ನವದೆಹಲಿ: ಕಣಿವೆ ನಾಡು ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಉಗ್ರ ಚಟುವಟಿಕೆ ಹೆಚ್ಚಾಗಿದ್ದು, ಭಾರತೀಯ ಯೋಧರು, ಪೊಲೀಸ್ ಹಾಗೂ ಎನ್ಐಎ ಅವರ ಹೆಡೆಮುರಿ ಕಟ್ಟುವ ಕೆಲಸ ಮಾಡ್ತಿದೆ. ಸದ್ಯ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿ ಐವರು ಉಗ್ರರ ಸಹಚರರ ಬಂಧನ ಮಾಡಿದೆ.
ಜಮ್ಮು- ಕಾಶ್ಮೀರದ ಶ್ರೀನಗರ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಶೋಧಕಾರ್ಯ ನಡೆಸಿದ ವೇಳೆ ಹನೀಫ್, ಹಫೀಜ್, ಓವೈಸ್ ದಾರ್, ಮತೀನ್ ಭಟ್ ಮತ್ತು ಆರಿಫ್ ಫಾರೂಕ್ ಭಟ್ನನ್ನ ಬಂಧನ ಮಾಡಲಾಗಿದೆ. ಇವರೆಲ್ಲರೂ ಲಷ್ಕರಿ-ಇ-ತೊಯ್ಬಾ, ಜೈಶ್-ಇ-ಮೊಹ್ಮದ್,ಹಿಜ್ಬಾ ಉಲ್ ಮುಜಾಹಿದ್ದೀನ್, ಅಲ್ ಬದ್ರಾ ಸೇರಿದಂತೆ ಅನೇಕ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು.
ಇದನ್ನೂ ಓದಿರಿ: ಕೋಲ್ಕತ್ತಾ ಬೌಲಿಂಗ್ ದಾಳಿಗೆ ಡೆಲ್ಲಿ ತತ್ತರ.. ಗೆಲುವಿಗೆ 136 ರನ್ ಟಾರ್ಗೆಟ್ ನೀಡಿದ ಪಂತ್ ಪಡೆ
ಭಯೋತ್ಪಾದಕ ಗುಂಪುಗಳು ದೇಶದ ಪ್ರಮುಖ ಸ್ಥಳಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದವು ಎಂಬ ಮಾಹಿತಿ ಲಭ್ಯವಾಗಿತ್ತು. ಇದಕ್ಕೆ ಸಂಬಂಂಧಿಸಿದಂತೆ ಎನ್ಐಎ ಅಕ್ಟೋಬರ್ 10ರಂದು ಪ್ರಕರಣ ದಾಖಲು ಮಾಡಿ ತನಿಖೆ ಆರಂಭ ಮಾಡಿತ್ತು. ಬಂಧಿತ ಆರೋಪಿಗಳು ಭಯೋತ್ಪಾದಕರ ಸಹಚರರಾಗಿದ್ದರು ಎಂದು ತಿಳಿದು ಬಂದಿದ್ದು, ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿದ್ದರು. ಇವರ ಬಳಿ ಕೆಲವೊಂದು ಸ್ಫೋಟಕ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಎನ್ಐಎ ತಿಳಿಸಿದೆ.