ಔರಂಗಾಬಾದ್(ಮಹಾರಾಷ್ಟ್ರ): ರೈಲ್ವೇ ಸಿಗ್ನಲ್ಗೆ ಬಟ್ಟೆ ಕಟ್ಟಿರುವ ದುಷ್ಕರ್ಮಿಗಳು ರೈಲಿನಲ್ಲಿ ದರೋಡೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಪೊಲೀಸರು ಶೋಧಕಾರ್ಯ ಆರಂಭ ಮಾಡಿದ್ದಾರೆ. ಔರಂಗಾಬಾದ್ನ ಪೋತುಲ್ ರೈಲ್ವೆ ನಿಲ್ದಾಣದ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, 9ರಿಂದ 10 ಜನರ ಗುಂಪೊಂದು ರೈಲಿನ ಮೇಲೆ ಕಲ್ಲೆಸೆದಿದ್ದಾರೆ. ಇದರ ಬೆನ್ನಲ್ಲೇ ಪ್ರಯಾಣಿಕರ ಮೊಬೈಲ್, ಪರ್ಸ್ ಸೇರಿದಂತೆ ಕೆಲ ಮಹಿಳೆಯರ ಚಿನ್ನಾಭರಣ ದೋಚಿದ್ದಾರೆ.
ಕಳ್ಳತನಕ್ಕೆ ಯೋಜನೆ ರೂಪಿಸಿದ್ದು ಹೀಗೆ..: ಔರಂಗಾಬಾದ್ನಿಂದ ಮನ್ಮಾಡ್ಗೆ ತೆರಳುತ್ತಿದ್ದ ಸಿಕಂದರಾಬಾದ್-ಮುಂಬೈ ರೈಲು ಪೊತುಲ್ ಸಿಗ್ನಲ್ ಬಳಿಯ ಲೈಟ್ ಆಫ್ ಆಗಿರುವ ಕಾರಣ ನಿಂತಿದೆ. ರೈಲು ನಿಂತ ತಕ್ಷಣವೇ ಕೆಲವೊಂದು ಕೋಚ್ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, 9ರಿಂದ 10 ದರೋಡೆಕೋರರು ಕೋಚ್ಗಳಿಗೆ ನುಗ್ಗಿ ಮಲಗಿದ್ದ ಮಹಿಳೆಯರ ಮೈಮೇಲಿನ ಆಭರಣ ಕದ್ದಿದ್ದಾರೆ. ಇದರ ಬೆನ್ನಲ್ಲೇ ಪ್ರಯಾಣಿಕರ ಮೊಬೈಲ್, ಪರ್ಸ್ ಸೇರಿದಂತೆ ಇತರೆ ವಸ್ತು ದೋಚಿದ್ದಾರೆ. ಈ ವೇಳೆ ಅನೇಕ ಪ್ರಯಾಣಿಕರು ಕೂಗಾಡಿದ್ದಾರೆ. ಆದರೆ, ಇಡೀ ಪ್ರದೇಶ ಜನವಸತಿ ಇಲ್ಲದ ಕಾರಣ ಯಾವುದೇ ರೀತಿಯ ಸಹಾಯ ಲಭ್ಯವಾಗಿಲ್ಲ.
ಇದನ್ನೂ ಓದಿ: ನಕಲಿ ಅಂಕಪಟ್ಟಿ ನೀಡಿ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಅಭ್ಯರ್ಥಿಗಳು ನೇಮಕ!
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಈಗಾಗಲೇ ದೌಲತಾಬಾದ್, ಲಾಸೂರ್ ಮತ್ತು ಔರಂಗಾಬಾದ್ನಗರಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಕಳ್ಳರು ಆ್ಯಂಬುಲೆನ್ಸ್ನಲ್ಲಿ ಬಂದಿರುವ ಶಂಕೆ ವ್ಯಕ್ತವಾಗಿದೆ.