ವಾರಂಗಲ್(ತೆಲಂಗಾಣ) : ಸರ್ಕಾರಿ ಜವಳಿ ನಿಗಮದ (ಟೆಸ್ಕೋ) ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ವಾರಂಗಲ್ ಜಿಲ್ಲೆಯ ಗೀಸುಕೊಂಡ ಮಂಡಲದ ಧರ್ಮಾರಮ್‌ನಲ್ಲಿ ನಡೆದಿದೆ. ಇದ್ದಕ್ಕಿದ್ದಂತೆ ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮಿನ ಗೋಡೆಗಳು ಕುಸಿದಿರುವುದಾಗಿ ತಿಳಿದುಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಗ್ನಿ ಅವಘಡದಿಮದಾಗಿ ಸುಮಾರು 30 ಕೋಟಿ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಎರಡು ವರ್ಷಗಳಿಂದ ಗೋದಾಮುಗಳಲ್ಲಿ ಕಾರ್ಪೆಟ್‌ಗಳು, ಟವೆಲ್‌ಗಳು, ಬೆಡ್‌ಶೀಟ್‌ಗಳು ಮತ್ತು ಶೂಟಿಂಗ್ ಮತ್ತು ಸೆಟ್ಟಿಂಗ್ ಬಟ್ಟೆಗಳನ್ನು ಸಂಗ್ರಹಿಸಲಾಗಿತ್ತು ಎಂದು ಟೆಸ್ಕೋ ಸಿಬ್ಬಂದಿ ಹೇಳಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಪಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ : ಗಂಗಾನದಿ ದಡದಲ್ಲಿ ಓದುಗರ ದಂಡು.. ಪರೀಕ್ಷೆಗಳನ್ನು ಎದುರಿಸಲು ಹೇಗಿದೆ ನೋಡಿ ಸ್ಪರ್ಧಾರ್ಥಿಗಳ ಪರಿಶ್ರಮ!