ಮಂಚಿರ್ಯಾಲ, ತೆಲಂಗಾಣ: ಜಿಲ್ಲೆಯಲ್ಲಿ ಅವಮಾನವೀಯ ಘಟನೆಯೊಂದು ನಡೆದಿದೆ. ಬೇರೆಯವರ ಎತ್ತುಗಳು ತಮ್ಮ ಹೊಲದಲ್ಲಿ ಮೇಯ್ದಿವೆ ಎಂದು ಆ ಎತ್ತುಗಳ ಮಾಲೀಕನನ್ನು ತನ್ನ ಮನೆ ಮುಂದೆ ಇರುವ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಏನಿದು ಪ್ರಕರಣ?: ಕೋಟಪಲ್ಲಿ ಮಂಡಲದ ಶೆಟ್ಪಲ್ಲಿ ಗ್ರಾಮದ ನಿವಾಸಿ ದುರ್ಗಂ ಬಾಪು ಪ್ರತಿನಿತ್ಯ ತಮ್ಮ ಎತ್ತುಗಳನ್ನು ಮೇಯಿಸಲು ತೆರಳುತ್ತಿದ್ದರು. ಈ ವೇಳೆ, ಅದೇ ಗ್ರಾಮದ ನಿವಾಸಿ ರಾಂ ರೆಡ್ಡಿ ಅವರ ಹೊಲಕ್ಕೆ ಎತ್ತುಗಳು ನುಗ್ಗಿವೆ. ಹೊಲದಲ್ಲಿದ್ದ ಬೆಳೆಗಳನ್ನು ತಿಂದು ಹಾಕಿವೆ. ಈ ವಿಷಯ ರಾಂ ರೆಡ್ಡಿಗೆ ಗೊತ್ತಾಗಿ ಎತ್ತುಗಳನ್ನು ತಮ್ಮ ಮನೆಯ ಮುಂದೆ ಕಟ್ಟಿದ್ದಾರೆ. ಈ ಎತ್ತುಗಳನ್ನು ಬಿಡಿಸಿಕೊಳ್ಳಲು ದುರ್ಗಂ ಬಾಪು ಸ್ಥಳಕ್ಕೆ ಬಂದಿದ್ದಾರೆ.
ಮನೆಯಲ್ಲಿ ರಾಂ ರೆಡ್ಡಿ ಇಲ್ಲದಿರುವುದನ್ನು ಕಂಡು ಎತ್ತುಗಳನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದುರ್ಗಂ ಬಾಪುಗೆ ರಾಂ ರೆಡ್ಡಿ ಎದುರಾಗಿದ್ದಾರೆ. ಎತ್ತುಗಳನ್ನು ಬಿಡಿಸಿಕೊಂಡು ಹೋಗುತ್ತಿರುವುದನ್ನು ಕಂಡು ರಾಂ ರೆಡ್ಡಿ ಕೋಪಗೊಂಡಿದ್ದಾರೆ. ಈ ವೇಳೆ, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ದುರ್ಗಂ ಬಾಪುರನ್ನು ರಾಂ ರೆಡ್ಡಿ ತನ್ನ ಮನೆಯ ಮುಂದಿರುವ ಕಂಬಕ್ಕೆ ಕಟ್ಟಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದರಿಂದ ಬೇಸರಗೊಂಡ ದುರ್ಗಂ ಬಾಪು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್‌ಎಸ್‌ಐ ಸುರೇಶ್, ಬಾಪು ಅವರನ್ನು ಜಾತಿ ಹೆಸರಿನಲ್ಲಿ ನಿಂದಿಸಿದ ಆರೋಪದ ಮೇಲೆ ಎಸ್‌ಸಿ, ಎಸ್‌ಟಿ ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸದ್ಯ ಸಣ್ಣದೊಂದು ವಿಷಯ ದೊಡ್ಡದಾಗಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪೊಲೀಸರ ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ.
ಓದಿ: ಹೋಂ ವರ್ಕ್ ಮಾಡಿಲ್ಲವೆಂದು 50 ಏಟು.. 200 ಬಸ್ಕಿ ಹೊಡೆಸಿದ ಶಿಕ್ಷಕ: ತನಿಖೆಗೆ ಸೂಚನೆ
ಆರೋಪಿಯನ್ನ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು: ಗುಜರಾತ್ನ ಸೂರತ್ನಲ್ಲಿನ ಸಯಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಪೊಲೀಸರು ಆರೋಪಿಯೊಬ್ಬನನ್ನು ಕೈಕಾಲು ಹಿಡಿದು ವಿದ್ಯುತ್ ಕಂಬದ ಬಳಿ ನಿಲ್ಲಿಸಿದ್ದರು. ನಂತರ ಸಯಾನ್ ಪೊಲೀಸ್ ಠಾಣೆಯ ಎಸ್‌ಐ ಕೈಯಲ್ಲಿ ದೊಣ್ಣೆ ಹಿಡಿದು ಆರೋಪಿಗೆ ಹೊಡೆದಿದ್ದರು ಎಂಬ ಆರೋಪ ಕೇಳಿ ಬಂದಿದ್ದಲ್ಲದೇ ಆ ವಿಡಿಯೋ ವೈರಲ್ ಆಗಿತ್ತು. ಪಿಎಸ್ವೈ ದೊಣ್ಣೆಯಿಂದ ಥಳಿಸಿದ್ದು, ನೋವನ್ನು ತಡೆಯಲಾಗದೇ ಆರೋಪಿ ಕುಸಿದು ಬಿದ್ದಿರುವುದು ವೈರಲ್ ಆದ ವಿಡಿಯೋದಲ್ಲಿ ಕಂಡು ಬಂದಿತ್ತು. ಈ ಘಟನೆ ಕುರಿತು ಪೊಲೀಸ್ ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.