ಕಾಸರಗೋಡು(ಕೇರಳ): ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಇದರ ಮಧ್ಯೆ ಕೇರಳದ ಕಾಸರಗೋಡಿನಲ್ಲಿ ಸಚಿವರೊಬ್ಬರು ರಾಷ್ಟ್ರಧ್ವಜವನ್ನ ತಲೆಕೆಳಗಾಗಿ ಹಾರಿಸಿ, ಅದಕ್ಕೆ ವಂದಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕೇರಳದ ಬಂದರು ಮತ್ತು ಪುರಾತತ್ವ ಇಲಾಖೆ ಸಚಿವರಾಗಿರುವ ಅಹಮ್ಮದ್ ದೇವರ್ಕೊವಿಲ್ ಕಾಸರಗೋಡಿನ ಜಿಲ್ಲಾ ಪಾಲಿಕೆ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಈ ವೇಳೆ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಾಡಿದ್ದು, ಸಚಿವರು ವಂದನೆ ಸಹ ಸಲ್ಲಿಸಿದ್ದಾರೆ. ತಕ್ಷಣವೇ ಇದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಮಾಹಿತಿ ನೀಡುತ್ತಿದ್ದಂತೆ ಧ್ವಜವನ್ನ ಕೆಳಕ್ಕೆ ಇಳಿಸಿ, ಸರಿಪಡಿಸಿದ ಬಳಿಕ ಮತ್ತೊಮ್ಮೆ ಹಾರಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು, ರಾಷ್ಟ್ರಧ್ವಜವನ್ನ ಸರಿಪಡಿಸಿ ಹಾರಿಸುವವರೆಗೂ ಸುಮಾರು 15 ನಿಮಿಷಗಳ ಕಾಲ ಕಾರ್ಯಕ್ರಮ ನಿಲ್ಲಿಸಿದ್ದಾರೆ.
ಧ್ವಜಾರೋಹಣ ಕಾರ್ಯಕ್ರಮದ ವೇಳೆ ಕಾಸರಗೋಡು ಸಂಸದರಾದ ರಾಜಮೋಹನ್, ಶಾಸಕ ಎಕೆಂಎ ಅಶ್ರಫ್, ಎನ್ಎ ನಿಲಿಕ್ಕುನ್ನಾ, ಎಂ ರಾಜಗೋಪಾಲನ್, ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ, ಪ್ರಭಾರಿ ಜಿಲ್ಲಾಧಿಕಾರಿ ಎಡಿಎಂ ಎ ಕೆ ರಾಮೇಂದ್ರನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿರಿ: ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮಿಂಚಿದ ನಾರಿಪಡೆ.. BSF ಮಹಿಳಾ ತಂಡದಿಂದ ರೋಮಾಂಚನಕಾರಿ ಸ್ಟಂಟ್!
ಸಚಿವರ ರಾಜೀನಾಮೆಗೆ ಬಿಜೆಪಿ ಪಟ್ಟು: ಧ್ವಜಾರೋಹಣದ ವೇಳೆ ಈ ಎಡವಟ್ಟು ನಡೆದಿರುವ ಕಾರಣ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಇದೊಂದು ಗಂಭೀರವ ವಿಷಯವಾಗಿದ್ದು, ತಕ್ಷಣವೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ