ETV Bharat / bharat

ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾದ ಲಿಂಕ್ ವಾಟ್ಸಪ್​ನಲ್ಲಿ ಶೇರ್.. ಕ್ಲಿಕ್ ಮಾಡಿದ್ರೆ ಬೀಳುತ್ತೆ ಪಂಗನಾಮ - ವಾಟ್ಸಪ್​ ಲಿಂಕ್ ಕ್ಲಿಕ್ ಮಾಡದಿರುವಂತೆ ಎಚ್ಚರಿಕೆ

ನೋಯ್ಡಾದ ಹೆಚ್ಚುವರಿ ಉಪ ಆಯುಕ್ತ ರಣವಿಜಯ್ ಸಿಂಗ್​ ಬುಧವಾರ ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ವಾಟ್ಸಪ್​ ಅಥವಾ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರಿಂದ ಬರುವ ಈ ಸಿನಿಮಾದ ಲಿಂಕ್​ಗಳನ್ನು ಕ್ಲಿಕ್ ಮಾಡಿದರೆ, ಮೊಬೈಲ್ ಸಂಖ್ಯೆಗೆ ಲಿಂಕ್​ ಆಗಿರುವ ಬ್ಯಾಂಕ್ ಖಾತೆಯಲ್ಲಿರುವ ನಿಮ್ಮ ಸಂಪೂರ್ಣ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

Police warn against clicking on download links sent on WhatsApp
ದಿ ಕಾಶ್ಮೀರ ಫೈಲ್ಸ್​ ಸಿನಿಮಾದ ಲಿಂಕ್ ವಾಟ್ಸಪ್​ನಲ್ಲಿ ಶೇ
author img

By

Published : Mar 16, 2022, 9:56 PM IST

ನೋಯ್ಡಾ: ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್​ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ದೇಶಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಚಲನಚಿತ್ರವನ್ನು ಉಚಿತವಾಗಿ ತೋರಿಸುವ ನೆಪದಲ್ಲಿ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಉತ್ತರ ಪ್ರದೇಶದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನೋಯ್ಡಾದ ಹೆಚ್ಚುವರಿ ಉಪ ಆಯುಕ್ತ ರಣವಿಜಯ್ ಸಿಂಗ್​ ಬುಧವಾರ ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ವಾಟ್ಸಪ್​ ಅಥವಾ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರಿಂದ ಬರುವ ಈ ಸಿನಿಮಾದ ಲಿಂಕ್​ಗಳನ್ನು ಕ್ಲಿಕ್ ಮಾಡಿದರೆ, ಮೊಬೈಲ್ ಸಂಖ್ಯೆಗೆ ಲಿಂಕ್​ ಆಗಿರುವ ಬ್ಯಾಂಕ್ ಖಾತೆಯಲ್ಲಿರುವ ನಿಮ್ಮ ಸಂಪೂರ್ಣ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ವಾಟ್ಸಮ್​ ಅಥವಾ ಸಾಮಾಜಿಕ ಜಾಲತಾಣದಲ್ಲಿ ಅನಾಮಿಕ ವ್ಯಕ್ತಿಗಳು ಶೇರ್​ ಮಾಡುವ ಲಿಂಕ್​ಗಳನ್ನು ಕ್ಲಿಕ್​ ಮಾಡಬೇಡಿ ಮತ್ತು ಅವುಗಳನ್ನು ಯಾವುದೇ ಗುಂಪುಗಳಿಗೆ ಶೇರ್​ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಸಲಹೆ ನೀಡಿದ್ದಾರೆ. ಜೊತೆಗೆ ಈಗಾಗಲೇ ನೀವು ಶೇರ್​ ಮಾಡಿರುವ ಗುಂಪುಗಳಿಗೆ ಲಿಂಕ್​ ಕ್ಲಿಕ್ ಮಾಡದಂತೆ ಆದಷ್ಟು ಬೇಗ ತಿಳಿಸಿ ಎಂದು ಸಲಹೆ ನೀಡಿದ್ದಾರೆ.

1990ರ ಕಾಶ್ಮೀರ್​ ಕಣಿವೆಯಲ್ಲಿ ನಡೆದಿರುವ ಕಾಶ್ಮೀರಿ ಪಂಡಿತರ ನರಮೇಧ ಕುರಿತು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ಮಿಸಲಾಗಿದ್ದು, ಸಿನಿಮಾ ವಾರದಲ್ಲೇ ದೇಶಾದ್ಯಂತ ಸಂಚಲನ ಮೂಡಿಸಿದೆ. ಒಂದು ವಾರಕ್ಕೆ 50ಕ್ಕೂ ಹೆಚ್ಚು ಕೋಟಿ ರೂ.ಗೂ ಹೆಚ್ಚಿನ ಗಳಿಕೆ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಆದರೆ ಆನ್​ಲೈನ್ ಖದೀಮರು ಇದನ್ನೇ ಬಂಡವಾಳ ಮಾಡಿಕೊಂಡು ಸಿನಿಮಾದ ತುಣಕುಗಳು ಅಥವಾ ಸಿನಿಮಾದ ಲಿಂಕ್​ ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಈಗಾಗಲೇ ದೇಶಾದ್ಯಂತ ಈ ರೀತಿಯ ಲಿಂಕ್​ಗಳು ವಿಪರೀತವಾಗಿ ಶೇರ್​ ಆಗಿವೆ. ಹೀಗೆ ವಾಟ್ಸಪ್​ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಇತ್ತೀಚೆಗೆ, ಈ ರೀತಿಯ ವಂಚನೆಯ ಬಗ್ಗೆ ಕಳೆದ 24 ಗಂಟೆಗಳಲ್ಲಿ ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ವ್ಯಕ್ತಿಗಳು ಹಣ ಕಳೆದುಕೊಂಡಿರುವ ಬಗ್ಗೆ ಒಂದೇ ರೀತಿಯ ದೂರು ದಾಖಲಿಸಿದ್ದಾರೆ. ವಾಟ್ಸಪ್​ ಮೂಲಕ ಬಂದ ಲಿಂಕ್​ ಕ್ಲಿಕ್​ ಮಾಡಿ ಅವರು ಒಟ್ಟು 30 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ" ಎಂದು ಪಿಟಿಐಗೆ ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವದೆಲ್ಲೆಡೆ ಹೊಸ ದಾಖಲೆ ಬರೆಯಲಿದೆ ಪವರ್ ಸ್ಟಾರ್ ಜೇಮ್ಸ್ ಸಿನಿಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.