ETV Bharat / bharat

ಆ್ಯಪ್​ ಸಹಾಯದಿಂದ 2019 ರಲ್ಲಿ ಕಳ್ಳತನವಾಗಿದ್ದ ಬುಲೆಟ್​ ಬೈಕ್ ಪತ್ತೆ!: ಅದು ಹೇಗೆ?! - A bullet motorcycle that was stolen in 2019

ಮೂರು ವರ್ಷಗಳ ಹಿಂದೆ ಕಳ್ಳತನವಾಗಿದ್ದ ಬೈಕ್​ ಪೊಲೀಸ್​ ಆ್ಯಪ್​ ಮೂಲಕ ಪತ್ತೆಯಾಗಿದೆ.

ಆ್ಯಪ್​ ಸಹಾಯದಿಂದ 2019 ರಲ್ಲಿ ಕಳ್ಳತನವಾಗಿದ್ದ ಬುಲೆಟ್​ ಬೈಕ್ ಪತ್ತೆ

author img

By

Published : Jul 18, 2022, 5:21 PM IST

ಅನಕಾಪಲ್ಲಿ (ಆಂಧ್ರಪ್ರದೇಶ) : 2019 ರಲ್ಲಿ ಕಳ್ಳತನವಾಗಿದ್ದ ಬುಲೆಟ್ ಮೋಟಾರ್ ಸೈಕಲ್ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದೆ. ಅದು ಹೇಗೆ ಸಾಧ್ಯವಾಯಿತು ಎಂದು ನೀವು ತಿಳಿದರೆ ಬೆಚ್ಚಿ ಬೀಳುತ್ತಿರಾ.

ತಂತ್ರಜ್ಞಾನಗಳ ಬಳಕೆಯಂತೂ ಈಗ ಎಲ್ಲ ಕಡೆ ಆವರಿಸಿಬಿಟ್ಟಿದೆ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಈಗ ಹಲವು ಪ್ರಕರಣಗಳ ನಿಗೂಢತೆಯನ್ನು ಭೇದಿಸಲು ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸಿದ್ದಾರೆ. ಈ ಕ್ರಮದಲ್ಲಿ ಪೊಲೀಸರು ಅನಿರೀಕ್ಷಿತವಾಗಿ 3 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಬುಲೆಟ್ ದ್ವಿಚಕ್ರವಾಹನವನ್ನು ಕಂಡು ಹಿಡಿದಿದ್ದಾರೆ. ಪೊಲೀಸ್ ಅಪ್ಲಿಕೇಶನ್ ಇದಕ್ಕೆ ಸಹಾಯ ಮಾಡಿದೆ.

ಅನಕಾಪಲ್ಲಿ ಜಿಲ್ಲೆ ನರಸೀಪಟ್ಟಣ ಎಸ್‌ಎಸ್ ಲಕ್ಷ್ಮಣ ರಾವ್ ಅವರು ತಮ್ಮ ತಂಡದೊಂದಿಗೆ ಶನಿವಾರ ಅಬಿದ್‌ ಕೂಡಲಿಯಲ್ಲಿ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆಲೂರಿ ಜಿಲ್ಲೆಯ ಚಿಂತಪಲ್ಲಿಯ ಯುವಕ ಸೀತಾರಾಮರಾಜು ಬುಲೆಟ್ ಗಾಡಿಯಲ್ಲಿ ಬಂದಿದ್ದಾನೆ. ಅವನನ್ನು ತಡೆದು ದಾಖಲೆಗಳನ್ನು ತೋರಿಸಲು ಕೇಳಲಾಯಿತು.

ಆದರೆ ದಾಖಲೆ ಇಲ್ಲದ ಕಾರಣ ಯುವಕ ಸುಮ್ಮನೆ ನಿಂತಿದ್ದಾನೆ. ನಂತರ ಪೊಲೀಸರು ಇ - ಚಲನ್‌ನಲ್ಲಿ 'ಬೋಲೋ ಆಯ್ಕೆ' ಕ್ಲಿಕ್ ಮಾಡಿದ್ದಾರೆ. ತಕ್ಷಣ ಅಲಾರಾಂ ಮೊಳಗಿದೆ. ಆಗ ಎಚ್ಚೆತ್ತ ಪೊಲೀಸರು, ತಕ್ಷಣ ವಿವರಗಳನ್ನು ಪರಿಶೀಲಿಸಿದಾಗ, ಎಪಿ 05 ಡಿಆರ್ 2755 ಸಂಖ್ಯೆಯ ಬುಲೆಟ್ ಅನ್ನು 2019 ರಲ್ಲಿ ಕಳವು ಮಾಡಿರುವುದು ಕಂಡು ಬಂದಿದೆ.

ಕಾಕಿನಾಡ ಜಿಲ್ಲೆಯ ತುಣಿಯಲ್ಲಿ ತನ್ನ ವಾಹನ ಕಳೆದು ಹೋಗಿದೆ ಎಂಬ ಮಾಲೀಕರ ದೂರಿನ ಪ್ರತಿ ಮೊಬೈಲ್ ಪರದೆಯಲ್ಲಿ ಕಾಣಿಸಿಕೊಂಡಿದೆ. ಕೂಡಲೇ ಅದನ್ನು ಜಪ್ತಿ ಮಾಡಿ ಪೊಲೀಸರಿಗೆ ದೂರು ನೀಡಲಾಗಿದೆ. ಇಷ್ಟು ವರ್ಷಗಳ ನಂತರ ಆ್ಯಪ್ ಸಹಾಯದಿಂದ ಬೈಕ್ ಕಂಡು ಪೊಲೀಸರು ಅಚ್ಚರಿಗೊಂಡಿದ್ದಾರೆ.

ಆ ಯುವಕ ಆ ಬೈಕ್ ಕದ್ದಿದ್ದನೇ? ಅಥವಾ ಬೇರೆ ಯಾರಾದರೂ ಕದ್ದು ಇವರಿಗೆ ಮಾರಾಟ ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: 10 ವರ್ಷಗಳ ಹಿಂದಿನ ಮರ್ಡರ್ ಮಿಸ್ಟ್ರಿ ಭೇದಿಸಿದ ಪೊಲೀಸರು: ಬಾನಲ್ಲೇ ಮಧುಚಂದ್ರಕೆ ಸಿನಿಮಾ ಸ್ಟೈಲ್​ನಲ್ಲೇ ಹತ್ಯೆ !

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.