ಲೂಧಿಯಾನ (ಪಂಜಾಬ್) : ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲೂಧಿಯಾನದ ಭಾಮಿಯಾನ್ನಲ್ಲಿ ನಡೆದಿದೆ. ದೀಪಕ್ ಜೇಕಬ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ಅತ್ತೆಯ ಮನೆಯವರೇ ಕಾರಣ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೊತೆಗೆ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿರುವುದು ಪತ್ತೆಯಾಗಿದೆ.

ದೀಪಕ್ ಮಾಡಿರುವ ವಿಡಿಯೋದಲ್ಲಿ ಇದರಲ್ಲಿ ನನ್ನ ಕುಟುಂಬದವರದ್ದೂ ಏನೂ ತಪ್ಪಿಲ್ಲ. ನನ್ನ ಅತ್ತೆ ಮನೆಯವರು ನನ್ನಿಂದ ನನ್ನ ಮಗಳನ್ನು ಕಿತ್ತುಕೊಂಡಿದ್ದಾರೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡೆತ್ ನೋಟ್ನಲ್ಲಿ, ನನ್ನ ಸಾವಿಗೆ ಪತ್ನಿ, ಅತ್ತೆ ಮತ್ತು ಇನ್ನೊಬ್ಬ ವ್ಯಕ್ತಿ ಕಾರಣ ಎಂದು ಬರೆದಿದ್ದಾನೆ. ಈ ಆತ್ಮಹತ್ಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು , ಆತ್ಮಹತ್ಯೆಗೆ ಮುನ್ನ ಮಾಡಿರುವ ವಿಡಿಯೋ ಹಾಗೂ ಡೆತ್ನೋಟ್ನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತ ದೀಪಕ್ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಲೂಧಿಯಾನ ಸಿವಿಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ದೀಪಕ್ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ, ಅವನ ಹೆಂಡತಿ ಸುಮನ್ ತನ್ನ ಮಗಳನ್ನು ಅವಳ ಹೆತ್ತವರ ಮನೆಗೆ ಮದುವೆ ಮಾಡಿಕೊಟ್ಟಿದ್ದು, ಇದರಿಂದ ಅವನು ತುಂಬಾ ವಿಚಲಿತನಾಗಿದ್ದನು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕಾಶ್ಮೀರದಲ್ಲಿ ಆಜಾನ್ ಕೇಳಿ ಭಾಷಣ ನಿಲ್ಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ