ETV Bharat / bharat

ಕೇರಳದಲ್ಲಿ ಮೊಟ್ಟಮೊದಲ ಮಾನವ ಎದೆ ಹಾಲು ಬ್ಯಾಂಕ್ ಕಾರ್ಯಾರಂಭ

author img

By

Published : Feb 7, 2021, 12:18 PM IST

ರೋಟರಿ ಕ್ಲಬ್‌ ಸಹಾಯದಿಂದ ಕೇರಳದಲ್ಲಿ ಮೊಟ್ಟಮೊದಲ ಎದೆ ಹಾಲು ಬ್ಯಾಂಕ್ ಕಾರ್ಯಾರಂಭಗೊಂಡಿದೆ. ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಬರುವ ತಾಯಂದಿರಿಂದ ಎದೆ ಹಾಲನ್ನು ಪಡೆದು ಬ್ಯಾಂಕಿನಲ್ಲಿ ಸಂಗ್ರಹಿಸಲಾಗುತ್ತದೆ. ಇದು ಸ್ವಯಂಪ್ರೇರಿತ ದಾನ ಮತ್ತು ಹಾಲನ್ನು ಪ್ಯಾಸ್ಚರೈಸೇಶನ್ ನಂತರ ಆರು ತಿಂಗಳವರೆಗೆ ಬ್ಯಾಂಕಿನಲ್ಲಿ ಸಂಗ್ರಹಿಸಬಹುದು.

The first breast milk bank in the state started in Ernakulam
ಕೇರಳದಲ್ಲಿ ಮೊಟ್ಟಮೊದಲ ಮಾನವ ಎದೆ ಹಾಲು ಬ್ಯಾಂಕ್ ಕಾರ್ಯಾರಂಭ

ಎರ್ನಾಕುಲಂ: ರೋಟರಿ ಕ್ಲಬ್‌ ಸಹಾಯದಿಂದ ಕೇರಳದಲ್ಲಿ ಮೊಟ್ಟಮೊದಲ ಎದೆ ಹಾಲು ಬ್ಯಾಂಕ್ ಕಾರ್ಯಾರಂಭಗೊಂಡಿದೆ. ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಎರ್ನಾಕುಲಂನಲ್ಲಿ ಶುಕ್ರವಾರ 'ನೆಕ್ಟರ್ ಆಫ್ ಲೈಫ್' ಯೋಜನೆಯಡಿ ರಾಜ್ಯದ ಮೊದಲ ಎದೆ ಹಾಲು ಬ್ಯಾಂಕ್ ಉದ್ಘಾಟಿಸಿದರು.

ಆರಂಭದಲ್ಲಿ, ಈ ಯೋಜನೆಯು ಎರ್ನಾಕುಲಂ ಜನರಲ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ದಾಖಲಾಗುವ ಎಲ್ಲಾ ಶಿಶುಗಳಿಗೆ ಉಚಿತ ಎದೆ ಹಾಲು ನೀಡುವುದನ್ನು ಖಚಿತಪಡಿಸುತ್ತದೆ. ನಂತರ ಎದೆ ಹಾಲಿನಿಂದ ವಂಚಿತರಾಗಿರುವ ಹೆಚ್ಚಿನ ಶಿಶುಗಳಿಗೆ ತಲುಪಲು ಜಾಲವನ್ನು ವಿಸ್ತರಿಸಲಿದೆ. ಎರ್ನಾಕುಲಂ ಜನರಲ್ ಆಸ್ಪತ್ರೆಯಲ್ಲಿ ಪ್ರತಿವರ್ಷ ಸುಮಾರು 3600 ಶಿಶುಗಳು ಜನಿಸುತ್ತವೆ. ವಾರ್ಷಿಕವಾಗಿ ಸುಮಾರು 1000 ಶಿಶುಗಳನ್ನು ಎನ್‌ಐಸಿಯುಗಳಲ್ಲಿ ದಾಖಲಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಬರುವ ತಾಯಂದಿರಿಂದ ಎದೆ ಹಾಲನ್ನು ಪಡೆದು ಬ್ಯಾಂಕಿನಲ್ಲಿ ಸಂಗ್ರಹಿಸಲಾಗುತ್ತದೆ. ಇದು ಸ್ವಯಂಪ್ರೇರಿತ ದಾನವಾಗಿದ್ದು, ಹಾಲನ್ನು ಪ್ಯಾಸ್ಚರೈಸೇಶನ್ ನಂತರ ಆರು ತಿಂಗಳವರೆಗೆ ಬ್ಯಾಂಕಿನಲ್ಲಿ ಸಂಗ್ರಹಿಸಬಹುದು. ಈ ಯೋಜನೆಯ ಪ್ರಮುಖ ಫಲಾನುಭವಿಗಳು ಅಕಾಲಿಕವಾಗಿ ಜನಿಸಿದ ಶಿಶುಗಳು, ಸಾಕಷ್ಟು ದೇಹದ ತೂಕವಿಲ್ಲದೆ ಜನಿಸಿದ ಶಿಶುಗಳು, ಸಾಕಷ್ಟು ಎದೆ ಹಾಲು ಉತ್ಪಾದಿಸದ ತಾಯಂದಿರ ಶಿಶುಗಳು, ವಿವಿಧ ಕಾರಣಗಳಿಗಾಗಿ ತಾಯಂದಿರಿಂದ ದೂರ ಉಳಿದಿರುವ ಶಿಶುಗಳು.

ಇದನ್ನೂ ಓದಿ: "ಜವಾರಿ ಆಹಾರ ಸೇವಿಸಿ,‌ ಕೊರೊನಾ ಓಡಿಸಿ"- ಸಿನಿಮಾ ಕಲಾವಿದನಿಂದ ಆಹಾರ ಜಾಗೃತಿ

ತಜ್ಞರ ಪ್ರಕಾರ, ಶಿಶುಗಳ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಸೋಂಕನ್ನು ತಡೆಗಟ್ಟಲು ಎದೆ ಹಾಲು ಅತ್ಯಗತ್ಯ. ಮಗುವಿನ ಒಟ್ಟಾರೆ ಆರೋಗ್ಯವನ್ನು ಇದು ಹೆಚ್ಚಿಸುತ್ತದೆ. ಭಾರತದ ಮಾನವ ಹಾಲಿನ ಬ್ಯಾಂಕ್ 30 ವರ್ಷಗಳ ಇತಿಹಾಸವನ್ನು ಹೊಂದಿದೆ. ಭಾರತದ ಮೊದಲ ಮಾನವ ಹಾಲಿನ ಬ್ಯಾಂಕ್ ಅನ್ನು 1989 ರಲ್ಲಿ ಮುಂಬೈ ಸಿಯಾನ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಯಿತು. ಈಗ ಈ ಹಾಲಿನ ಬ್ಯಾಂಕ್ ವಾರ್ಷಿಕವಾಗಿ ಸುಮಾರು 1200 ಲೀಟರ್ ಹಾಲನ್ನು ದಾನವಾಗಿ ಪಡೆಯುತ್ತದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.