ETV Bharat / bharat

2021ರಲ್ಲಿ ಭಾರತಕ್ಕಿರುವ ಸವಾಲುಗಳೇನು?

author img

By

Published : Dec 27, 2020, 6:46 PM IST

ಆರ್ಥಿಕತೆಯ ಮಂದಗತಿ ಬೆಳವಣಿಗೆ, ನಿರುದ್ಯೋಗ ಸಮಸ್ಯೆ ಹೆಚ್ಚಳ.. ಪ್ರಸ್ತುತ ಭಾರತದ ಮುಂದಿರುವ ಪ್ರಮುಖ ಸವಾಲುಗಳು. ಇವುಗಳ ಮಧ್ಯೆ ಕೊರೊನಾ ಮತ್ತು ಅಂತಾರಾಷ್ಟ್ರೀಯ ಗಡಿ ಬಿಕ್ಕಟ್ಟು ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 2021ರಲ್ಲಿ ಭಾರತಕ್ಕಿರುವ ಪ್ರಮುಖ ಸವಾಲುಗಳು ಈ ಕೆಳಗಿನಂತಿವೆ.

ಭಾರತಕ್ಕಿರುವ ಸವಾಲುಗಳು
ಭಾರತಕ್ಕಿರುವ ಸವಾಲುಗಳು

ವಿದೇಶಾಂಗ ವ್ಯವಹಾರ

ಭಾರತ-ಚೀನಾ ಬಿಕ್ಕಟ್ಟು:

- ಮೇ. 2020 ರಿಂದ ಭಾರತ ಮತ್ತು ಚೀನಾ ನಡುವೆ ಗಡಿ ವಿವಾದಗಳು ನಡೆಯುತ್ತಿವೆ.

- ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಸಾವನ್ನಪ್ಪಿದರು. ಅಂದಿನಿಂದ ಈ ವಿವಾದ ಮತ್ತಷ್ಟು ತೀವ್ರವಾಯಿತು.

- ಸೈಬರ್ ಸುರಕ್ಷತೆಯ ದೃಷ್ಟಿಯಿಂದ ಚೀನಿ ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಭಾರತ ಚೀನಾದ ಮೇಲೆ ಪ್ರತೀಕಾರ ತೀರಿಸಿಕೊಂಡಿತು. ಭಾರತದ ಈ ನಿರ್ಧಾರವನ್ನು ಯುಎಸ್​ ಕೂಡ ಬೆಂಬಲಿಸಿತು.

- ಭಾರತ ಮತ್ತು ಚೀನಾ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿವೆ. ಆದಾಗ್ಯೂ ಇಲ್ಲಿಯವರೆಗೆ ಯಾವುದೇ ದೃಢವಾದ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ.

ರಷ್ಯಾ:

- ಭಾರತವು ತನ್ನ ‘ಚೀನಾ ವಿರೋಧಿ’ ಕಾರ್ಯಸೂಚಿಯಲ್ಲಿ ಪಾಶ್ಚಿಮಾತ್ಯರ ‘ವಸ್ತು’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಟೀಕಿಸಿದ್ದಾರೆ.

- ಭಾರತದೊಂದಿಗಿನ ರಷ್ಯಾದ ಸಂಬಂಧವನ್ನು ಹಾಳುಮಾಡಲು ಬೇರೆ ದೇಶಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.

- ಯುಎಸ್​ಗೆ ಭಾರತ ಹೆಚ್ಚು ಹತ್ತಿರವಾಗುತ್ತಿದ್ದಂತೆ ರಷ್ಯಾದೊಂದಿಗಿನ ಸಂಬಂಧ ಕ್ಷೀಣಿಸುತ್ತಾ ಬಂದಿದ್ದು, ರಷ್ಯಾ, ಚೀನಾ ಹಾಗೂ ಪಾಕಿಸ್ತಾನ ಹತ್ತಿರವಾಗತೊಡಗಿದವು.

ಭಾರತ-ನೇಪಾಳ ಗಡಿ ಬಿಕ್ಕಟ್ಟು

- ಭಾರತ ಮತ್ತು ನೇಪಾಳದ ಗಡಿ ಪ್ರದೇಶಗಳಾದ ಕಲಾಪಣಿ, ಲಿಂಪಿಯಾಧುರಾ ಮತ್ತು ಲಿಪುಲೆಖ್ ಪ್ರದೇಶಗಳನ್ನು ನೇಪಾಳ ತನ್ನ ನಕ್ಷೆಯಲ್ಲಿ ಸೇರಿಸಿಕೊಂಡಿದೆ. ನೇಪಾಳದ ಈ ನಿರ್ಣಯವೂ ವಿವಾದಾಸ್ಪದವಾಗಿದೆ. ಮತ್ತು ಅಂದಿನಿಂದ ಎರಡೂ ದೇಶದ ಸರ್ಕಾರಗಳು ದೃಢವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿವೆ.

- ಕಲಾಪಣಿ ಮತ್ತು ಇತರ ಭಾರತೀಯ ಪ್ರದೇಶಗಳು ನೇಪಾಳ ತನ್ನ ವ್ಯಾಪ್ತಿಗೆ ಬರುತ್ತವೆ ಎಂದು ವಾದಿಸುತ್ತಿದೆ. ನೇಪಾಳದ ಈ ನಿರ್ಧಾರವು ಎರಡು ದೇಶಗಳ ನಡುವಿನ ಸಂಬಂಧವನ್ನು ಹಾಳುಮಾಡುತ್ತಿದೆ.

ಭಾರತ-ಬಾಂಗ್ಲಾದೇಶ ಮತ್ತು ವಲಸಿಗರ ಸಮಸ್ಯೆಗಳು

- ವಲಸಿಗರು ಮತ್ತು ನಿರಾಶ್ರಿತರನ್ನು ಪುನಃ ಬಾಂಗ್ಲಾದೇಶಕ್ಕೆ ಕಳುಹಿಸುವ ಸಂದರ್ಭದಲ್ಲಿ ಅದು ನಿರಾಕರಿಸಿದೆ. ಇದರಿಂದಾಗಿ ಎರಡೂ ದೇಶಗಳ ಸರ್ಕಾರದ ನಡುವಿನ ಸಂಬಂಧವು ಹಾಳಾಗುತ್ತಿದೆ.

- ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಉದ್ದೇಶಿತ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಇವು ಕೂಡ ನೆರೆಹೊರೆಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಿವೆ.

ಭಾರತ-ಯುಎಸ್ ನಡುವಿನ ಸಂಬಂಧ

- ಸಿಎಎ ನಂತರ ಭಾರತದ ಪ್ರಭಾವವು ಹೊಸ ತಿರುವು ಪಡೆದುಕೊಂಡಿದೆ. ಶ್ರೀಮತಿ ಪ್ರಮಿಲಾ ಜಯಪಾಲ್​​ ಇರುವ ಯುಎಸ್ ಹೌಸ್ ಫಾರಿನ್ ಅಫೇರ್ಸ್ ಕಮಿಟಿ (ಎಚ್‌ಎಫ್‌ಎಸಿ) ಯೊಂದಿಗಿನ ಸಭೆಗಳನ್ನು ಜೈಶಂಕರ್ ಅವರು ರದ್ದುಗೊಳಿಸಿದ್ದಾರೆ. ಇದರಿಂದ ಅಮೆರಿಕಾ ಭಾರತದ ಸಂಬಂಧ ಸ್ವಲ್ಪಮಟ್ಟಿಗೆ ಹದಗೆಟ್ಟಿದೆ.

- ಪ್ರಧಾನಿ ಮೋದಿಯವರ “ಅಬ್ ಕಿ ಬಾರ್ ಟ್ರಂಪ್ ಸರ್ಕಾರ್” ಎಂಬ ಹೇಳಿಕೆಯಿಂದ ಡೆಮೋಕ್ರಾಟ್​ಗಳು ಕೋಪಗೊಂಡರು.

- ಇದೆಲ್ಲದರ ನಡುವೆಯೂ ಜೋ ಬೈಡೆನ್ ಭಾರತಕ್ಕೆ ಬೆಂಬಲವನ್ನು ಸೂಚಿಸಿದ್ದು, ಎನ್ಆರ್​ಐಗಳ ಜನಸಂಖ್ಯೆಯು ಹೆಚ್ಚಾಗುವುದರೊಂದಿಗೆ ಅಮೆರಿಕದಲ್ಲಿ ಭಾರತ ನೀತಿಯ ಸಮೀಕರಣವನ್ನು ಅರ್ಥಮಾಡಿಕೊಂಡಿದ್ದಾರೆ.

- ಬೈಡೆನ್ ಅಮೆರಿಕದ ಅಧ್ಯಕ್ಷರಾದ ನಂತರ, ಅನಿವಾಸಿ ಭಾರತೀಯರು ಮತ್ತು ಭಾರತಕ್ಕೆ ಸಂಬಂಧಿಸಿದ ಇತರ ವಿಷಯಗಳಿಗೆ ಸಂಬಂಧಿಸಿದ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ಭಾರತ ಮತ್ತು ಇರಾನ್ ಸಂಬಂಧ

- ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದಾಗಿ ಟೆಹ್ರಾನ್ 2020 ರ ಜುಲೈನಲ್ಲಿ ಮಹತ್ವಾಕಾಂಕ್ಷೆಯ ಚಬಹಾರ್ ಬಂದರು ರೈಲ್ವೆ ಯೋಜನೆಯಿಂದ ಭಾರತವನ್ನು ಕೈಬಿಟ್ಟಿತು. ಭಾರತವು ಯುಎಸ್ ಮತ್ತು ಪಶ್ಚಿಮಕ್ಕೆ ತುಂಬಾ ಹತ್ತಿರವಾಗಿದೆ. ಅಲ್ಲದೇ ಇರಾನ್ ಮತ್ತು ಚೀನಾದೊಂದಿಗಿನ ಸಂಬಂಧವೂ ಕಡಿಮೆಯಾಗಿದೆ ಎಂದು ಇರಾನಿನ ತಜ್ಞರು ಹೇಳಿದ್ದಾರೆ. ಹಾಗಾಗಿ ಈ ಯೋಜನೆಯನ್ನು ಚೀನಾಕ್ಕೆ ವರ್ಗಾಯಿಸಲಾಯಿತು.

- ಯೋಜನೆಯು 2022ರ ಮಾರ್ಚ್‌ ವೇಳೆಗೆ ಅಂತ್ಯಗೊಳ್ಳಲಿದ್ದು, ಭಾರತದ ಯಾವುದೇ ನೆರವಿಲ್ಲದೆಯೇ ಇರಾನ್‌ ರೈಲ್ವೆ ಇಲಾಖೆಯು ರೈಲು ಮಾರ್ಗ ನಿರ್ಮಾಣ ಕೈಗೊಳ್ಳಲಿದೆ. ಇರಾನ್‌ ರಾಷ್ಟ್ರೀಯ ಅಭಿವೃದ್ಧಿ ನಿಧಿಯಿಂದ ಈ ಯೋಜನೆಗೆ ಆ ದೇಶವು 400 ದಶಲಕ್ಷ ಡಾಲರ್‌ ಹಣವನ್ನು ಬಳಸಿಕೊಳ್ಳಲಿದೆ ಎಂದು ವರದಿಯಾಗಿದೆ.

- ಗ್ವಾದರ್ ಬಂದರನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನಕ್ಕೆ ಸಹಾಯ ಮಾಡುವ ಮೂಲಕ ಚೀನಾ ಅರೇಬಿಯನ್ ಸಮುದ್ರದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ. ಗ್ವಾದರ್ ಬಂದರು, ರಸ್ತೆಯ ಮೂಲಕ ಚಬಹಾರ್‌ನಿಂದ 400 ಕಿ.ಮೀ ಮತ್ತು ಸಮುದ್ರದಿಂದ 100 ಕಿ.ಮೀ. ಇದೆ.

ಕ್ವಾಡ್​​​​​

- ಭಾರತವು ಆರ್‌ಸಿಇಪಿಯಿಂದ ಹಿಂದೆ ಸರಿದ ನಂತರ, ಆಸ್ಟ್ರೇಲಿಯಾದೊಂದಿಗೆ ಭಾರತದ ಸಂಬಂಧವು ಚೆನ್ನಾಗಿದೆ.

- ಭಾರತ ಮತ್ತು ಆಸ್ಟ್ರೇಲಿಯಾ ದ್ವಿಪಕ್ಷೀಯ ಮಾತುಕತೆಗಳಲ್ಲಿ ತೊಡಗಿರುವುದರಿಂದ ಮುಕ್ತ ವ್ಯಾಪಾರ ಒಪ್ಪಂದವು ನಿಧಾನವಾಗಿ ಬೆಳೆಯುತ್ತಿದೆ.

- ಕಳೆದ ತಿಂಗಳು ಕ್ವಾಡ್​​ ನೌಕಾಪಡೆಯೂ ಸಮರಭ್ಯಾಸವನ್ನು ಭಾರತ, ಯುಎಸ್ಎ, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವೆ ಏರ್ಪಡಿಸಿದ್ದು, ಇದರಿಂದ ಭದ್ರತಾ ಸಂಬಂಧಗಳಳು ಮತ್ತಷ್ಟು ಗಟ್ಟಿಯಾಗಿವೆ. ಆದರೆ ಈ ಸಹಕಾರವು ಯುಎಸ್-ಚೀನಾ ಸಂಬಂಧದ ಸ್ಥಿತಿಯ ಮೇಲೆ ಹೆಚ್ಚು ಅನಿಶ್ಚಿತವಾಗಿದೆ.

- ಲುಕ್ ಈಸ್ಟ್ ನೀತಿಯನ್ನು ಗಮನದಲ್ಲಿಟ್ಟುಕೊಂಡು ಪಾಶ್ಚಿಮಾತ್ಯ ಶಕ್ತಿಗಳೊಂದಿಗಿನ ಸಂಬಂಧದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಭಾರತವು ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಭಾರತ-ಕೆನಡಾ ಸಂಬಂಧ

- ಭಾರತೀಯ ರೈತರನ್ನು ಬೆಂಬಲಿಸಿ ಕೆನಾಡದ ಪ್ರಧಾನಿ ಟ್ರೂಡೊ ಅವರು ನೀಡಿರುವ ಹೇಳಿಕೆ ಎರಡು ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರಿದ್ದು, ಇದು ಭಾರತದ ಆಂತರಿಕ ವಿಷಯ ಎಂದು ಹೇಳುವ ಮೂಲಕ ಭಾರತ ತಿರುಗೇಟು ನೀಡಿದೆ.

ಕೊರೊನಾ ವೈರಸ್

- ಕೊರೊನಾಗೆ ಲಸಿಕೆಯನ್ನು ಎಲ್ಲ ದೇಶಗಳು ತಯಾರಿಸುತ್ತಿದ್ದು, ಕೆಲವು ಲಸಿಕೆಗಳನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಪಡೆದುಕೊಂಡಿವೆ. ಇನ್ನು ಕೆಲವು ಲಸಿಕೆಗಳು ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್​ ಟೆಸ್ಟ್​ ನಡೆಸುತ್ತಿವೆ.

- ಲಸಿಕೆಯ ವೆಚ್ಚ ಮತ್ತು ಬೆಲೆಯನ್ನು ನಿಯಂತ್ರಿಸುವುದು ಒಂದು ದೊಡ್ಡ ಸವಾಲಾಗಿದೆ. ಕೋಲ್ಡ್ ಚೈನ್ ಭಾರತಕ್ಕೆ ದೊಡ್ಡ ಸಮಸ್ಯೆಯಾಗಿದೆ. ಲಸಿಕೆಯನ್ನು ನಿರ್ವಹಿಸಲು ಕೋಲ್ಡ್ ಚೈನ್ ಶೇಖರಣಾ ಸೌಲಭ್ಯಗಳ ಸಂಖ್ಯೆಯು ದೇಶದಲ್ಲಿ ಹೆಚ್ಚಿಲ್ಲ. ಕೋಲ್ಡ್ ಚೈನ್ ಸೌಲಭ್ಯವನ್ನು ಹೆಚ್ಚಿಸುವುದು ಸರ್ಕಾರಿ ಮತ್ತು ಖಾಸಗಿ ಉಗ್ರಾಣ ಸಂಸ್ಥೆಗಳಿಗೆ ಸವಾಲನ್ನು ಒಡ್ಡುತ್ತದೆ.

- ಸರಿಯಾದ ಲಾಜಿಸ್ಟಿಕ್ಸ್ ಕೊರತೆಯಿಂದಾಗಿ ಗ್ರಾಮೀಣ ಜನಸಂಖ್ಯೆಗೆ ಲಸಿಕೆ ತಲುಪಿಸುವುದು ಕಷ್ಟಕರವಾಗಿದೆ. ಸರಬರಾಜು ಸರಪಳಿಯಲ್ಲಿ ಲಸಿಕೆ ತಲುಪಿಸುವಲ್ಲಿ ಸಮಯದ ನಿರ್ಬಂಧವು ಒಂದು ಸವಾಲನ್ನು ಒಡ್ಡುತ್ತದೆ.

- ತರಬೇತಿ ಪಡೆದ ಆರೋಗ್ಯ ವೃತ್ತಿಪರರ ಸಂಖ್ಯೆಯೂ ಅಗತ್ಯ. ಮಕ್ಕಳಿಗೆ ವ್ಯಾಕ್ಸಿನೇಷನ್​​ ಹಾಕುವುದು ಕೂಡ ಒಂದು ಸಮಸ್ಯೆಯಾಗಿದೆ. ಹೀಗಾಗಿ ಲಸಿಕೆ ನೀಡಲು ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರ ತಂಡವನ್ನು ರಚಿಸುವುದು ಆರೋಗ್ಯ ಕ್ಷೇತ್ರಕ್ಕೆ ಒಂದು ಚಾಲೆಂಜ್​ ಆಗಿದೆ.

2021 ಜನಗಣತಿ

- ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ 2020 ಮತ್ತು 2021ರ ಜನಗಣತಿಯೂ ವಿಳಂಬವಾಗಬಹುದು. ಸರ್ಕಾರವು ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದಿತ್ತು. 2020 ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಮನೆ ಪಟ್ಟಿ ಮತ್ತು ವಸತಿ ಜನಗಣತಿಯನ್ನು ನಡೆಸಲಾಗುವುದು ಎಂದು ಹೇಳಿತ್ತು. ಆದ್ರೆ ಇದು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. ಹಾಗಾಗಿ ಫೆಬ್ರವರಿ 2021 ರಲ್ಲಿ ಜನಗಣತಿ ನಡೆಯಲಿದೆ.

ಆರ್ಥಿಕತೆ ಮತ್ತು ಕಾರ್ಮಿಕರು

ಕೆಂಪು ವಲಯಗಳಾಗಿ ವರ್ಗೀಕರಿಸಲಾದ 130 ಜಿಲ್ಲೆಗಳ ರಾಷ್ಟ್ರೀಯ ಆರ್ಥಿಕ ಚಟುವಟಿಕೆ ಕೇವಲ ಶೇ. 41ರಷ್ಟಿದೆ. ಕೈಗಾರಿಕಾ ಉತ್ಪಾದನೆಯೂ ಶೇ.38 ಮತ್ತು ಹೆಚ್ಚು ಕೈಗಾರಿಕೀಕರಣಗೊಂಡ ಪ್ರದೇಶಗಳಾಗಿವೆ. ಈ ಪ್ರದೇಶಗಳಲ್ಲಿ ಕಡಿಮೆ ಆರ್ಥಿಕ ಚಟುವಟಿಕೆ ಇರುವುದರಿಂದ ಆದಾಯ ಕೂಡ ಕಡಿಮೆ ಇದೆ.

  • ನಿರುದ್ಯೋಗ ಸಮಸ್ಯೆ ಹೆಚ್ಚಳ
  • ಕಾರ್ಮಿಕರ ಕೊರತೆ
  • ಹಣದ ಹೆಚ್ಚಿನ ಹರಿವು
  • ಹಣಕಾಸಿನ ಕೊರತೆ
  • ಖಾಸಗಿ ಅಂತಿಮ ಬಳಕೆ ವೆಚ್ಚಗಳು
  • ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ
  • ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ
  • ಗ್ರಾಮೀಣ ಭಾರತದ ಸಾಮಾಜಿಕ ಆರ್ಥಿಕ ಸೇರ್ಪಡೆ

ಪರಿಸರ

- ಕೊರೊನಾ ವೈರಸ್​​ ಹಿನ್ನೆಲೆ ಅನೇಕ ಕಂಪನಿಗಳು ಚೀನಾದಲ್ಲಿ ತಮ್ಮ ಕಚೇರಿಗಳನ್ನು ಮುಚ್ಚಿದ ನಂತರ ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿವೆ. ಇಂತಹ ಸನ್ನಿವೇಶದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಕಾಯ್ದುಕೊಳ್ಳುವುದು ಭಾರತಕ್ಕೆ ಸವಾಲಾಗಿ ಪರಿಣಮಿಸುತ್ತದೆ. ಅಲ್ಲದೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಎಫ್‌ಡಿಐಯನ್ನು ಶೇ.49 ರಿಂದ ಶೇ.74ಕ್ಕೆ ಏರಿಸಲಾಯಿತು.

- ಪರಿಸರ ನಾಶದಿಂದ ಭಾರತಕ್ಕೆ ವರ್ಷಕ್ಕೆ 80 ಬಿಲಿಯನ್ ಡಾಲರ್​​ಗಳಷ್ಟು ಖರ್ಚಾಗುತ್ತದೆ. ಇದು ಜಿಡಿಪಿಯ ಸುಮಾರು ಶೇ.5.7ರಷ್ಟಿದೆ. 178 ದೇಶಗಳನ್ನು ಒಳಗೊಂಡು ನಡೆಸಿದ ಪರಿಸರ ಸಮೀಕ್ಷೆಯಲ್ಲಿ ಭಾರತವೂ 155ನೇ ಸ್ಥಾನದಲ್ಲಿದೆ. ವಿಶ್ವದ 20ಕ್ಕೂ ಹೆಚ್ಚು ಕಲುಷಿತ ನಗರಗಳಲ್ಲಿ 13 ನಗರಗಳು ಭಾರತದಲ್ಲಿವೆ ಎಂದು ಸಮೀಕ್ಷೆಯು ಹೇಳುತ್ತದೆ.

- ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಾಲಯದಲ್ಲಿ ಹಿಮನದಿಗಳ ಕರಗುವಿಕೆಯು ಉತ್ತರ ಭಾರತದಲ್ಲಿನ ಬರ ಮತ್ತು ಪ್ರವಾಹಕ್ಕೆ ಮುಖ್ಯ ಕಾರಣವೆಂದು ಉಲ್ಲೇಖಿಸಲಾಗಿದೆ.

ಕರಾವಳಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯವು ಫೈಟೊಪ್ಲಾಂಕ್ಟನ್‌ನ ಸಾಂದ್ರತೆಯನ್ನು ಕಡಿಮೆಗೊಳಿಸಿದೆ.

ಕೃಷಿ

ಕೃಷಿ ದೇಶಕ್ಕೆ ಒಂದು ಪ್ರಮುಖ ಸವಾಲಾಗಿ ಪರಿಣಮಿಸಿದೆ. ಭಾರತೀಯ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆಗಳ ಮೇಲೆ ಅವಲಂಬಿತರಾಗಿದ್ದಾರೆ. ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರ ಅನೇಕ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಬಳಸಿಕೊಳ್ಳುವಂತೆ ರೈತರಿಗೆ ಪ್ರೋತ್ಸಾಹಿಸುತ್ತಿದೆ. ಸರ್ಕಾರದ ಅನೇಕ ಯೋಜನೆಗಳು ಮತ್ತು ನೀತಿಗಳು ರೈತರ ಉತ್ಪನ್ನಗಳನ್ನು ಹೆಚ್ಚು ಮೌಲ್ಯಯುತವಾಗಿ ಪರಿವರ್ತಿಸುವತ್ತ ಗಮನ ಹರಿಸುತ್ತವೆ.

ಕೃಷಿ ಮಸೂದೆ 2020 ಮತ್ತು ರೈತರ ಪ್ರತಿಭಟನೆಗಳು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಕೃಷಿ ಮಸೂದೆಗಳನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ರೈತರು ಇವು ಬೇಡ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ಮಸೂದೆಗಳು ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಾಗಿವೆ.

ರಾಜಕೀಯ

ದೇಶವು 4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವಾದ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸೋಂ, ಕೇರಳ ಮತ್ತು ಪುದುಚೇರಿಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದರಿಂದ 2021 ರಲ್ಲಿ ಭಾರತವೂ ಚುನಾವಣೆಗೆ ಸಂಬಂಧಿಸಿದಂತೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ತಮಿಳುನಾಡಿನ 3, ಮಣಿಪುರದ 7, ರಾಜಸ್ಥಾನದ 3, ಕರ್ನಾಟಕದ 2, ಮಧ್ಯಪ್ರದೇಶದ 1, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ತೆಲಂಗಾಣ ಮತ್ತು ಜಾರ್ಖಂಡ್ ಕ್ಷೇತ್ರಗಳು ತಲಾ 20 ರಲ್ಲಿ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.