ನವದೆಹಲಿ: ಸ್ಟಾರ್ಟ್ಅಪ್ನಂತಹ ನವೋದ್ಯಮಗಳಿಗೆ ಉತ್ತೇಜನ ನೀಡಲು ಏಂಜೆಲ್ ತೆರಿಗೆ (ಬಂಡವಾಳ ಹೂಡಿಕೆ ಮೇಲಿನ ತೆರಿಗೆ) ರದ್ದನ್ನು ಒಂದು ವರ್ಷ ಮುಂದೂಡಿಕೆ ಮಾಡುವುದಾಗಿ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
100 ಕೋಟಿ ರೂ. ವಹಿವಾಟಿನ ನವೋದ್ಯಮಗಳಿಗೆ, 10 ವರ್ಷಗಳಲ್ಲಿ 3 ಹಣಕಾಸಿನ ವರ್ಷಗಳಲ್ಲಿ ಶೇ 100ವರೆಗೆ ಕಡಿತದ ರಿಯಾಯಿತಿ ನೀಡುತ್ತಿದೆ. ಇದನ್ನು ಮತ್ತೆ ಒಂದು ವರ್ಷ ಮುಂದೂಡಿಕೆ ಮಾಡಿದೆ.
ನವೋದ್ಯಮದ ಬಹು ಬೇಡಿಕೆಯಾದ ಏಂಜೆಲ್ ತೆರಿಗೆ ಹಿಂಪಡೆತಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಬಜೆಟ್ನಲ್ಲಿ ಒಪ್ಪಿಗೆ ಸೂಚಿಸಿ, 'ಬಂಡವಾಳ ಹೂಡಿಕೆ ಮೇಲಿನ ತೆರಿಗೆ ರದ್ದು ಹಾಗೂ ಆದಾಯ ತೆರಿಗೆ ಪರಿಶೀಲನೆಯಿಂದ ವಿನಾಯಿತಿ' ನೀಡುವುದಾಗಿ ಹೇಳಿದ್ದರು.