ETV Bharat / bharat

ಗೂಗಲ್​ ಏಕಸ್ವಾಮ್ಯ ಬಯಲಿಗೆಳೆದ ವಕೀಲೆ: 2 ಸಾವಿರ ಕೋಟಿ ದಂಡ ತೆತ್ತ ಕಂಪನಿ!

ಇಷ್ಟು ದೊಡ್ಡ ಕಂಪನಿ ಎದುರು ಹಾಕಿಕೊಳ್ಳಬಾರದು ಎಂದು ಹಲವರು ಹೇಳಿದ್ದರು. ಈ ಪ್ರಕರಣ ದಾಖಲಿಸಿ ಏನು ಮಾಡುತ್ತೀರಿ ಎಂದು ಕೇಳಿದ್ದರು. ಇದಕ್ಕಾಗಿ ನಾನು ಯಾವುದೇ ಹಣ ಪಡೆದಿಲ್ಲ. ಆದರೆ ಎಲ್ಲವನ್ನೂ ಹಣಕ್ಕಾಗಿ ಮಾಡಲಾಗುವುದಿಲ್ಲ ಎನ್ನುತ್ತಾರೆ ಸುಕರ್ಮಾ ಥಾಪರ್.

ಗೂಗಲ್​ ಏಕಸ್ವಾಮ್ಯ ಬಯಲಿಗೆಳೆದ ವಕೀಲೆ: 2 ಸಾವಿರ ಕೋಟಿ ರೂ. ದಂಡ ತೆತ್ತ ಕಂಪನಿ!
A young lady who doesn't leave Google if it makes a mistake
author img

By

Published : Nov 2, 2022, 4:12 PM IST

ಹೈದರಾಬಾದ್​: ಕೆಲವರು ಎಲ್ಲದಕ್ಕೂ ಗೂಗಲ್ ಇದೆಯಲ್ಲ ಎನ್ನುತ್ತಿರುತ್ತಾರೆ. ಗೂಗಲ್ ಇರುವಾಗ ನಮಗೇಕೆ ವರಿ ಎನ್ನುವುದು ಹೊಸ ಗಾದೆ ಮಾತಾಗಿದೆ. ಆದರೆ ತಪ್ಪು ಮಾಡಿದರೆ ಗೂಗಲ್​ಗೆ ಸಹ ಶಿಕ್ಷೆ ನೀಡಬಹುದು ಎಂಬುದನ್ನು ಯುವ ವಕೀಲೆಯೊಬ್ಬರು ತೋರಿಸಿದ್ದಾರೆ. ಗೂಗಲ್​ಗೆ ಒಂದೇ ವಾರದಲ್ಲಿ 2 ಸಾವಿರ ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಒಬ್ಬ ಯುವ ವಕೀಲೆಯಿಂದ. ಅವರು ಹೆಸರು ಸುಕರ್ಮಾ ಥಾಪರ್.

ಸಿಸಿಐ (Competition Commission of India -CCI) ಸಂಸ್ಥೆಯು ದೇಶದ ವ್ಯಾಪಾರ ಉದ್ಯಮಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಖಚಿತಪಡಿಸುತ್ತದೆ. ಈ ಸಂಸ್ಥೆಯು ಏಕಸ್ವಾಮ್ಯದ ಕಂಪನಿಗಳ ನಡವಳಿಕೆಯ ಮೇಲೆ ಕಣ್ಣಿಡುತ್ತದೆ. ದೆಹಲಿಯ ಸುಕರ್ಮಾ ಥಾಪರ್ ಎಂಬ ಯುವತಿ ಸ್ವತಂತ್ರ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಲೇ ಈ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಡಿಪಾಲ್ಟ್​ ಆ್ಯಪ್​ಗಳು: 2018 ರಲ್ಲಿ ಸುಕರ್ಮಾ ಅವರಿಗೆ ಒಂದು ವಿಚಾರ ಬಂದಿತ್ತು. ನಾವು Android ಫೋನ್‌ಗಳನ್ನು ಖರೀದಿಸಿದಾಗ ಅದರಲ್ಲಿ ಕೆಲ ಡಿಫಾಲ್ಟ್ ಆ್ಯಪ್​ಗಳಿರುತ್ತವೆ. ಅವುಗಳನ್ನು ನಮ್ಮಿಂದ ಡಿಲೀಟ್ ಮಾಡಲು ಸಾಧ್ಯವಿಲ್ಲ. ಇಷ್ಟವಿರಲಿ, ಇಲ್ಲದಿರಲಿ ನಮ್ಮ ಫೋನ್​ಗಳಲ್ಲಿ ಅವು ಇರುತ್ತವೆ. ಇವಕ್ಕೂ ಉತ್ತಮ ಆ್ಯಪ್​ಗಳಿವೆಯಾ ಎಂಬುದನ್ನು ಸಹ ತಿಳಿಯಲು ಇವು ಬಿಡುವುದಿಲ್ಲ.

ಮಾರುಕಟ್ಟೆಯಲ್ಲಿ ಗೂಗಲ್‌ನ ಏಕಸ್ವಾಮ್ಯದಿಂದಾಗಿ ಇದು ನಡೆಯುತ್ತಿದೆ ಎಂದು ಕೆಲವರು ದೂರುತ್ತಾರೆ. ಈ ಸಂಬಂಧ ಕಂಪನಿ ವಿರುದ್ಧ ಈಗಾಗಲೇ ಕೆಲವು ದೂರುಗಳು ಬಂದಿವೆ. ಗೂಗಲ್ ಅನುಸರಿಸುತ್ತಿರುವ ವಿಧಾನದಿಂದ ಕೆಲವು ಕಂಪನಿಗಳು ಬೆಳೆಯುತ್ತಿಲ್ಲ ಎಂಬುದು ಈಗ ಚರ್ಚೆಯ ಮುಖ್ಯ ವಿಷಯವಾಗಿದೆ.

ಆದರೆ, ಇದನ್ನು ಸಾಬೀತುಪಡಿಸುವುದು ಸುಲಭವಾಗಿರಲಿಲ್ಲ. ಆದಾಗ್ಯೂ, ಸುಕರ್ಮಾ ಮತ್ತೊಬ್ಬ ಸಂಶೋಧನಾ ಸಹಾಯಕ ಉಮರ್ - ಜಾವೇದ್ ಮತ್ತು ಆತನ ಕಿರಿಯ ಸಹೋದರ ಅಕಿಬ್ ಜೊತೆಗೆ ಸರಿಯಾದ ಪುರಾವೆಗಳನ್ನು ಹುಡುಕಿದರು.

ತಮ್ಮ ಕೆಲಸದ ಬಗ್ಗೆ ಮಾತನಾಡಿದ ಸುಕರ್ಮಾ ಹೇಳಿದ್ದು ಹೀಗೆ: ಈ ವಿಷಯದಲ್ಲಿ ನಾನು ಕಷ್ಟಪಟ್ಟು ಕೆಲಸ ಮಾಡಬೇಕಿತ್ತು. 2018 ರಲ್ಲಿ ಯುರೋಪಿಯನ್ ಕಮಿಷನ್ ಗೂಗಲ್‌ಗೆ ಭಾರಿ ದಂಡ ವಿಧಿಸಿತು. ಅದರ ನಂತರ ನಾನು ಈ ವಿಷಯದಲ್ಲಿ ಒಂದು ಮಾರ್ಗವನ್ನು ಕಂಡುಕೊಂಡೆ. ನಾನು ದಿನವಿಡೀ ಕೆಲಸ ಮಾಡುತ್ತಿದ್ದೆ ಮತ್ತು ಉಳಿದ ಸಮಯದಲ್ಲಿ ಸುಳಿವುಗಳನ್ನು ಹುಡುಕುತ್ತಿದ್ದೆ.ತಡವಾಗಿ ಮಲಗುತ್ತಿದ್ದೆ.

ಆದರೂ ಬೆಳಗಾಗುವ ಮೊದಲು ಎದ್ದು, ಮತ್ತೆ ಅದೇ ಕೆಲಸವನ್ನು ಮಾಡುತ್ತಿದ್ದೆ. ಆಗ ಗೂಗಲ್ ಕಾಂಟ್ರಾಕ್ಟ್‌ಗಳ ಕುರಿತು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ನಡೆಸಿದ ಅಧ್ಯಯನದ ಬಗ್ಗೆ ನನಗೆ ತಿಳಿಯಿತು. ಅಮೆರಿಕದಲ್ಲಿ ಆಪಲ್ ಫೋನ್​ಗಳ ಬಳಕೆ ಹೆಚ್ಚು. ನಾವು ಆಂಡ್ರಾಯ್ಡ್ ಹೆಚ್ಚು ಬಳಸುತ್ತೇವೆ. ಆದಾಗ್ಯೂ, ಡೇಟಾವನ್ನು ಹೋಲಿಸಿದಾಗ, ಕೆಲ ಸುಳಿವುಗಳು ಕಂಡುಬಂದಿವೆ. ಹಾಗಾಗಿ ನಾವು ಕಂಡುಕೊಂಡದ್ದನ್ನು ಸಿಸಿಐಗೆ ಒಪ್ಪಿಸಿದ ನಂತರ ಗೂಗಲ್‌ಗೆ ದಂಡ ವಿಧಿಸಲು ಸಾಧ್ಯವಾಯಿತು ಎಂದು ನಲ್ಸಾರ್ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಎಂ ಪೂರ್ಣಗೊಳಿಸಿದ ಸುಕರ್ಮಾ ಹೇಳಿದರು.

ದೊಡ್ಡ ಕಂಪನಿ ಎದುರು ಹಾಕಿಕೊಳ್ಳದಂತೆ ಕೆಲವರು ಸಲಹೆ ನೀಡಿದ್ದರು: ಇಷ್ಟು ದೊಡ್ಡ ಕಂಪನಿಯನ್ನು ಎದುರು ಹಾಕಿಕೊಳ್ಳಬಾರದು ಎಂದು ಹಲವರು ಹೇಳಿದ್ದರು. ಈ ಪ್ರಕರಣ ದಾಖಲಿಸಿ ಏನು ಮಾಡುತ್ತೀರಿ ಎಂದು ಕೇಳಿದ್ದರು. ಇದಕ್ಕಾಗಿ ನಾನು ಯಾವುದೇ ಹಣ ಪಡೆದಿಲ್ಲ. ಆದರೆ ಎಲ್ಲವನ್ನೂ ಹಣಕ್ಕಾಗಿ ಮಾಡಲಾಗುವುದಿಲ್ಲ. ನಮ್ಮ ಶಿಕ್ಷಣವು ಸಾಮಾಜಿಕ ಉದ್ದೇಶವನ್ನೂ ಹೊಂದಿರಬೇಕು ಎಂದು ನಾನು ನಂಬುತ್ತೇನೆ.

ಈ ಘಟನೆಯಿಂದ ಬಳಕೆದಾರರಿಗೆ ಲಾಭವಾದರೆ ಸಾಕು. ಪುಸ್ತಕಗಳು ನನಗೆ ತುಂಬಾ ಸಹಾಯ ಮಾಡಿದೆ ಎಂದು ನಾನು ಹೇಳಲೇಬೇಕು. ನಾನು ಮೊದಲಿನಿಂದಲೂ ಸ್ಪರ್ಧಾ ಕಾನೂನು, ಬೌದ್ಧಿಕ ಆಸ್ತಿ ಹಕ್ಕುಗಳ ಕಾನೂನು ಮತ್ತು ಪರಿಸರ ಕಾನೂನಿನಲ್ಲಿ ಬಹಳ ಆಸಕ್ತಿ ಹೊಂದಿದ್ದೇನೆ'. ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿನಿಯೂ ತನ್ನಂತೆ ಕುತೂಹಲ ಹೊಂದಿದ್ದರೆ ಅಂತಹ ಸಾಧನೆಗಳನ್ನು ಸಾಧಿಸುವುದು ಸುಲಭ ಎನ್ನುತ್ತಾರೆ ಸುಕರ್ಮಾ.

ಇದನ್ನೂ ಓದಿ: ಪ್ಲೇಸ್ಟೋರ್​ ಒಪ್ಪಂದ ಉಲ್ಲಂಘನೆ: ಗೂಗಲ್​ಗೆ ₹936 ಕೋಟಿ ದಂಡ, ವಾರದೊಳಗೆ 2ನೇ ಸಲ ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.