ETV Bharat / bharat

'ಅಗ್ನಿಪಥ್' ನೇಮಕಾತಿ ವಿವರ ಬಿಡುಗಡೆ ಮಾಡಿದ ವಾಯುಸೇನೆ: ಅರ್ಹತೆ, ವೇತನ ಹೀಗಿದೆ.. - ಭಾರತೀಯ ವಾಯುಪಡೆ

ಅಗ್ನಿಪಥ್ ಯೋಜನೆಯಂತೆ, ಭಾರತೀಯ ವಾಯುಪಡೆ(ಐ​​ಎಎಫ್)ಯು ನೇಮಕಾತಿಯ ಅರ್ಹತೆ, ಪ್ರಯೋಜನಗಳ ವಿವರಗಳನ್ನು ಇಂದು ಬಿಡುಗಡೆ ಮಾಡಿದೆ.

The Indian Air Force
ಭಾರತೀಯ ವಾಯುಪಡೆ
author img

By

Published : Jun 19, 2022, 11:11 AM IST

ನವದೆಹಲಿ: ನಾಲ್ಕು ವರ್ಷಗಳ ಅವಧಿಗೆ ಯುವಕರನ್ನು ಸೇನೆಗೆ ನೇಮಿಸಿಕೊಳ್ಳುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಅಗ್ನಿಪಥ್' ಯೋಜನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಭಾರತೀಯ ವಾಯುಪಡೆ ನೇಮಕಾತಿ ವಿವರಗಳನ್ನು ಭಾನುವಾರ ಬಿಡುಗಡೆ ಮಾಡಿತು. ನೇಮಕಾತಿ ಪ್ರಕ್ರಿಯೆ ಜೂನ್ 24 ರಂದು ಪ್ರಾರಂಭವಾಗಲಿದೆ. ರಕ್ಷಣಾ ಸಚಿವಾಲಯ ಈಗಾಗಲೇ ಅಗ್ನಿವೀರರಿಗೆ ಶೇ.10 ರಷ್ಟು ಮೀಸಲಾತಿಯನ್ನು ಘೋಷಿಸಿದೆ.

ಅಭ್ಯರ್ಥಿಗಳು ವಾಯುಸೇನೆಗೆ ಸೇರಲು ಬೇಕಿರುವ ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಮತ್ತು ಪ್ರಯೋಜನಗಳನ್ನು ಒಳಗೊಂಡಂತೆ ಯೋಜನೆಯ ವಿವಿಧ ಅಂಶಗಳನ್ನು ವಿವರಿಸುತ್ತದೆ.

  • ಐಎಎಫ್​​ ಪ್ರಕಾರ, ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ 4 ವರ್ಷ ಪೂರೈಸಿದ ಬಳಿಕ ಸೇನೆಯ ಕೆಲಸ ಬಿಟ್ಟು ಬರಬೇಕು. ಈ ಯೋಜನೆಯಡಿ ಸೇವೆ ಸಲ್ಲಿಸಿದ ಶೇ.25ರಷ್ಟು ಮಂದಿಗೆ ಮಾತ್ರ ಸೇನೆಯಲ್ಲಿ ರೆಗ್ಯುಲರ್ ಆಗಿ ನೌಕರಿ ನೀಡಲಾಗುತ್ತದೆ. ಉಳಿದ ಶೇ.75ರಷ್ಟು ಮಂದಿಗೆ ಸೇನೆಯಲ್ಲಿ ಖಾಯಂ ನೌಕರಿ ಸಿಗಲ್ಲ.
  • ಯೋಜನೆಯಿಂದ ಇಷ್ಟು ವರ್ಷಗಳ ಕಾಲ ಮಾಡುತ್ತಿದ್ದ ಸೈನಿಕರ ನೇಮಕಾತಿ ಸಂಖ್ಯೆ ಕಡಿತವಾಗಲಿದೆ. ಸಶಸ್ತ್ರ ಪಡೆಗಳಿಗೆ ಮತ್ತಷ್ಟು ದಾಖಲಾತಿಗಾಗಿ ಆಯ್ಕೆಯಾಗುವ ಯಾವುದೇ ಹಕ್ಕನ್ನು ಅವರು ಹೊಂದಿರುವುದಿಲ್ಲ. ಆಯ್ಕೆಯು ಸರ್ಕಾರದ ವಿಶೇಷ ಅಧಿಕಾರ ವ್ಯಾಪ್ತಿಯಾಗಿರುತ್ತದೆ.
  • ಅರ್ಹತೆ: 'ಅಖಿಲ ಭಾರತ' ಎಲ್ಲಾ ವರ್ಗಗಳು.
  • ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ, ದೈಹಿಕ ಮಾನದಂಡ: ಅರ್ಹ ವಯಸ್ಸು 17.5 ವರ್ಷದಿಂದ 21 ವರ್ಷಗಳವರೆಗೆ ಇರುತ್ತದೆ. ಇತರ ಶೈಕ್ಷಣಿಕ ಅರ್ಹತೆಗಳು ಮತ್ತು ದೈಹಿಕ ಮಾನದಂಡಗಳನ್ನು ಭಾರತೀಯ ವಾಯುಪಡೆಯಿಂದ ನೀಡಲಾಗುತ್ತದೆ.
  • ವೈದ್ಯಕೀಯ ಮಾನದಂಡ: ಅಗ್ನಿವೀರರು ಆಯಾ ವಿಭಾಗಗಳು/ಟ್ರೇಡ್‌ಗಳಿಗೆ ಅನ್ವಯವಾಗುವಂತೆ ಐಎಎಫ್​​ನಲ್ಲಿ ದಾಖಲಾತಿಗಾಗಿ ನಿಗದಿಪಡಿಸಿದ ವೈದ್ಯಕೀಯ ಅರ್ಹತೆಯ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.
  • ಉದ್ಯೋಗಾವಕಾಶ: ಈ ಪ್ರವೇಶದ ಅಡಿಯಲ್ಲಿ ದಾಖಲಾದ ಅಗ್ನಿವೀರರು ವಿವೇಚನೆಯಿಂದ ಸಾಂಸ್ಥಿಕ ಆಸಕ್ತಿಯಲ್ಲಿ ಯಾವುದೇ ಕರ್ತವ್ಯವನ್ನು ಮಾಡಲು ಹೊಣೆಗಾರರಾಗಿರುತ್ತಾರೆ.
  • ಸಮವಸ್ತ್ರ: ಯುವಕರ ಚೈತನ್ಯವನ್ನು ಪ್ರೋತ್ಸಾಹಿಸಲು ಮತ್ತು ಗುರುತಿಸಲು, ತಮ್ಮ ನಿಗದಿತ ಅವಧಿಯಲ್ಲಿ ಅಗ್ನಿವೀರರು ತಮ್ಮ ಸಮವಸ್ತ್ರದ ಮೇಲೆ ವಿಶಿಷ್ಟವಾದ ಚಿಹ್ನೆಯನ್ನು ಧರಿಸುತ್ತಾರೆ.
  • ತರಬೇತಿ: ದಾಖಲಾದ ನಂತರ, ಸಾಂಸ್ಥಿಕ ಅಗತ್ಯತೆಗಳ ಆಧಾರದ ಮೇಲೆ ವ್ಯಕ್ತಿಗಳಿಗೆ ಮಿಲಿಟರಿ ತರಬೇತಿಯನ್ನು ನೀಡಲಾಗುತ್ತದೆ.
  • ಗೌರವ ಮತ್ತು ಪ್ರಶಸ್ತಿ: ಐಎಎಫ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಕಾರ, ಅಗ್ನಿವೀರರು ಗೌರವ ಮತ್ತು ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ.
  • ರಜೆ: ರಜೆಯ ವಿವರ ಸಂಸ್ಥೆಯ ಅಗತ್ಯತೆಗಳಿಗೆ ಒಳಪಟ್ಟಿರುತ್ತದೆ.
  • ವೈದ್ಯಕೀಯ ಸೌಲಭ್ಯಗಳು: ಸೇವೆಯ ಅವಧಿಯವರೆಗೆ ಅಗ್ನಿವೀರರು ಸೇವಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.
  • ಸ್ವಂತ ಕೋರಿಕೆಯ ಮೇರೆಗೆ ಬಿಡುಗಡೆ: ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಅಸಾಧಾರಣ ಸಂದರ್ಭಗಳಲ್ಲಿ ಹೊರತುಪಡಿಸಿ, ನಿಗದಿತ ಅವಧಿಯನ್ನು ಪೂರ್ಣಗೊಳಿಸುವ ಮೊದಲು ಸ್ವಂತ ಕೋರಿಕೆಯ ಮೇರೆಗೆ ಬಿಡುಗಡೆಯನ್ನು ಅನುಮತಿಸಲಾಗುವುದಿಲ್ಲ.
  • ಪಾವತಿ, ಭತ್ಯೆ ಮತ್ತು ಸಂಬಂಧಿತ ಪ್ರಯೋಜನಗಳು: ಈ ಯೋಜನೆಯ ಅಡಿಯಲ್ಲಿ ನೋಂದಾಯಿಸಲಾದ ವ್ಯಕ್ತಿಗಳಿಗೆ ತಿಂಗಳಿಗೆ 30,000/- ರೂ. ವೇತನ ನೀಡಲಾಗುತ್ತದೆ. ಅಪಾಯ ಮತ್ತು ಸಂಕಷ್ಟ, ಉಡುಗೆ ಮತ್ತು ಪ್ರಯಾಣ ಭತ್ಯೆಗಳನ್ನು ಪಾವತಿಸಲಾಗುತ್ತದೆ.
  • ನೇಮಕಾತಿ ಪ್ರಕ್ರಿಯೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಮುಕ್ತವಾಗಿರುವುದರಿಂದ ದಾಖಲಾತಿ ಫಾರ್ಮ್‌ಗೆ ಅಪ್ರಾಪ್ತ ವಯಸ್ಕರ ಪೋಷಕರಿಂದ ಸಹಿ ಮಾಡಬೇಕಾಗುತ್ತದೆ ಎಂದು ಐಎಎಫ್ ಹೇಳಿದೆ. ಯೋಜನೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಔಪಚಾರಿಕವಾಗಿ ಒಪ್ಪಿಕೊಂಡು ಅಗ್ನಿವೀರರು ದಾಖಲಾತಿಗೆ ಸಹಿ ಮಾಡಬೇಕಾಗಿದೆ.
  • ಅಗ್ನಿವೀರರಿಗಾಗಿ ಕಾರ್ಪಸ್ ಫಂಡ್ ರಚಿಸಲಾಗುವುದು. ಪ್ರತಿಯೊಬ್ಬ ಅಗ್ನಿವೀರ ತನ್ನ ವೇತನದ ಶೇ.30 ರಷ್ಟುನ್ನು ಈ ನಿಧಿಗೆ ನೀಡುತ್ತಾನೆ. ಸಾರ್ವಜನಿಕ ಭವಿಷ್ಯ ನಿಧಿಗೆ ಸಮಾನವಾದ ಬಡ್ಡಿದರವನ್ನು ಸರ್ಕಾರ ನೀಡುತ್ತದೆ.

ಇದನ್ನೂ ಓದಿ: ಕೇಂದ್ರದ ಅಗ್ನಿಪಥ ಯೋಜನೆಗೆ ವಿರೋಧವೇಕೆ? ದೇಶಾದ್ಯಂತ ಪ್ರತಿಭಟನೆ ಹುಟ್ಟುಹಾಕಲು ಕಾರಣವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.