ETV Bharat / bharat

ಮಗುವಿನ ಕೆನ್ನೆ ಕಿತ್ತು ತಿಂದ ಬೀದಿನಾಯಿ.. ರಾಜಸ್ಥಾನದಲ್ಲಿ ಮಿತಿಮೀರಿದ ಶ್ವಾನ ದಾಳಿ - stray dog attack in rajasthan

ರಾಜಸ್ಥಾನದಲ್ಲಿ ಬೀದಿನಾಯಿಯೊಂದು ದಾಳಿ ಮಾಡಿ 6 ಮಕ್ಕಳನ್ನು ಗಾಯಗೊಳಿಸಿದೆ. ಮೂರು ದಿನಗಳ ಹಿಂದೆ 12 ಜನರ ಮೇಲೆ ದಾಳಿ ನಡೆದಿತ್ತು.

the-dog-attacked-6-kids-rajasthan
ಮಗುವಿನ ಕೆನ್ನೆ ಕಿತ್ತು ತಿಂದ ಬೀದಿನಾಯಿ
author img

By

Published : Nov 5, 2022, 10:01 PM IST

ಕೋಟಾ(ರಾಜಸ್ಥಾನ): ರಾಜಸ್ಥಾನದ ಕೋಟಾದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಮೂರು ದಿನಗಳ ಹಿಂದಷ್ಟೇ ಒಂದೇ ದಿನದಲ್ಲಿ 12 ಜನರ ಮೇಲೆ ದಾಳಿ ಮಾಡಿದ್ದ ನಾಯಿ, ಇಂದು 6 ಮಕ್ಕಳ ಮೇಲೆ ಎರಗಿ ತೀವ್ರ ಗಾಯಗೊಳಿಸಿದೆ. ಅದರಲ್ಲಿ ಇಬ್ಬರು ಮಕ್ಕಳ ಮುಖಕ್ಕೆ ಕಚ್ಚಿದ್ದು, ಕೆನ್ನೆಯನ್ನು ಹರಿದು ತಿಂದಿದೆ.

ಮನೆಯ ಮುಂದೆ ಮಲಗಿಸಿದ್ದಾಗ ದಾಳಿ ಮಾಡಿದ ನಾಯಿಯೊಂದು ಒಂದೂವರೆ ವರ್ಷದ ಮಗುವಿನ ಮುಖಕ್ಕೆ ಕಚ್ಚಿದೆ. ತನ್ನ ಕೋರೆ ಹಲ್ಲಿನಿಂದ ಕೆನ್ನೆಯನ್ನೇ ಹರಿದು ಹಾಕಿದೆ. ಇನ್ನೊಂದು ಮಗುವಿನ ಮೇಲೂ ದಾಳಿ ಮಾಡಿದ ನಾಯಿ ಮುಖಕ್ಕೆ ಗಂಭೀರ ಗಾಯ ಮಾಡಿದೆ.

ತೀವ್ರ ಗಾಯಗೊಂಡಿರುವ ಮಕ್ಕಳಿಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ಲಾಸ್ಟಿಕ್​ ಸರ್ಜರಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಕೋಟಾದಲ್ಲಿ 12 ಜನರ ಮೇಲೆ ಬೀದಿ ನಾಯಿ ದಾಳಿ ನಡೆಸಿತ್ತು. ಮನೆಗಳ ಹೊರಗೆ ಕುಳಿತಿದ್ದ ಮಹಿಳೆಯರು ಮತ್ತು ಮಕ್ಕಳನ್ನು ನಾಯಿ ಸರಣಿಯಾಗಿ ಕಚ್ಚಿತ್ತು.

ಓದಿ: ಸೇನಾ ವಾಹನಕ್ಕೆ ಅಪ್ಪಳಿಸಿದ ಟ್ರಕ್​.. ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ, ಐವರಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.