಮಕವಾಗು ಅಗ್ನಿವೀರರಿಗೆ ಆರಂಭಿಕವಾಗಿ 30 ಸಾವಿರ ರೂಪಾಯಿ ಸಂಬಳ ನಿಗದಿ ಮಾಡಲಾಗಿದೆ. ಇದು ಕೊನೆಗೆ 40 ಸಾವಿರ ತಲುಪಲಿದೆ. ನಿವೃತ್ತಿ ನಿಧಿಯಾಗಿ 5 ಲಕ್ಷ ರೂಪಾಯಿ ಪಡೆಯಲಿದ್ದಾರೆ. ಸೇವಾವಧಿಯಲ್ಲಿ ಅಂಗವೈಕಲ್ಯ ಉಂಟಾದರೆ 48 ಲಕ್ಷ ಜೀವವಿಮೆ, ಸಾವನ್ನಪ್ಪಿದಲ್ಲಿ ಹೆಚ್ಚುವರಿಯಾಗಿ ಎಕ್ಸ್ಗ್ರೇಷಿಯಾ 44 ಲಕ್ಷ ರೂಪಾಯಿ ಪಡೆದುಕೊಳ್ಳಲಿದ್ದಾರೆ.
ಯೋಜನೆಗೆ ವಿಮರ್ಶಕರ ಟೀಕೆ: ಅಗ್ನಿಪಥ್ ಐತಿಹಾಸಿಕ, ಮಹತ್ವಾಕಾಂಕ್ಷಿ ಯೋಜನೆಯಾಗಿದ್ದರೂ, ಹಲವು ಟೀಕೆಗಳೂ ಇವೆ. ಸಶಸ್ತ್ರ ಪಡೆಗಳಿಗೆ ಸೇರಿದ ಸೈನಿಕರಿಗೆ ಕನಿಷ್ಠ 8 ವರ್ಷಗಳ ತರಬೇತಿ ಬಳಿಕ ಪೂರ್ಣ ಪ್ರಮಾಣದಲ್ಲಿ ಅವರು ಸಜ್ಜಾಗಲಿದ್ದರೆ. ಈ ಯೋಜನೆಯಡಿ ನೇಮಕ ಮಾಡಿಕೊಳ್ಳುವ ಸೈನಿಕರ ಸೇವಾವಧಿ 4 ವರ್ಷ ಮಾತ್ರ. ಹೀಗಾಗಿ ಇದು ಅಸಮರ್ಪಕ ಯೋಜನೆ ಎಂದು ವಿಮರ್ಶಕರು ಟೀಕಿಸಿದ್ದಾರೆ.
ಇದನ್ನೂ ಓದಿ: ಲೆಟರ್ ಬಾಕ್ಸ್ ಪೋಸ್ಟ್ ಆಫೀಸ್ ನೋಡಿದ್ದೀರಾ? ಇದು ವಿಶ್ವದ ಅತಿ ಎತ್ತರ ಪ್ರದೇಶದಲ್ಲಿದೆ!