ಎಟಾ (ಉತ್ತರ ಪ್ರದೇಶ): ವೃದ್ಧ ತಂದೆ ಮತ್ತು ತನ್ನ ಮಗ ಸೇರಿದಂತೆ 10 ಜನರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಢಾಬಾ ನಡೆಸುವ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
ಎಟಾ ಜಿಲ್ಲೆಯಲ್ಲಿ ಪೊಲೀಸರೇ ಗೂಂಡಾಗಿರಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಢಾಬಾ ನಡೆಸುವ ವಿಶೇಷ ಚೇತನ ವ್ಯಕ್ತಿಯ ವೃದ್ಧ ತಂದೆ ಮತ್ತು ಮಗನನ್ನು ಪೊಲೀಸರು ಸುಳ್ಳು ಪ್ರಕರಣ ಸೃಷ್ಟಿಸಿ ಬಂಧಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಎಟಾದಿಂದ 5 ಕಿ.ಮೀ ದೂರದಲ್ಲಿರುವ ಆಗ್ರಾ ರಸ್ತೆಯ ಖುಶಲ್‌ಗಢ ಗ್ರಾಮದ ಬಳಿ ತನ್ನ ಢಾಬಾ ಇದೆ. ತನ್ನ ಸಹೋದರ ಮತ್ತು ತಾಯಿಯೊಂದಿಗೆ ಸಣ್ಣ ಢಾಬಾ ಮೂಲಕ ಜೀವನೋಪಾಯ ಸಂಪಾದಿಸುತ್ತಿದ್ದೇನೆ. ಕೇವಲ ನಾಲ್ಕೈದು ತಿಂಗಳ ಹಿಂದೆ ಢಾಬಾ ಪ್ರಾರಂಭವಾಯಿತು. ಪೊಲೀಸ್ ಸಿಬ್ಬಂದಿ ಶೈಲೇಂದ್ರ ಯಾದವ್ ಮತ್ತು ಸಂತೋಷ್ ಯಾದವ್ ನಮ್ಮ ಢಾಬಾಕ್ಕೆ ಬಂದು ಊಟ ಮಾಡಿದರು. ನಂತರ ಬಿಲ್ ಪಾವತಿಸುವಂತೆ ಕೇಳಿದಾಗ ಅವರು ನಮ್ಮ ಮೇಲೆ ದರ್ಪ ತೋರಿದ್ದಲ್ಲದೇ, ವೃದ್ಧ ತಂದೆ ಮತ್ತು ತನ್ನ ಮಗ, ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಇಬ್ಬರು ಬಿಹಾರದ ಪುರುಷರು ಮತ್ತು ಇತರ ಕೆಲವು ಗ್ರಾಹಕರು ಸೇರಿದಂತೆ 10 ಜನರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾ ಚಾಹಲ್ ಅವರಿಗೆ ವಿಕಲಚೇತನ ವ್ಯಕ್ತಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಅಯೋಧ್ಯಾ ಫ್ಲೈಓವರ್‌ನಲ್ಲಿ ನಿಂತಿದ್ದ ಬಸ್ಗೆ ಟ್ರಕ್ ಡಿಕ್ಕಿ: ಆರು ಮಂದಿ ಸಾವು
ಎಲ್ಲಾ ಅಮಾಯಕರ ಮೇಲೆ ಪೊಲೀಸರು ಮದ್ಯ, ಗಾಂಜಾ ಮತ್ತು ಇತರ ಮಾದಕವಸ್ತುಗಳ ಕಳ್ಳಸಾಗಣೆಯ ಬಗ್ಗೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದ ಬಗ್ಗೆ ಕಲೆಕ್ಟರ್‌ಗೆ ದೂರು ನೀಡಿದ್ದು, ಎಸ್‌ಎಸ್ಪಿಗೆ ತನಿಖೆ ನಡೆಸುವಂತೆ ಸೂಚಿಸಿದ್ದು, ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪ್ರವೀಣ್ ಕುಮಾರ್ ಒಂದು ಕಾಲದಲ್ಲಿ ಟಾಟಾ ಕೆಮಿಕಲ್‌ನಲ್ಲಿ ಇಂಜಿನಿಯರ್ ಆಗಿದ್ದರು. ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಎರಡನೇ ಕಾಲು ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ. ಚಿಕಿತ್ಸೆಗೆ ಸಾಕಷ್ಟು ಹಣವನ್ನು ಖರ್ಚು ಮಾಡಲಾಯಿತು. ಬಳಿಕ ಮನೆಯ ಸ್ಥಿತಿ ಹದಗೆಟ್ಟಿತು. ವಿಕಲಚೇತನ ಪ್ರವೀಣ್ ತನ್ನ ಸಂಬಂಧಿಕರಿಂದ ಭೂಮಿಯನ್ನು ಬಾಡಿಗೆಗೆ ಪಡೆದು 5 ತಿಂಗಳ ಹಿಂದೆ ಒಂದು ಸಣ್ಣ ಢಾಬಾ ಪ್ರಾರಂಭಿಸಿದರು.