ಅಹ್ಮದ್ನಗರ(ಶಿರಡಿ): ಶಿರಡಿ ಸಾಯಿಬಾಬಾಗೆ ಮಂಗಳಸೂತ್ರವನ್ನು ಬದಲಿಸಿ ಚಿನ್ನದ ನೆಕ್ಲೇಸ್ ಅರ್ಪಿಸುವ ಮೂಲಕ ಮಹಿಳೆಯೊಬ್ಬರು ಭಕ್ತಿ ಮೆರೆದಿದ್ದಾರೆ. ಭಾನುವಾರ ಶಿರಡಿ ಮಂದಿರಕ್ಕೆ ಭೇಟಿ ನೀಡಿದ್ದ, ಮಾಜಿ ಐಎಎಸ್ ಅಧಿಕಾರಿ ಅವರ ಪತ್ನಿಯಾಗಿರುವ ಹೈದರಾಬಾದ್ ನಿವಾಸಿ ಕಲ್ಯಾಣಿ ಪೋಲಾವರ್ನಮ್ ಅವರು ತಮ್ಮ ಖುಷಿಯಿಂದಲೇ 15 ತೊಲ ಚಿನ್ನದ ಸರವನ್ನು ದೇವರಿಗೆ ಅರ್ಪಿಸಿದ್ದಾರೆ.
ಕಲ್ಯಾಣಿ ಅವರು ತಮ್ಮ ಪತಿಯ ಹರಕೆಯನ್ನು ತೀರಿಸಲು ತಮ್ಮ ಬಳಿಯಿದ್ದ 15 ತೊಲೆ ಮಂಗಳಸೂತ್ರದಿಂದ ಬಂಗಾರದ ನೆಕ್ಲೇಸ್ಅನ್ನು ಮಾಡಿಸಿ ಸಾಯಿಬಾಬಾ ಸಂಸ್ಥಾನಕ್ಕೆ ಅರ್ಪಿಸಿದ್ದಾರೆ. ಈ ಚಿನ್ನದ ಬೆಲೆ 7 ಲಕ್ಷದ 10 ರೂಪಾಯಿ ಎಂದು ಶಿರಡಿ ಸಂಸ್ಥಾನದವರು ತಿಳಿಸಿದ್ದಾರೆ.
ಕೋವಿಡ್ಗೆ ಬಲಿಯಾಗಿದ್ದ ಪತಿ.. ಕಲ್ಯಾಣಿ ಅವರ ಪತಿ ಪೋಲಾವರ್ನಮ್ ಅವರು ಪಶ್ಚಿಮ ಬಂಗಾಳದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಸೋಂಕಿನಿಂದ ಅವರು ಸಾವನ್ನಪ್ಪಿದ್ದರು. ತಮ್ಮ ಪತಿ ಅಗಲಿಕೆ ಬಳಿಕ ಕಲ್ಯಾಣಿ ಅವರು ಮಂಗಳಸೂತ್ರವನ್ನು ಅಕ್ಕಸಾಲಿಗರ ಬಳಿ ಕೊಟ್ಟು ಅದನ್ನು ಗೋಲ್ಡ್ ನೆಕ್ಲೇಸ್ ಆಗಿ ಬದಲಿಸಿದ್ದರು. ಭಾನುವಾರ ತಮ್ಮ ಸ್ವಇಚ್ಛೆಯಿಂದ ಶಿರಡಿ ಸಾಯಿಬಾಬಾ ಅವರ ಸನ್ನಿಧಾನಕ್ಕೆ ಅದನ್ನು ಅರ್ಪಿಸಿದ್ದಾರೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ(CEO) ಭಾಗ್ಯಶ್ರೀ ಬನಾಯತ್ ಮಾಹಿತಿ ನೀಡಿದ್ದಾರೆ.
(ಓದಿ: ವೈದ್ಯೋ ನಾರಾಯಣೋ ಹರಿ.. 10 ಸಾವಿರ ವೆಚ್ಚದ ಆಪರೇಷನ್ ಕೇವಲ 50 ರೂ.ಗೆ! )